ಚಿರು ಅಗಲಿಕೆಯ ನೋವಲ್ಲೇ ಮೇಘನಾ ಸೀಮಂತ!

Meghana Raj Baby Shower: ಚಿರಂಜೀವಿ ಎಲ್ಲೂ ಹೋಗಿಲ್ಲ, ಇಲ್ಲೇ ಇದಾರೆ ಅನ್ನೋ ಪ್ರತಿ ರೂಪದಂತೆ ಚಿರು ಕಟೌಟ್ ಮೇಘನಾ ರಾಜ್ ಪಕ್ಕದಲ್ಲಿ ನಿಲ್ಲಸಲಾಗಿತ್ತು. ಆ ಮೂಲಕ ಚಿರು ಸಮ್ಮುಖದಲ್ಲೇ ಕಾರ್ಯಕ್ರಮ ನಡೀತಿದೆ ಅನ್ನೋ  ಫೀಲ್ ನಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.

Meghana Raj family

Meghana Raj family

  • Share this:
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಆಗಲಿ ನಾಲ್ಕು ತಿಂಗಳಾಗಿವೆ. ಆದರೂ ಚಿರು ಇಲ್ಲ ನೋವನ್ನ ಅಭಿಮಾನಿಗಳೇ ಸಹಿಸ್ಕೊಳೋದು ಕಷ್ಟ. ಹೀಗಿರುವಾಗ ಚಿರು ಫ್ಯಾಮಿಲಿ ಅದೆಷ್ಟು ನೋವಲ್ಲಿರಬಹುದು. ಅಷ್ಟು ಬೇಗ ಆ ನೋವು ಮರೆಯಾಗುವಂತದ್ದಲ್ಲ. ಆದರೆ ಕೆಲವೊಮ್ಮೆ ಇದೆಲ್ಲವನ್ನೂ ದಾಟಿ ಮುಂದೆ ಸಾಗುತ್ತಿರಬೇಕು. ಸದ್ಯ ಮೇಘನಾ ರಾಜ್ ಹೊಟ್ಟೆಯಲ್ಲಿ ಚಿರು ಕುಡಿ ಬೆಳೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚಿರುನಾ ರೂಪದಲ್ಲೇ ಪ್ರಪಂಚ ನೋಡಲಿದೆ.

ಹೀಗಾಗಿ ಶಾಸ್ತ್ರ ಸಂಪ್ರದಾಯದಂತೆ, ಮೇಘನಾರಿಗೆ ಸೀಮಂತ ಕಾರ್ಯವನ್ನ  ಮಾಡಲಾಗಿದೆ‌‌. ಬಹಳ ಖಾಸಾಗಿಯಾಗಿ ಈ ಸಮಾರಂಭವನ್ನ ಜೆಪಿ ನಗರದಲ್ಲಿರೋ ಮೇಘನಾ ನಿವಾಸದಲ್ಲಿ ನೆರವೇರಿಸಲಾಗಿದೆ. ಈ ವೇಳೆ ಧೃವ ಸರ್ಜಾ ಹಾಗೂ ಪ್ರೇರಣಾ, ಚಿರು ತಂದೆ ತಾಯಿ, ಮೇಘನಾ ತಂದೆ ತಾಯಿ ಸೇರಿ ಆಪ್ತರು ಕುಟುಂಬಸ್ಥರು ಹಾಜರಿದ್ದರು.

ಇನ್ನು ಚಿರಂಜೀವಿ ಎಲ್ಲೂ ಹೋಗಿಲ್ಲ, ಇಲ್ಲೇ ಇದಾರೆ ಅನ್ನೋ ಪ್ರತಿ ರೂಪದಂತೆ ಚಿರು ಕಟೌಟ್ ಮೇಘನಾ ರಾಜ್ ಪಕ್ಕದಲ್ಲಿ ನಿಲ್ಲಸಲಾಗಿತ್ತು. ಆ ಮೂಲಕ ಚಿರು ಸಮ್ಮುಖದಲ್ಲೇ ಕಾರ್ಯಕ್ರಮ ನಡೀತಿದೆ ಅನ್ನೋ  ಫೀಲ್ ನಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.

ಅಂದಹಾಗೆ ಚಿರು - ಮೇಘನಾ ಬಹಳ ಮುದ್ದಾದ ಜೋಡಿ. ಮೇಡ್ ಫಾರ್ ಈಚ್ ಅದರ್ ಅನ್ನುವಂತೆ ಇಬ್ಬರ ಜೋಡಿ ಇತ್ತು. ಆದರೆ ವಿಧಿಗೂ ಈ ಜೋಡಿ ಕಂಡು ಹೊಟ್ಟೆ ಕಿಚ್ಚಾಯ್ತೆನೋ.. ಸಮಯವಲ್ಲದ ಸಮಯದಲ್ಲಿ, ಬದುಕಿ ಬಾಳಬೇಕಾದವರನ್ನ ದೂರ ಮಾಡಿ ತಾನೆಷ್ಟು ಕ್ರೂರಿ ಅನ್ನೋದನ್ನ ತೋರಿಸಿತು‌‌. ಸದ್ಯ ಚಿರು ಇಲ್ಲ ನೋವು ಮತ್ತೊಂದು ಕಡೆ ಚಿರು ಮಗುವಿನ ರೂಪದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕಿರುನಗೆ ಬೀರಲಿದ್ದಾರೆ ಅನ್ನೋ ಸಮಾಧಾನ.

ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್
Published by:zahir
First published: