Chiranjeevi Sarja: ಚಿರು ಸರ್ಜಾ ಇಲ್ಲದೇ ಕಳೀತು 2 ವರ್ಷ! ಮೇಘನಾ ಎಷ್ಟು ಮಿಸ್ ಮಾಡಿಕೊಳ್ತಾರೆ ಅಂತ ಪದಗಳಲ್ಲಿ ವರ್ಣಿಸೋದು ಅಸಾಧ್ಯ

Chiru Sarja: ಅಣ್ಣನ ಅಭಿನಯದ ಕೊನೆಯ ಚಿತ್ರ ರಾಜಮಾರ್ಥಾಂಡ ಡಬ್ಬಿಂಗ್ ನಡೆಯುತ್ತಿದೆ. ಕೆಲವೊಂದು ಡೈಲಾಗ್ ಡಬ್ ಮಾಡುವಾಗ ತುಂಬಾ ಕಷ್ಟ ಆಗುತ್ತೆ. ವಿಡಿಯೋ ನೋಡಿದ್ರೆ ತುಂಬಾ ದುಃಖ ಆಗುತ್ತೆ. ಅಣ್ಣನನ್ನ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ

  • Share this:
ಸ್ಯಾಂಡಲ್ ವುಡ್​​ನಲ್ಲಿ (Sandalwood)  ಕಳೆದ 2 ವರ್ಷದಿಂದ ಕರಿ ಛಾಯೆ ಮೂಡಿರುವುದು ಸುಳ್ಳಲ್ಲ. ಒಬ್ಬರ ನಂತರ ಒಬ್ಬ ಅದ್ಭುತ ನಟರನ್ನು ನಾವು ಕಳೆದುಕೊಂಡಿದ್ದೇವೆ. ಎಲ್ಲರ ನೆಚ್ಚು ನಟ ಚಿರಂಜೀವಿ ಸರ್ಜಾ (Chiranjeevi sarja) ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರಿಲ್ಲದೇ ಇಂದಿಗೆ 2 ವರ್ಷ. ಮುದ್ದಾದ ಸಂಸಾರದ ಕನಸನ್ನು ಹೊಂದಿದ್ದ ಚಿರು ನೆನಪು ಇಂದಿಗೂ ಅಜರಾಮರ. ಇನ್ನು ಚಿರು ಪುಣ್ಯ ಸ್ಮರಣೆ  ಹಿನ್ನೆಲೆ ಕುಟುಂಬಸ್ಥರು (Family) ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ನಟಿ ಮೇಘನಾ ರಾಜ್ (Meghana Raj) , ಧೃವ ಸರ್ಜಾ, ಅರ್ಜುನ್ ಸರ್ಜಾ ಹಾಗೂ ರಾಯನ್ ಸರ್ಜಾ ಸೇರಿ ಎಲ್ಲರೂ ಆಗಮಿಸಿ ಪೂಜೆ ಸಲ್ಲಿಸಿ ಚಿರು ನೆನೆದಿದ್ದಾರೆ.

ಇನ್ನು ಪೂಜೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ರಾಜ್​, ಮಿಸ್ ಮಾಡ್ಕೊಳೋದನ್ನು ವಿವರಣೆ ಕೊಡಲು ಸಾಧ್ಯವಿಲ್ಲ.  ಹೇಗೇ ಅಂತ ಹೇಳೋಕೆ ಆಗಲ್ಲ. ರಾಯನ್​ನಿಂದಲೂ ಸಾಧ್ಯ ಆಗ್ತಾ ಇಲ್ಲ ಆ ಜಾಗ ತುಂಬಲು. ದೇವರ ಹಾಗೇ ಚಿರುನಾ ಪೂಜೆ ಮಾಡ್ತಾ ಇದ್ದಾರೆ ಅಲ್ವಾ ಅದು ನಂಗೆ ಖುಷಿ ಇದೆ. ನಿಮ್ಮ ಆಶೀರ್ವಾದ ಇದ್ದರೆ ನಾವು ಮುಂದೆ ಹೋಗಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಚಿರು ನೆನಪು ಕಾಡುತ್ತಿದೆ

ಇನ್ನು ಅರ್ಜುನ್ ಸರ್ಜಾ ಮಾತನಾಡಿ, ಹೇಗೇ 2 ವರ್ಷ ಆಯ್ತು ಅಂತ ಗೊತ್ತಿಲ್ಲ.  ಚಿರು ನಮ್ಮನ್ನ ದೈಹಿಕವಾಗಿ ಬಿಟ್ಟು ಹೋಗಿ 2 ವರ್ಷ ಕಳೆದು ಹೋಯ್ತು . ಚಿರುನ ನಾನು ಹಂತ ಹಂತವಾಗಿ ನೋಡಿಕೊಂಡು ಬಂದಿದ್ದೇನೆ. ಸ್ಕೂಲ್ ಗೆ ಸೇರಿಸೋದ್ರಿಂದ ಹಿಡಿದು ಎಲ್ಲಾ ಮಾಡಿದ್ದೇನೆ. ಅವನ ನೆನಪುಗಳು ನನ್ನ ಕಾಡ್ತಾ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ವಾಯುಪುತ್ರ ಸಿನಿಮಾ ಮೂಲಕ ಲಾಂಚ್ ಮಾಡಿದ್ವಿ . ಚಿಕ್ಕ ವಯಸ್ಸಿನಲ್ಲಿ ಬಾರದ ಲೋಕಕ್ಕೆ ಹೋದ. ಈಗ ನಮಗೆ ಎನರ್ಜಿ ಅಂದ್ರೆ ಚಿರು ಪುತ್ರ, ಚಿರು ಮಗನನ್ನ ನೋಡಿದ್ರೆ ಮನಸ್ಸಿಗೆ ಸಮಾಧಾನ ಆಗುತ್ತೆ. ಚಿರು ಇಲ್ಲ ಅನ್ನೋ ನೋವು ಕಾಡುತ್ತಲೇ ಇದೆ. ಚಿರು ಫ್ರೆಂಡ್ಸ್ ಚಿರು ಬಗ್ಗೆ ಹೇಳೋದ್ನ ಕೇಳಿದ್ರೆ ಹೆಮ್ಮೆ ಅನಿಸುತ್ತೆ. ತುಂಬಾ ಸಲ ನಾನು ಚಿರುಗೆ ಬೈದಿದ್ದೇನೆ. ಆದ್ರೆ ಮನಸ್ಸಿನಲ್ಲಿ ಆತನ ಮೇಲೆ ಪ್ರೀತಿ ಇತ್ತು ಎಂದಿದ್ದಾರೆ.

ಇದನ್ನೂ ಓದಿ: 4 ವರ್ಷದ ಹಿಂದಿನ ಪುನೀತ್ ಟ್ವೀಟ್​ ವೈರಲ್, ಇದು ನಿಜವಾಗಬಾರದಿತ್ತೇ ಎಂದು ಅಭಿಮಾನಿಗಳ ಕಣ್ಣೀರು

ಇನ್ನು ಅಭಿಮಾನಿಗಳು ಚಿರುವನ್ನ ತುಂಬಾ ಮಿಸ್ ಮಡ್ತಾ ಇದ್ದಾರೆ. ಹೋಗ್ತಾ ಹೋಗ್ತಾ ಯಾವುದೇ ವಿಚಾರವನ್ನಾಗಲಿ ಮರೆಯುತ್ತೀವಿ ಆದ್ರೆ ಚಿರು ಇಲ್ಲ ಅನ್ನೋ ಸತ್ಯ ಮರೆಯಲು ಸಾಧ್ಯವಿಲ್ಲ.  ಪ್ರತಿಯೊಂದು ಕ್ಷಣ ಅವನ ನೆನಪಾಗುತ್ತೆ. ಚಿರುಗೆ ಮೆಸ್ಸೇಜ್ ಮಾಡಬೇಕು ಅನಿಸುತ್ತೆ,ಆದ್ರೆ ಚಿರು  ಇಲ್ಲ. ಚಿರು ನೆನಪು ಫಾರ್ ಎವರ್ ನೋವಿನ ಮಾತುಗಳನ್ನು ಆಡಿದ್ದಾರೆ.

ಅಣ್ಣ ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ

ಇನ್ನು ಅಣ್ಣ ಚಿರು ನೆನೆದು ಭಾವುಕರಾದ ಧೃವ ಸರ್ಜಾ, 2 ವರ್ಷ ಆಗಿದೆ,ಹೇಗಿದ್ದೀರ ಚೆನ್ನಾಗಿದ್ದೀರಾ ಅನ್ನೋ ಮಾತು ನಿಲ್ಲಿಸಿದ್ದೀವಿ. ನಮ್ಮಣ್ಣ ಎಲ್ಲೂ ಹೋಗಿಲ್ಲ,ಇಲ್ಲೇ ಇದ್ದಾನೆ. ಎಲ್ಲೋ ಶೂಟಿಂಗ್ ಹೋಗಿದ್ದಾನೆ ಅಂದುಕೊಳ್ತಾ ಇದ್ದೀನಿ ಎಂದಿದ್ದಾರೆ.

ಅಲ್ಲದೇ, ಬಾಲ್ಯದಿಂದ ಒಟ್ಟಿಗೆ ಇದ್ವಿ,ಬೋರ್ಡಿಂಗ್ ಸ್ಕೂಲ್​ನಲ್ಲಿ ಸಹ ಒಟ್ಟಿಗೆ ಓದಿದ್ವಿ. ನಮ್ಮ ಅಣ್ಣನ ಬಗ್ಗೆ ಪಾಸಿಟಿವ್ ಆಗಿ ಜನ ಹೇಳಿದಾಗ ಖುಷಿ ಆಗುತ್ತೆ. ರಾಯನ್ ನೋಡುವಾಗ ಖುಷಿ ಆಗುತ್ತೆ. ಅಣ್ಣಾ ಇದ್ದಿದ್ರೆ ಮಗನಾ ಜೊತೆ ಮೆರೆಯುತ್ತಿದ್ದ. We miss him,ಆಂಜನೇಯನ ಜೊತೆ ಬೆಳಗ್ಗೆ ಅಣ್ಣಾನ ನೆನಪು ಮಾಡಿಕೊಳ್ಳುತ್ತಿನಿ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಚಿರು ಮರೆಯಾಗಿ ಆಗಲೇ 2 ವರ್ಷ, ರಾಯನ್ ನಗುವಲ್ಲಿ ಅವರಿನ್ನೂ ಜೀವಂತ

ಅಣ್ಣನ ಅಭಿನಯದ ಕೊನೆಯ ಚಿತ್ರ ರಾಜಮಾರ್ಥಾಂಡ ಡಬ್ಬಿಂಗ್ ನಡೆಯುತ್ತಿದೆ. ಕೆಲವೊಂದು ಡೈಲಾಗ್ ಡಬ್ ಮಾಡುವಾಗ ತುಂಬಾ ಕಷ್ಟ ಆಗುತ್ತೆ. ವಿಡಿಯೋ ನೋಡಿದ್ರೆ ತುಂಬಾ ದುಃಖ ಆಗುತ್ತೆ. ಅಣ್ಣನನ್ನ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Published by:Sandhya M
First published: