Sushma ChakreSushma Chakre
|
news18-kannada Updated:June 7, 2020, 8:00 PM IST
ಆದರೆ, ಚಿರಂಜೀವಿ ನೆನಪನ್ನಷ್ಟೇ ಉಳಿಸಿ ಹೋಗಿದ್ದಾರೆ. ಅವರು ನಿರ್ಮಾಪಕರು ಮತ್ತು ನಿರ್ದೇಶಕರ ಸ್ನೇಹಿ ಆಗಿದ್ದರು. ಸ್ನೇಹದ ಕಾರಣದಿಂದಲೇ ತಮಗೆ ಆಫರ್ ಬಂದ ಬಹುತೇಕ ಹೆಚ್ಚಿನ ಸಿನಿಮಾ ಒಪ್ಪಿಕೊಳ್ಳುತ್ತಿದ್ದರು.
ಬೆಂಗಳೂರು (ಜೂ. 7): ಹೃದಯಾಘಾತದಿಂದ ಇಂದು ಸಂಜೆ ಮೃತಪಟ್ಟ ಕನ್ನಡದ ನಟ ಚಿರಂಜೀವಿ ಸರ್ಜಾ ಅವರ ಅಂತ್ಯ ಸಂಸ್ಕಾರ ಸೋಮವಾರ ತುಮಕೂರಿನ ಮಧುಗಿರಿಯಲ್ಲಿರುವ ಜಕ್ಕೇನಹಳ್ಳಿಯಲ್ಲಿ ನಡೆಯಲಿದೆ. ಚಿರು ಸರ್ಜಾ ಅವರ ತಾತ ಶಕ್ತಿಪ್ರಸಾದ್ ಸಮಾಧಿಯ ಬಳಿಯಲ್ಲೇ ಚಿರಂಜೀವಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಬಸವನಗುಡಿಯಲ್ಲಿ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗಿತ್ತು. ಆದರೆ, ಆ ನಿರ್ಧಾರವನ್ನು ಬದಲಿಸಿರುವ ಅವರ ಕುಟುಂಬಸ್ಥರು ಜೂನ್ 8ರಂದು ಮಧ್ಯಾಹ್ನ 1.30ಕ್ಕೆ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಿದ್ದಾರೆ. ಈಗಾಗಲೇ ಚಿರು ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಕುಟುಂಬದವರು ಚೆನ್ನೈನಿಂದ ಹೊರಟಿದ್ದಾರೆ.
ಇದನ್ನೂ ಓದಿ: Chiranjeevi Sarja Death: ಅಮ್ಮನಾಗಲಿದ್ದ ಮೇಘನಾಗೆ ಬಿಗ್ ಶಾಕ್; ಮಗುವಿನ ಮುಖ ನೋಡದೆ ಕಣ್ಮುಚ್ಚಿದ ಚಿರು ಸರ್ಜಾ!
ಚಿರು ಗಂಟಲುದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲೆಡೆ ಕೊರೋನಾ ಆತಂಕ ಹೆಚ್ಚಿರುವುದರಿಂದ ಅದರ ವರದಿ ಬರುವವರೆಗೂ ಮೃತದೇಹವನ್ನು ನೀಡುವುದಿಲ್ಲ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಹೇಳಿದ್ದರು. ಇದರಿಂದ ಆಸ್ಪತ್ರೆ ವೈದ್ಯರು ಮತ್ತು ಚಿರು ಕುಟುಂಬಸ್ಥರ ನಡುವೆ ವಾಗ್ವಾದ ಉಂಟಾಗಿತ್ತು. ಕೊನೆಗೆ ಚಿರಂಜೀವಿ ಮೃತದೇಹವನ್ನು ಕೊಡಲು ವೈದ್ಯರು ಒಪ್ಪಿದ್ದರು. ಈಗಾಗಲೇ ಚಿರು ಸರ್ಜಾ ಅವರ ಮೃತದೇಹವನ್ನು ಕೆ.ಆರ್. ರಸ್ತೆಯಲ್ಲಿರುವ ಅವರ ಮನೆಗೆ ತೆಗೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ವಾಯುಪುತ್ರ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಚಿರಂಜೀವಿ ಸರ್ಜಾ ಸಿನಿಮಾ ಪಯಣ ಹೇಗಿತ್ತು
ನಿನ್ನೆ ಸಂಜೆ ಚಿರಂಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಇದುವರೆಗೂ ಅವರಿಗೆ ಆ ರೀತಿಯ ಯಾವುದೇ ಸಮಸ್ಯೆ ಕಂಡುಬರದ ಯಾರೂ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದು ಮಧ್ಯಾಹ್ನ 3 ಗಂಟೆಗೆ ತಪಾಸಣೆಗಾಗಿ ಚಿರು ಅಪೋಲೋ ಆಸ್ಪತ್ರೆಯಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಹೊರಡುವ ಮೊದಲೇ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು.
ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಅವರ ಪಲ್ಸ್ ಕಡಿಮೆಯಾಗಿತ್ತು. ವೈದ್ಯರು ತಕ್ಷಣ ಚಿಕಿತ್ಸೆ ಶುರು ಮಾಡಿದ್ದರಿಂದ ಚಿರುಗೆ ಪ್ರಜ್ಞೆ ಬಂದಿತ್ತು. ಆದರೆ, ಮತ್ತೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ 4 ತಿಂಗಳ ಗರ್ಭಿಣಿಯಾಗಿದ್ದು, ಸದ್ಯದಲ್ಲೇ ಚಿರು ಅಪ್ಪನಾಗಲಿದ್ದರು.
First published:
June 7, 2020, 7:56 PM IST