Sushma ChakreSushma Chakre
|
news18-kannada Updated:June 7, 2020, 6:07 PM IST
chiranjeevi sarja
ಬೆಂಗಳೂರು (ಜೂ. 7): ವಾಯುಪುತ್ರ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ನಟ ಚಿರಂಜೀವಿ ಸರ್ಜಾ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೇವಲ 39 ವರ್ಷದಲ್ಲಿ ಕೊನೆಯುಸಿರೆಳೆದ ಚಿರು ನಿಧನಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ಅನೇಕ ಚಿತ್ರರಂಗಗಳ ನಟರು, ರಾಜಕಾರಣಿಗಳು, ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ನಿನ್ನೆ ಸಂಜೆಯೇ ಚಿರಂಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಇದುವರೆಗೂ ಅವರಿಗೆ ಆ ರೀತಿಯ ಯಾವುದೇ ಸಮಸ್ಯೆ ಕಂಡುಬರದ ಯಾರೂ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದು ಮಧ್ಯಾಹ್ನ 3 ಗಂಟೆಗೆ ತಪಾಸಣೆಗಾಗಿ ಚಿರು ಅಪೋಲೋ ಆಸ್ಪತ್ರೆಯಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಹೊರಡುವ ಮೊದಲೇ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು.
ಇದನ್ನೂ ಓದಿ: Chiranjeevi Sarja: ಚಿರಂಜೀವಿ ಸರ್ಜಾ ನಿಧನ; ಅಪೋಲೋ ಆಸ್ಪತ್ರೆಗೆ ದೌಡಾಯಿಸಿದ ಚಿರು ಅಭಿಮಾನಿಗಳು
ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಅವರ ಪಲ್ಸ್ ಕಡಿಮೆಯಾಗಿತ್ತು. ವೈದ್ಯರು ತಕ್ಷಣ ಚಿಕಿತ್ಸೆ ಶುರು ಮಾಡಿದ್ದರಿಂದ ಚಿರುಗೆ ಪ್ರಜ್ಞೆ ಬಂದಿತ್ತು. ಆದರೆ, ಮತ್ತೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಈಗಾಗಲೇ ಅಪೋಲೋ ಆಸ್ಪತ್ರೆಯಿಂದ ಚಿರಂಜೀವಿ ಸರ್ಜಾ ಅವರ ಮೃತದೇಹವನ್ನು ಕೆ.ಆರ್. ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದೆ. ಮನೆ ಬಳಿ ಅಭಿಮಾನಿಗಳು ಇನ್ನಷ್ಟು ಸೇರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಚಿರು ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಮಾವ ಅರ್ಜುನ್ ಸರ್ಜಾ ಚೆನ್ನೈನಿಂದ ಹೊರಟಿದ್ದಾರೆ.
First published:
June 7, 2020, 5:56 PM IST