Kshatriya Teaser: ಕ್ಷತ್ರಿಯನಾಗಿ ತನ್ನವರ ಕಾವಲು ಕಾಯಲು ನಿಂತ ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ ಅಭಿನಯದ ಕಡೆಯ ಸಿನಿಮಾ ಕ್ಷತ್ರಿಯ. ಈ ಸಿನಿಮಾದ ಚಿತ್ರೀಕರಣದ ಮುಗಿದಿದ್ದು, ಇನ್ನು ಇದರ ಟೀಸರ್​ ಅನ್ನು ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಇಂದು ರಿಲೀಸ್​ ಮಾಡಲಾಗಿದೆ. 

Anitha E | news18-kannada
Updated:October 17, 2020, 12:42 PM IST
Kshatriya Teaser: ಕ್ಷತ್ರಿಯನಾಗಿ ತನ್ನವರ ಕಾವಲು ಕಾಯಲು ನಿಂತ ಚಿರಂಜೀವಿ ಸರ್ಜಾ
ಕ್ಷತ್ರಿಯ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ
  • Share this:
ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದ್ದಾರೆ. ಒಂದು ದಿನ ಮುಂಚಿತವಾಗಿ ಅಂದರೆ ನಿನ್ನೆಯೇ ಅವರ ಅಭಿನಯದ ಶಿವಾರ್ಜುನ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ, ಮೆಜೆಸ್ಟಿಕ್​ನಲ್ಲಿರುವ ಸಂತೋಷ್​​ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಇನ್ನು ಸಿನಿಮಾ ನೋಡಲು ಚಿರು ಅವರ ತಾಯಿ ಸಹ ಬಂದಿದ್ದು ವಿಶೇಷವಾಗಿತ್ತು. ಇಂದು ಚಿರು ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಕೋರಿ ಹೊಸ ಕಟೌಟ್ ಹಾಕಿರುವ ಅಭಿಮಾನಿಗಳು ಸಂತೋಷ್​ ಚಿತ್ರಮಂದಿರದ ಬಳಿ ಬರ್ತ್​ಡೇ ಆಚರಿಸಲು ಸಿದ್ಧರಾಗಿದ್ದಾರೆ. ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅನ್ನ ದಾಸೋಹ ನಡೆಯಲಿದೆ. ಮಧ್ಯಾಹ್ನದ 1.30ರ ಶೋಗೆ ಶಿವಾರ್ಜುನ ಸಿನಿಮಾ ನೋಡಲು ಧ್ರುವ ಸರ್ಜಾ ಸಂತೋಷ್ ಥಿಯೇಟರ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ . ಇನ್ನು ಚಿರು ಅವರ ಹುಟ್ಟುಹಬ್ಬದಂದೇ ಅವರ ಅಭಿನಯದ ಕಡೆಯ ಸಿನಿಮಾದ ಟೀಸರ್ ರಿಲೀಸ್​ ಆಗಿದೆ.

ಹೌದು, ಚಿರಂಜೀವಿ ಸರ್ಜಾ ಅಭಿನಯದ ಕಡೆಯ ಸಿನಿಮಾ ಕ್ಷತ್ರಿಯ. ಈ ಸಿನಿಮಾದ ಚಿತ್ರೀಕರಣದ ಮುಗಿದಿದ್ದು, ಇನ್ನು ಇದರ ಟೀಸರ್​ ಅನ್ನು ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಇಂದು ರಿಲೀಸ್​ ಮಾಡಲಾಗಿದೆ.



ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ಕ್ಷತ್ರಿಯ ಚಿತ್ರದ ಟೀಸರ್​ ಆರಂಭವಾಗುವುದೇ  ಫೈಟ್​ ಸೀನ್​ನಿಂದ. ಸಾಹಸ ದೃಶ್ಯದ ಮೂಲಕವೇ ಚಿರು ಎಂಟ್ರಿ ಆಗುತ್ತದೆ. ಈ ಟೀಸರ್​ನಲ್ಲಿ ಚಿರು ಅವರ ಹುಟ್ಟುಹಬ್ಬ ಆಚರಿಸಿರುವ ಹಾಗೂ ಅವರು ಮಗು ಆಡಿಸುವ ದೃಶ್ಯಗಳೂ ಇವೆ.



ಅನಿಲ್ ಮಂಡ್ಯ ನಿರ್ದೇಶನದ ಚಿತ್ರ ಕ್ಷತ್ರಿಯ ಸಿನಿಮಾದ ಟೀಸರ್​ನಲ್ಲಿರುವ ಹುಟ್ಟುಹಬ್ಬದ ಹಾಗೂ ಮಗು ಆಡಿಸುವ ದೃಶ್ಯಗಳು ಅಭಿಮಾನಿಗಳ ಕಣ್ಣು ಒದ್ದೆ ಮಾಡುತ್ತವೆ. ಇನ್ನು ಚಿರು ಹುಟ್ಟುಹಬ್ಬಕ್ಕೆ ಅವರ ಸ್ನೇಹಿತರಾದ ಪ್ರಜ್ವಲ್​, ಪನ್ನಾಗಭರಣ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

ಇದನ್ನೂ ಓದಿ: Baby Showring: ಅಮ್ಮನ ಮನೆಯಲ್ಲಿ ಎರಡನೇ ಸಲ ಸೀಮಂತ ಮಾಡಿಸಿಕೊಂಡ ಪವನ್​ ಒಡೆಯರ್ ಮಡದಿ ಅಪೇಕ್ಷಾ ಪುರೋಹಿತ್..!ಇನ್ನು ಮೇಘನಾ ಹಾಗೂ ಅವರ ಕುಟುಂಬ ಚಿರು ಅವರ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ಜೂನಿಯರ್​ ಚಿರು ಅಂದರೆ ಮೇಘನಾರ ಹೆರಿಗೆ ಬಗ್ಗೆ ಇದ್ದ ಊಹಾಪೋಹಗಳಿಗೂ ಮೇಘನಾ ಹಾಗೂ ಅವರ ತಂದೆ ಸುಂದರ್ ರಾಜ್​ ತೆರೆ ಎಳೆದಿದ್ದಾರೆ. ನನ್ನ ಗರ್ಭದಲ್ಲಿರುವ ಜೂನಿಯರ್​ ಚಿರು ಅದಕ್ಕೆ ಬೇಕಾದಾಗಲೇ ಈ ಜಗತ್ತಿಗೆ ಕಾಲಿಡುತ್ತದೆ ಎಂದಿದ್ದಾರೆ.
Published by: Anitha E
First published: October 17, 2020, 12:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading