ಸ್ಟಾರ್(Star) ನಟ-ನಟಿಯರ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಸಣ್ಣ ವಯಸ್ಸಿಗೆ ಸೆಲೆಬ್ರಿಟಿ ಆಗುವುದು ಕಾಮನ್. ರಾಕಿಂಗ್ ಸ್ಟಾರ್ ಯಶ್(Rocking Star Yash) ಮಕ್ಕಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವುದನ್ನು ನೋಡಿದ್ದೇವೆ. ಇದೀಗ ದಿವಗಂತ ನಟ ಚಿರಂಜೀವಿ ಸರ್ಜಾ(Chiranjeevi Sarja) ಅವರ ಪುತ್ರ ರಾಯನ್ ರಾಜ್ ಸರ್ಜಾ(Rayan Raj Sarja) ಅವರ ವಿಡಿಯೋಗಳು ಕೂಡ ಇಂಟರ್ನೆಟ್ನಲ್ಲಿ ವೈರಲ್ ಆಗಾಗ ವೈರಲ್ ಆಗುತ್ತಿರುತ್ತವೆ. ಅಂಥದ್ದೆ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಸಿಂಹ(Lion)ದಂತೆ ರಾಯನ್ ರಾಜ್ ಸರ್ಜಾ ಕ್ಯೂಟ್ ಆಗಿ ಘರ್ಜಿಸುವ ವಿಡಿಯೋ ವೈರಲ್ ಆಗುತ್ತಿದೆ. ಪ್ರಾಣಿಗಳು(Animals) ಹೇಗೆ ಸೌಂಡ್ ಮಾಡುತ್ತವೆ ಎಂಬುದನ್ನು ರಾಯನ್ ರಾಜ್ ಸರ್ಜಾ ತೋರಿಸಿಕೊಟ್ಟಿದ್ದಾರೆ. ಈ ವಿಡಿಯೋಗಳನ್ನು ಸ್ವತಃ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂ(Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಕಂಡು ನೆಟ್ಟಿಗರು ಕೂಡ ಒಂದು ಕ್ಷಣ ನಕ್ಕಿ ನಲಿದಿದ್ದಾರೆ. ಅಷ್ಟು ಮುದ್ದಾಗಿ ರಾಯನ್ ರಾಜ್ ಸರ್ಜಾ ಪ್ರಾಣಿಗಳ ಶಬ್ಧವನ್ನು ಅನುಕರಣೆ ಮಾಡಿದ್ದಾರೆ. ಲೈಕ್, ಕಮೆಂಟ್ ಮಾಡಿ ಈ ವಿಡಿಯೋವನ್ನು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಾಯನ್ ರಾಜ್ ಸರ್ಜಾ ಅವರ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು.
ಸಿಂಹದಂತೆ ಕ್ಯೂಟ್ ಆಗಿ ಘರ್ಜಿಸಿದ ರಾಯನ್!
ವಿಡಿಯೋದಲ್ಲಿ ರಾಯನ್ ಸರ್ಜಾ ಅವರನ್ನು ಮತ್ತೊಬ್ಬರು ಎತ್ತಿಕೊಂಡಿದ್ದಾರೆ. ಇತ್ತ ತಾಯಿ ಮೇಘನಾ ರಾಜ್, ಸಿಂಹ ಹೇಗೆ ಸೌಂಡ್ ಮಾಡುತ್ತೆ ಎಂದು ರಾಯನ್ ರಾಜ್ ಸರ್ಜಾಗೆ ಕೇಳುತ್ತಾರೆ. ಅದಕ್ಕೆ ಆ ಮಗು ಸೌಂಡ್ ಮಾಡಿ ತೋರಿಸುತ್ತೆ. ಇದಕ್ಕೆ ಮೇಘನಾ ರಾಜ್ ಇದು ಬೆಕ್ಕು ಸೌಂಡ್ ಮಾಡಿದಂತಿದೆ ಎಂದು ಹೇಳುತ್ತಾರೆ. ಮತ್ತೆ ರಾಯನ್ ರಾಜ್ ಸರ್ಜಾ ಸಿಂಹದಂತೆ ಘರ್ಜಿಸಲು ಪ್ರಯತ್ನಿಸುತ್ತಾರೆ. ಈ ವಿಡಿಯೋ ನೋಡಲು ತುಂಬಾ ಮುದ್ದಾಗಿದೆ. ಕ್ಯೂಟ್ ಆಗಿ ರಾಯನ್ ರಾಜ್ ಸರ್ಜಾ ಸಿಂಹದಂತೆ ಘರ್ಜಿಸಿರುವುದು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ರಾಯನ್ ರಾಜ್ ಸರ್ಜಾ ಅಂತ ವಿಡಿಯೋ ವೈರಲ್ ಆಗಿಲ್ಲ, ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಏನೇ ಮಾಡಿದರು ಮುದ್ದಾಗಿ ಕಾಣುತ್ತದೆ.
ಇದನ್ನು ಓದಿ : ಏಪ್ರಿಲ್ 14ಕ್ಕೆ ಬರ್ತಾರೆ ರಾಕಿಭಾಯ್, ಅಧೀರ: ಗೆಟ್ ರೆಡಿ ಎಂದ ಹೊಂಬಾಳೆ ಪ್ರೊಡಕ್ಷನ್!
ಫ್ರೆಂಡ್ಸ್ ಜೊತೆ ಪೋಸ್ ಕೊಟ್ಟ ರಾಯನ್ ರಾಜ್!
ಈ ವಿಡಿಯೋಗೂ ಮುನ್ನ ರಾಯನ್ ತನ್ನ ಗೆಳೆಯರ ಜೊತೆಗೆ ಕುಳಿತು ಆಟವಾಡುತ್ತಿರುವ ವಿಶೇಷವಾದ ಫೋಟೋವನ್ನು ಮೇಘನಾ ರಾಜ್ ಶೇರ್ ಮಾಡಿದ್ದರು. ಮಕ್ಕಳನ್ನು ಪೋಸ್ ನೀಡುವಂತೆ ಮಾಡುವುದು ತುಂಬಾ ಕಷ್ಟ ಆದರೆ ಇದು ತಾಯಂದಿರಿಗೆ ಇಷ್ಟ. ಈ ಮಾತನ್ನು ತಾಯಂದಿರೆಲ್ಲ ಒಪ್ಪುತ್ತೀರಾ..? ಹುಟ್ಟುಹಬ್ಬದ ಶುಭಾಶಯಗಳು ಧಕ್ಷ್ ಎಂದು ಈ ಮುದ್ದಾದ ಫೋಟೋಗಳಿಗೆ ಮೇಘನಾ ರಾಜ್ ಕ್ಯಾಪ್ಷನ್ ನೀಡಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿದ್ದರು.ಈ ಫೋಟೋಗಳಲ್ಲಿ ರಾಯನ್ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದ.ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಇದನ್ನು ಓದಿ : ಸಿಲಿಕಾನ್ ಸಿಟಿಯಲ್ಲಿ `ಪುಷ್ಪ’ ಪ್ರಮೋಷನ್: ಕನ್ನಡದಲ್ಲಿ ಡಬ್ ಮಾಡೋಕೆ ಟೈಂ ಸಿಕ್ಲಿಲ್ಲ ಅಂದ್ರು ರಶ್ಮಿಕಾ ಮಂದಣ್ಣ!
ಜಂಗಲ್ ಥೀಮ್ನಲ್ಲಿ ನಡೆದಿತ್ತು ರಾಯನ್ ಹುಟ್ಟುಹಬ್ಬ!
ದಿ.ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬವನ್ನು ಅಕ್ಟೋಬರ್ 22ರಂದು ಆಚರಿಸಲಾಗಿತ್ತು. ಮೇಘನಾ ರಾಜ್ ಅವರ ಜೆ.ಪಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ, ಕಾಡಿನ ಥೀಮ್ನಲ್ಲಿ ಬಹಳ ಗ್ರ್ಯಾಂಡ್ ಆಗಿ ಡೆಕೊರೇಷನ್ ಮಾಡಲಾಗಿತ್ತು. ಬಲೂನ್ಗಳಿಂದ ಕೂಡಿರುವ ಆಟದ ಮೈದಾನವನ್ನ ಸೃಷ್ಟಿ ಮಾಡಲಾಗಿತ್ತು. ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಬದುಕಿನಲ್ಲಿ ಕತ್ತಲೆ ಆವರಿಸಿತ್ತು. ಅವರ ಬಾಳಿಗೆ ಹೊಸ ಭರವಸೆಯ ಬೆಳಗಾಗಿ ಬಂದಿದ್ದೇ ರಾಯನ್ ರಾಜ್ ಸರ್ಜಾ. ಮಗನ ಆಗಮನದ ಬಳಿಕ ಮೇಘನಾ ರಾಜ್, ಅಲ್ಲದೇ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ