Chiranjeevi Sarja Funeral: ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಫಾರ್ಮ್​ ಹೌಸ್​ನಲ್ಲಿ ಇಂದು ಚಿರು ಸರ್ಜಾ ಅಂತ್ಯಕ್ರಿಯೆ

Chiranjeevi Singh passes Away: ತುಮಕೂರಿನ ಬದಲಾಗಿ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರದ ನೆಲಗುಳಿ ಗ್ರಾಮದಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್​ ಹೌಸ್​ನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

ಚಿರಂಜೀವಿ ಸರ್ಜಾ (ಜೂನ್ 7, 2020): ಭಾನುವಾರ ಮಧ್ಯಾಹ್ನ ಹೊರಬಿದ್ದ ಯುವ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿಯು ಇಡೀ ಸ್ಯಾಂಡಲ್​ವುಡ್​ನ್ನು ಅಕ್ಷರಶಃ ಬೆಚ್ಚಿ ಬೀಳಿಸಿತ್ತು. ಇನ್ನೇನು ಚಿತ್ರರಂಗದಲ್ಲಿ ಹೊಸ ಸಾಧನೆ ಮಾಡಲು ಹೊರಟ್ಟಿದ್ದ ಚಿರು 39ನೇ ವಯಸ್ಸಿನಲ್ಲೇ ತಮ್ಮೆಲ್ಲಾ ಕನಸುಗಳನ್ನು ಬಿಟ್ಟು ಗುಡ್ ಬೈ ಹೇಳಿದ್ದರು.

ಚಿರಂಜೀವಿ ಸರ್ಜಾ (ಜೂನ್ 7, 2020): ಭಾನುವಾರ ಮಧ್ಯಾಹ್ನ ಹೊರಬಿದ್ದ ಯುವ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿಯು ಇಡೀ ಸ್ಯಾಂಡಲ್​ವುಡ್​ನ್ನು ಅಕ್ಷರಶಃ ಬೆಚ್ಚಿ ಬೀಳಿಸಿತ್ತು. ಇನ್ನೇನು ಚಿತ್ರರಂಗದಲ್ಲಿ ಹೊಸ ಸಾಧನೆ ಮಾಡಲು ಹೊರಟ್ಟಿದ್ದ ಚಿರು 39ನೇ ವಯಸ್ಸಿನಲ್ಲೇ ತಮ್ಮೆಲ್ಲಾ ಕನಸುಗಳನ್ನು ಬಿಟ್ಟು ಗುಡ್ ಬೈ ಹೇಳಿದ್ದರು.

  • Share this:
ಬೆಂಗಳೂರು (ಜೂ. 7): ಭಾನುವಾರ ಸಂಜೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದರು. ನಿನ್ನೆ ಸಂಜೆ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂದು ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರದಲ್ಲಿ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಡೆಯಲಿದೆ.

ತುಮಕೂರಿನ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ನಿರ್ಧರಿಸಿದ್ದರು. ತಾತ ಶಕ್ತಿ ಪ್ರಸಾದ್​ ಅವರ ಸಮಾಧಿ ಪಕ್ಕದಲ್ಲೇ ಚಿರು ಸರ್ಜಾ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎನ್ನಲಾಗಿತ್ತು. ಆದರೆ, ಇದೀಗ ತುಮಕೂರಿನ ಬದಲಾಗಿ ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರದ ನೆಲಗುಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ, ಇಂದು ನೆಲಗುಳಿ ಗ್ರಾಮದಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್​ ಹೌಸ್​ನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Chiranjeevi Sarja Death: ಅಮ್ಮನಾಗಲಿದ್ದ ಮೇಘನಾ​ಗೆ ಬಿಗ್ ಶಾಕ್; ಮಗುವಿನ ಮುಖ ನೋಡದೆ ಕಣ್ಮುಚ್ಚಿದ ಚಿರು ಸರ್ಜಾ!

ಮಧ್ಯಾಹ್ನ 12 ಗಂಟೆ ನಂತರ ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ಚಿರು ಸರ್ಜಾ ಅವರ ಮನೆಯಿಂದ ಮೃತದೇಹವನ್ನು ತೆರೆದ ವಾಹನದಲ್ಲಿ ಫಾರ್ಮ್ ಹೌಸ್​ಗೆ  ತೆಗೆದುಕೊಂಡು ಹೋಗಲಾಗುವುದು. ಸಂಜೆ4 ಗಂಟೆ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ ನಿನ್ನೆ ಸಂಜೆಯಿಂದ ಸ್ಯಾಂಡಲ್​ವುಡ್ ನಟರು, ಕುಟುಂಬಸ್ಥರು, ಸ್ನೇಹಿತರು ಚಿರು ಅಂತಿಮ ದರ್ಶನ ಪಡೆದಿದ್ದಾರೆ.
First published: