HOME » NEWS » Entertainment » CHIRANJEEVI SARJA HEARTBREAKING LAST WHATSAPP CHAT WITH FRIEND PRAJWAL DEVARAJ VIRAL HG

Chiranjeevi Sarja: ಚಿರು ಸರ್ಜಾ ಕೊನೆಯದಾಗಿ ಪ್ರಜ್ವಲ್​​ಗೆ ವ್ಯಾಟ್ಸ್ಆ್ಯಪ್​​​ನಲ್ಲಿ ಕಳುಹಿಸಿದ ಮೆಸೇಜ್ ಏನು ಗೊತ್ತಾ?

Chiranjeevi Sarja: ಇದೀಗ ನಟ ಪ್ರಜ್ವಲ್​ ದೇವರಾಜ್​ ಅವರು ಚಿರು ಆಪ್ತ ವಲಯದವರೊಂದಿಗೆ ನಡೆಸಿದ ವ್ಯಾಟ್ಸ್​ಆ್ಯಪ್​​​​​ ಸಂಭಾಷಣೆಯೊಂದರ ಸ್ಕ್ರೀನ್​ ಶಾಟ್​​ ಅನ್ನು ಶೇರ್​​ ಮಾಡಿದ್ದಾರೆ. ಚಿರು ಕೊನೆಯದಾಗಿ ಸ್ನೇಹಿತರೊಂದಿಗೆ ಹಂಚಿಕೊಂಡಿರುವ ಸಂದೇಶ ಎಲ್ಲರ ಕಣ್ಣಲ್ಲೂ ನೀರು ತರಿಸುವಂತಿದೆ.

news18-kannada
Updated:June 12, 2020, 3:13 PM IST
Chiranjeevi Sarja: ಚಿರು ಸರ್ಜಾ ಕೊನೆಯದಾಗಿ ಪ್ರಜ್ವಲ್​​ಗೆ ವ್ಯಾಟ್ಸ್ಆ್ಯಪ್​​​ನಲ್ಲಿ ಕಳುಹಿಸಿದ ಮೆಸೇಜ್ ಏನು ಗೊತ್ತಾ?
ಚಿರಂಜೀವಿ ಸರ್ಜಾ
  • Share this:
ನಟ ಚಿರಂಜೀವಿ ಸರ್ಜಾ ಸಾವನಪ್ಪಿ ಇಂದಿಗೆ 6 ದಿನಗಳು ಕಳೆದಿವೆ. ಆದರು ಚಿರು ಬಗೆಗಿನ ನೆನಪುಗಳು ಹಾಗೇ ಉಳಿದಿವೆ. ಅನೇಕರು ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ದುಃಖದ ನುಡಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಟ-ನಟಿಯರು ಕೂಡ ಆಪ್ತನ ಗೆಳೆಯನ ದಿಢೀರ್​​ ಸಾವಿನ ಬಗ್ಗೆ ಬೇಸರದ ನುಡಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೀಗ ನಟ ಪ್ರಜ್ವಲ್​ ದೇವರಾಜ್​ ಅವರು ಚಿರು ಆಪ್ತ ವಲಯದವರೊಂದಿಗೆ ನಡೆಸಿದ ವ್ಯಾಟ್ಸ್​ಆ್ಯಪ್​​​​​ ಸಂಭಾಷಣೆಯೊಂದರ ಸ್ಕ್ರೀನ್​ ಶಾಟ್​​ ಅನ್ನು ಶೇರ್​​ ಮಾಡಿದ್ದಾರೆ. ಚಿರು ಕೊನೆಯದಾಗಿ ಸ್ನೇಹಿತರೊಂದಿಗೆ ಹಂಚಿಕೊಂಡಿರುವ ಸಂದೇಶ ಎಲ್ಲರ ಕಣ್ಣಲ್ಲೂ ನೀರು ತರಿಸುವಂತಿದೆ.

ಪ್ರಜ್ವಲ್ ದೇವರಾಜ್​​ ಮತ್ತು ಚಿರಂಜೀವಿ ಸರ್ಜಾ ಆಪ್ತ ಸ್ನೇಹಿತರು. ಡ್ಯಾನ್ಸ್​​ ತರಬೇತಿಗೆ ಹೋಗುತ್ತಿರುವ ಸಂದರ್ಭದಿಂದ ಚಿರು –ಪ್ರಜ್ವಲ್ ಒಟ್ಟಿಗೆ ಇದ್ದಾರೆ. ಅಲ್ಲಿಂದ ಇವರ ಸ್ನೇಹ ಹೆಮ್ಮರವಾಗಿದೆ. ಇವರ ಜೊತೆಗೆ ಇನ್ನು ಕೆಲವರು ಸ್ನೇಹಿತರು ಇದ್ದಾರೆ. ಆಗಾಗ ಭೇಟಿ ಮಾಡುತ್ತಾ, ಸಿನಿಮಾ ಬಗ್ಗೆ ವಿಚಾರ ಹಂಚಿಕೊಳ್ಳುತ್ತ ಇರುತ್ತಿದ್ದರು. ವಾಟ್ಸ್​​ ಆ್ಯಪ್​​​​ನಲ್ಲೂ ಕೂಡ ಆಪ್ತ ಸ್ನೇಹಿತರ ಗ್ರೂಪ್​​​ ನಿರ್ಮಿಸಿಕೊಂಡಿದ್ದರು. ಇದರಲ್ಲಿ ಚಿರುಗೆ ಅನಿಸಿದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು.

ಚಿರಂಜೀವಿ ಸರ್ಜಾ ಮೆಸೇಜ್​ಚಿರು ಸಾವಿಗೂ ಮುನ್ನ ಆಪ್ತ ಸ್ನೇಹಿತರಿರುವ ವಾಟ್ಸ್​​ಆ್ಯಪ್​​​​ ಗ್ರೂಪ್​ನಲ್ಲಿ ಸಂದೇಶವನ್ನು ಬರೆದು ಹಾಕಿದ್ದರು. ಅದೇನೆಂದರೆ, ಹಾಯ್​ ಫ್ರೆಂಡ್ಸ್​​​ ನಿಮಗೆ ಗೊತ್ತಾ..ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನಾವು ಒಂದು ವಾರ ಎಲ್ಲಾದರು ಪ್ರವಾಸ ಹೊಗೋಣ.. ನಾವು ಕಳೆದುಕೊಂಡಿದ್ದನ್ನು ಮತ್ತೆ ಪಡೆಯೋಣ.. ನನ್ನನ್ನು ನಂಬಿ ನಿಮ್ಮ ಜೊತೆಯಲ್ಲಿ ಇರುವುದಕ್ಕಿಂತ ಅತ್ಯಮೂಲ್ಯವಾದದ್ದು ಬೇರೆನಿಲ್ಲ ಎಂದು ಬರೆದುಕೊಂಡಿದ್ದಾರೆ. ನಂತರ ಕೊನೆಯಲ್ಲಿ ನಮ್ಮಲ್ಲಿ ಏನಿದೆ ಎಂಬುದು ನಮಗೇ ತಿಳಿದಿಲ್ಲ ಎಂದಿದ್ದಾರೆ. ಇದು ಚಿರು ತನ್ನ ಆಪ್ತ ಸ್ನೇಹಿತರಿಗೆ ಕಳುಹಿಸಿದ ಕೊನೆಯ ಸಂದೇಶವಾಗಿದೆ.

ಲಾಕ್​ಡೌನ್​ನಂತರ ಚಿರು ತನ್ನ ಸ್ನೇಹಿತರ ಜೊತೆಗೂಡಿ ಪ್ರವಾಸಹೋಗಬೇಕೆಂಬ ಆಸೆಯನ್ನು ಹೊಂದಿದ್ದರು. ಹಾಗಾಗಿ ತಮ್ಮ ಆಸೆಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಆದರೆ ವಿಧಿ ಅವರನ್ನು ಸಾವಿನತ್ತ ಕೊಂಡೊಯ್ದಿದೆ. ಅವರ ದಿಢೀರ್​ ಸಾವು ಎಲ್ಲರಿಗೂ ಬೇಸರವನ್ನುಂಟು ಮಾಡಿದೆ. ಒಂದೆಡೆ ಬೆಳೆಯುತ್ತಿದ್ದ ನಟನನ್ನು ಕಳೆದುಕೊಂಡ ದುಃಖದಲ್ಲಿ ಅಭಿಮಾನಿಗಳಿದ್ದರೆ. ಸ್ನೇಹಿತನನ್ನು ಕಳೆದುಕೊಂಡ ನೋವು ಪ್ರಜ್ವಲ್​ ಮತ್ತು ಅವರ ಬಳಗಕ್ಕಿದೆ. ಇನ್ನು ಚಿರು ಫ್ಯಾಮಿಲಿ ಕೂಡ ಈ ಆಘಾತದಿಂದ ಹೊರ ಬಂದಿಲ್ಲ. 

ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ ಕೊರೋನಾಗೆ 120 ಬಲಿ, ದಾಖಲೆಯ 2,259 ಹೊಸ ಸೋಂಕಿತರು

 
First published: June 12, 2020, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories