ಚಿರುಗೆ ದುಶ್ಚಟ ಇತ್ತು ಅಂದೋರು ಯಾರು?; ಗರಂ ಆದ ಸರ್ಜಾ ಕುಟುಂಬದ ಆಪ್ತ

ಆಸ್ಪತ್ರೆಗೆ ಹೊರಡುವ ಮೊದಲೇ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ನಂತರ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು. ಚಿರು ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿದ್ದಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಿಸಿದ್ದರು

ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ

  • Share this:
    ಚಿರಂಜೀವಿ ಸರ್ಜಾ 39ನೇ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟರು ಅನ್ನೋ ಮಾಹಿತಿ ಅನೇಕರಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ವಾಟ್ಟ್​ಆಪ್​ನಲ್ಲಿ ಸಾಕಷ್ಟು ಇಲ್ಲ-ಸಲ್ಲದ ವಿಚಾರಗಳು ಹಬ್ಬಿದ್ದವು. ಇದು ಸುಳ್ಳು ಎಂದು ಸರ್ಜಾ ಕುಟುಂಬದ ಆಪ್ತ ಪ್ರಶಾಂತ್​ ಸಂಭರ್ಗಿ ಹೇಳಿದ್ದಾರೆ.

    ಚಿರು ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿದ್ದಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ಚಿರು ಸರ್ಜಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು, ನಿದ್ರೆ ಗುಳಿಗೆ ತೆಗೆದುಕೊಳ್ಳುತ್ತಿದ್ದರು ಎನ್ನುವ ಸಂದೇಶ ವಾಟ್ಸ್​ಆಪ್​ನಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು. ಅವರಿಗೆ ಯಾವುದೇ ದುಶ್ಚಟ ಇರಲಿಲ್ಲ. ಇಂಥ ಸಂದರ್ಭದಲ್ಲಿ ಹೀಗೆ ಸುದ್ದಿ ಹಬ್ಬಿಸೋದು ಸರಿ ಅಲ್ಲ ಎಂದಿದ್ದಾರೆ.

    ಕನ್ನಡದಲ್ಲಿ ನಡೆದ ಡಬ್ಬಿಂಗ್ ಪರ ಹೋರಾಟದ ಬಗ್ಗೆ ತಿಳಿದವರಿಗೆ ಪ್ರಶಾಂತ್ ಸಂಭರ್ಗಿ ಕುರಿತು ತಿಳಿದಿರುತ್ತದೆ. ಇವರು ಮೂಲತಃ ಬೆಳಗಾವಿಯವರು. ಬೆಳೆದಿದ್ದು ಬೆಂಗಳೂರಿನಲ್ಲಿ. ಪ್ರಶಾಂತ್ ಉದ್ಯಮಿ ಆಗಿದ್ದು, ಅರ್ಜುನ್ ಸರ್ಜಾ ಅವರಿಗೆ ಆಪ್ತರು. ಡಬ್ಬಿಂಗ್ ಪರ ಹೋರಾಡಿದವರಲ್ಲಿ ಪ್ರಶಾಂತ್ ಕೂಡ ಪ್ರಮುಖರು. ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಪ್ರಶಾಂತ್ ವಿರುದ್ಧ ವಾಗ್ಸಮರ ಕೂಡ ನಡೆದಿತ್ತು. ಡಬ್ಬಿಂಗ್​ಗೆ ಅವಕಾಶ ನೀಡದ ಕಾರಣಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು.
    First published: