Chiranjeevi Sarja Funeral: ಚಿರು ಬಗ್ಗೆ ಯಾರಿಗೂ ಗೊತ್ತಿರದ ಮಾಹಿತಿ ಹಂಚಿಕೊಂಡ ರಾಮ್ ನಾರಾಯಣ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕೆಲವೇ ವಾರಗಳಲ್ಲಿ ಆ ಸಿನಿಮಾ ಸಹ ಅನೌನ್ಸ್ ಆಗಬೇಕಿತ್ತು. ಇಂತಹ ರಾಮ್ ನಾರಯಣ್, ಚಿರಂಜೀವಿ ಬಗ್ಗೆ ಯಾರಿಗೂ ಗೊತ್ತಿರದ ಮಾಹಿತಿಯೊಂದನ್ನ ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.

news18-kannada
Updated:June 8, 2020, 11:40 AM IST
Chiranjeevi Sarja Funeral: ಚಿರು ಬಗ್ಗೆ ಯಾರಿಗೂ ಗೊತ್ತಿರದ ಮಾಹಿತಿ ಹಂಚಿಕೊಂಡ ರಾಮ್ ನಾರಾಯಣ್
chiranjeevi sarja
  • Share this:
ಚಿರಂಜೀವಿ ಸರ್ಜಾ ಅಕಾಲಿಕ ಮರಣ ಇಡೀ ಸ್ಯಾಂಡಲ್​ವುಡ್​ಗೆ ಅಘಾತ ತಂದಿದೆ. ಸ್ನೇಹಜೀವಿ, ಸೌಮ್ಯ ಸ್ವಭಾವದ, ಹೃದಯವಂತ ಚಿರುವನ್ನ ಕಳೆದು ಕೊಂಡ ಚಿತ್ರರಂಗ ಒಂದೇ ಸಮನೆ ರೋದಿಸುತ್ತಿದೆ. ಅದರಲ್ಲೂ ಚಿರಂಜೀವಿ ಜೊತೆ ಕೆಲಸ ಮಾಡಿದವರಂತೂ ಇಂತಹ ಒಬ್ಬ ಸಹಪಾಟಿ, ಸಹೃದಯಿ, ಗೆಳೆಯನನ್ನ ಕಳೆದುಕೊಂಡವಲ್ಲ. ಅವರ ಜೊತೆ ಕಳೆದ ಆ ದಿನಗಳು ಇನ್ನು ಕೇವಲ ನೆನಪಷ್ಟೇ ಆಗಿ ಉಳಿಯುತ್ತಲ್ಲ. ಮತ್ತೆಂದು ಚಿರು ಜೊತೆಗೆ ಕಾಲ ಕಳೆಯುವ ಕ್ಷಣ ಕೂಡಿ ಬರೋದಿಲ್ಲವಲ್ಲ ಎಂದು ಹೇಳಲು ಅಸಾಧ್ಯ ದುಖಃತಪ್ತರಾಗಿದ್ದಾರೆ.

ಚಿರು ಜೊತೆಗೆ ಕಳೆದ ಕ್ಷಣಗಳನ್ನು ಭಾವನಾತ್ಮಕವಾಗಿ ಎಳೆ ಏಳೆಯಾಗಿ ಬಿಚ್ಚಿಡುತ್ತಿದ್ದಾರೆ. ಅದರಂತೆ ನಿರ್ದೇಶಕ ರಾಮ್ ನಾರಾಯಣ್ ಅವರು ಚಿರಂಜೀವಿ ಜೊತೆ ಸಾಕಷ್ಟು ವರ್ಷಗಳಿಂದ ಕೆಲಸ ಮಾಡಿದವರು. ಇತ್ತೀಚಿಗೆ ರಾಜ ಮಾರ್ತಂಡ ಎಂಬ ಸಿನಿಮಾವನ್ನ ಸಹ ಚಿರುಗಾಗಿ ನಿರ್ದೇಶಿಸಿದ್ದರು. ಆ ಸಿನಿಮಾ ಶೂಟಿಂಗ್ ಮುಗಿದು ಡಬ್ಬಿಂಗ್ ಗೆ ಸಜ್ಜಾಗಿತ್ತು.

Chiranjeevi Sarja: ಚಿರು-ಧ್ರುವಾ ಸಹೋದರ ಬಾಂಧವ್ಯ ಹೇಗಿತ್ತು ಗೊತ್ತಾ..? ಇಲ್ಲಿದೆ‌ ಮನಮಿಡಿಯುವ ಕಥೆ

ಅಷ್ಟೇ ಇಲ್ಲದೆ ಚಿರಂಜೀವಿ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಮಾಡುವ  ಯೋಚನೆ ಸಹ ಹುಟ್ಟಿತ್ತು. ಇದರ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕೆಲವೇ ವಾರಗಳಲ್ಲಿ ಆ ಸಿನಿಮಾ ಸಹ ಅನೌನ್ಸ್ ಆಗಬೇಕಿತ್ತು. ಇಂತಹ ರಾಮ್ ನಾರಾಯಣ್, ಚಿರಂಜೀವಿ ಬಗ್ಗೆ ಯಾರಿಗೂ ಗೊತ್ತಿರದ ಮಾಹಿತಿಯೊಂದನ್ನ ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.

ಅದೇನಂದರೆ? ಚಿರಂಜೀವಿ ಅದೊಂದು ತಾಮ್ರದ ತಟ್ಟೆ ಮೇಲೆ ವಿಶೇಷ ಪ್ರೀತಿಯನ್ನ ಇಟ್ಕೊಂಡಿದ್ದರಂತೆ. ಅದು ಎಷ್ಟರ ಮಟ್ಟಿಗೆ ಅಂದರೆ ಮನೆಯಲ್ಲಿರಲಿ, ಶೂಟಿಂಗ್ ಸೆಟ್​ನಲ್ಲಾಗಲಿ ಆ ತಾಮ್ರದ ತಟ್ಟೆಯಲ್ಲೇ ಊಟ ಮಾಡುತ್ತಿದ್ದರಂತೆ ಚಿರಂಜೀವಿ. ಶೂಟಿಂಗ್ ಸೆಟ್​ಗೆ ತಪ್ಪದೆ ಆ ತಾಮ್ರದ ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದರಂತೆ ಚಿರು.
First published: June 8, 2020, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading