HOME » NEWS » Entertainment » CHIRANJEEVI PRAISED KICHCHA SUDEEP IN PRERELEASE EVENT OF SYE RAA NARASIMHA REDDY AE

Sye Raa Narashimha Reddy: ಅವುಕು ರಾಜನೇ ಕನ್ನಡಿಗರ ಆಕರ್ಷಣೆಯ ಕೇಂದ್ರ ಬಿಂದು ! ನನ್ನ ಬಿಟ್ರೆ ಕಿಚ್ಚನೇ ಅಂದ್ರು ಚಿರು ! 

Sye Raa Narashimha Reddy: ನನ್ನ ಬಿಟ್ರೆ ನೆಕ್ಸ್ಟ್ ಕಿಚ್ಚನೇ ಅಂತ ಹೇಳಿದ್ರು ಮೆಗಾಸ್ಟಾರ್​. ಬೆಂಗಳೂರಿನಲ್ಲಿ ನಡೆದ ಸೈರಾ ಪ್ರೀ ರಿಲೀಸ್​ ಕಾರ್ಯಕ್ರಮದಲ್ಲಿ ಚಿರು ಕರುನಾಡ ಕಿಚ್ಚನನ್ನು ಪುಂಖಾನುಪುಂಖವಾಗಿ ಹಾಡಿ ಹೊಗಳಿದ್ದಾರೆ.

Anitha E | news18-kannada
Updated:September 30, 2019, 6:37 PM IST
Sye Raa Narashimha Reddy: ಅವುಕು ರಾಜನೇ ಕನ್ನಡಿಗರ ಆಕರ್ಷಣೆಯ ಕೇಂದ್ರ ಬಿಂದು ! ನನ್ನ ಬಿಟ್ರೆ ಕಿಚ್ಚನೇ ಅಂದ್ರು ಚಿರು ! 
ಸೈರಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಚಿರು, ಶಿವಣ್ಣ ಹಾಗೂ ರಾಮ್​ ಚರಣ್​​
  • Share this:
ಟಾಲಿವುಡ್‍ ಮೆಗಾಸಿನಿಮಾ 'ಸೈರಾ ನರಸಿಂಹ ರೆಡ್ಡಿ'. ಕನ್ನಡ ನೆಲದಲ್ಲೂ ಈ ಸಿನಿಮಾ ಅಬ್ಬರ ಆರ್ಭಟ ಜೋರಾಗಿದೆ. ಅದನ್ನ ಇನ್ನಷ್ಟು ದುಪ್ಪಟ್ಟು ಮಾಡಲು ಚಿತ್ರತಂಡ ಬೆಂಗಳೂರಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ಬಗ್ಗೆ ಪುಂಖಾನುಪುಂಖವಾಗಿ ಹೊಗಳಿದರು.

350 ಕೋಟಿ ಬಜೆಟ್‍ನ ಈ ಸಿನಿಮಾ ತೆಲುಗು ನೆಲದಲ್ಲಂತೂ ಸುನಾಮಿಯನ್ನೇ ಎಬ್ಬಿಸೋ ಸೂಚನೆ ಕೊಡ್ತಿದೆ. ತೆಲುಗು ನೆಲದ ಸ್ವತಂತ್ರ ಹೋರಾಟಗಾರ ನರಸಿಂಹರೆಡ್ಡಿಯ ಶೌರ್ಯ, ಸಾಹಸವನ್ನ ಈ ಚಿತ್ರದ ಮೂಲಕ ಕಣ್ತುಂಬಿಕೊಳ್ಳಲು ತೆಲುಗು ಪ್ರೇಕ್ಷಕರು ಕಾತರರಾಗಿದ್ದಾರೆ. ಅದ್ರಂತೆ ತೆಲಂಗಾಣ-ಆಂದ್ರದಲ್ಲಿ 'ಸೈರಾ' ಮೇನಿಯಾನೇ ಕ್ರಿಯೇಟ್ ಆಗಿದೆ.

ಇನ್ನು ಕನ್ನಡ ನೆಲದಲ್ಲೂ 'ಸೈರಾ' ಅಬ್ಬರವೇನು ಕಮ್ಮಿಯಿಲ್ಲ. ಮೆಗಾಸ್ಟಾರ್ ಚಿರಂಜೀವಿ ಚಿತ್ರಗಳಿಗೆ ಬಹಳ ಹಿಂದಿನಿಂದ ಕರ್ನಾಟಕದಲ್ಲಿದೊಡ್ಡ ಮಾರ್ಕೆಟ್ ಇದೆ. ಆದರೆ 'ಸೈರಾ' ವಿಷಯದಲ್ಲಿ ಕೊಂಚ ಹೆಚ್ಚೇ ಪ್ರೀತಿ ಅಭಿಮಾನ ಕನ್ನಡಿಗರಿಗೆ ಹುಟ್ಟಿದೆ. ಅದಕ್ಕೆ ಕಾರಣ ಕಿಚ್ಚ ಸುದೀಪ್.

ಅಭಿನಯಚಕ್ರವರ್ತಿ ಕಿಚ್ಚಸುದೀಪ್ ಅಭಿನಯದ ಪಂಚಭಾಷಾ #ಸೈರಾನರಸಿಂಹರೆಡ್ಡಿ ಚಿತ್ರದ #Pre_Realese_Event ಸಮಾರಂಭಕ್ಕೆ #ಕರುನಾಡಚಕ್ರವರ್ತಿ_ಡಾ_ಶಿವರಾಜ್_ಕುಮಾರ್ 🇮🇳 ಸಾಕ್ಷಿಯಾಗಿದರೆ.#ಸೈರಾಕನ್ನಡಎಲ್ಲೆಡೆ#ಸೈರಾGrandPreReleaseEvent#ಸೈರಾ@KicchaSudeep @KonidelaPro @DirSurender @ShivuSudeep @shivuaDDa @PuneethRajkumar pic.twitter.com/MS0DfwBgv6ಹೌದು, ಕಿಚ್ಚ ಸುದೀಪ್ ಅವುಕು ಎಂಬ ಪ್ರಾಂತ್ಯದ ರಾಜನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಿಟಿಷರ ವಿರುದ್ಧ ರಣಕಹಳೆ ಊದುವ ಸೈರಾ ನರಸಿಂಹರೆಡ್ಡಿಗೆ ಸಾಥ್ ಕೊಡೋ ರಾಜನಾಗಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ.. ಇನ್ನು ಸುದೀಪ್ ವರ್ಷನ್‍ನ ಮೇಕಿಂಗ್ ಝಲಕ್ ನೋಡಿನೇ ಕನ್ನಡಿಗರು ಥ್ರಿಲ್ ಆಗಿದ್ದಾರೆ.. ಸುದೀಪ್ ಕೆರಿಯರ್​ನ ಮತ್ತೊಂದು ಅದ್ಭುತ ಪಾತ್ರ ಇದಾಗಲಿದೆ ಎಂಬ ಮಾತುಗಳನ್ನ ಚಿತ್ರರಸಿಕರು ಹೇಳ್ತಿದ್ದಾರೆ.ಇನ್ನು ಮೆಗಾಸ್ಟಾರ್ ಚಿರಂಜೀವಿ ಕೂಡ ಕಿಚ್ಚನ ಬಗ್ಗೆ ಪುಂಖಾನುಪುಂಕ ಹೊಗಳಿದ್ದಾರೆ. ಸೈರಾ ಸಿನಿಮಾದಲ್ಲಿ ನನ್ನ ಪಾತ್ರವನ್ನ ಬಿಟ್ರೆ ಅತಿಹೆಚ್ಚು ಸ್ಕೋಪ್ ಇರೋದು ಸುದೀಪ್ ಅವ್ರ ಅವುಕು ರಾಜನ ಪಾತ್ರಕ್ಕೆ ಮಾತ್ರ ಅಂತೇಳಿದ್ದಾರೆ.

ಇದನ್ನೂ ಓದಿ: ಕೀನ್ಯಾದ ಆದಿವಾಸಿಗಳೊಂದಿಗೆ ಹಾಡಿ-ಕುಣಿದ ದರ್ಶನ್​: ಇಲ್ಲಿದೆ ಪ್ರವಾಸದ ವಿಡಿಯೋ..!

ಅಂದಹಾಗೆ ಬೆಂಗಳೂರಿನಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸುದೀಪ್ ಭಾಗವಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಚಿರಂಜೀವಿ ಅವರ ಅದ್ಭುತ ಅಮೋಘ ಮಾತುಗಳನ್ನ ಪಕ್ಕ ನಿಂತು ಕೇಳಿಸಿಕೊಳ್ಳಲು ಆಗಲಿಲ್ಲ. ಆದರೆ 'ಕೋಟಿಗೊಬ್ಬ-3' ಶೂಟಿಂಗ್‍ನಲ್ಲಿರೋ ಸುದೀಪ್, ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ತಮ್ಮ ಸಂದೇಶವನ್ನ ಅಲ್ಲಿಂದ್ಲೇ ತಲುಪಿಸೋದನ್ನ ಮರೆಯಲಿಲ್ಲ.

ಮಾನ್ಯತಾ ಟೆಕ್‍ಪಾರ್ಕ್‍ನ ಮೆನ್ಫೋ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿವರಾಜ್‍ಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೊಂದು ಕಳೆಯನ್ನ ತಂದು ಕೊಟ್ಟರು. ಇದೇ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ, ಚಿರು ಫ್ಯಾಮಿಲಿ ಕಾರ್ಯಕ್ರಮ ನಮ್ಮ ಮನೆಯ ಕಾರ್ಯಕ್ರಮವಿದ್ದಂತೆ. ಹೀಗಾಗಿ ಅವರು ಬನ್ನಿ ಅಂತ ಕರೆಯೋದು ಬೇಡ. ಆದೇಶ ಮಾಡಿದ್ರೆ ಸಾಕು ಎನ್ನೋ ಮೂಲಕ, ತಮ್ಮ ಹಾಗೂ ಚಿರು ಕುಟುಂಬದ ನಡುವಿನ ಅನುಬಂಧ ಎಂತದ್ದು ಎಂಬುದನ್ನ ಹೇಳಿದರು.

 


ಶಿವರಾಜ್‍ಕುಮಾರ್​ ಅವರಿಗೆ ಚಿರು ಅವರ ಕುಟುಂಬದ ಮೇಲೆ ಪ್ರೀತಿ ಅಭಿಮಾನ ಎಷ್ಟಿದ್ಯೋ? ಅಷ್ಟೇ ಅಕ್ಕರೆ ಅಭಿಮಾನ ಆಕಡೆಯಿಂದ್ಲೂ ಇದೆ. ಅದಕ್ಕೆ ಸಾಕ್ಷಿ ರಾಮ್‍ಚರಣ್ ಮಾತು. ಕನ್ನಡದಲ್ಲಿ ನನಗೆ ಇಷ್ಟವಾಗುವ ನಟ ಅಂದ್ರೆ ಅದು ಶಿವರಾಜ್‍ಕುಮಾರ್ ಮಾತ್ರ ಎಂಬುದು ಮಗಧೀರನ ಮಾತು. ಒಟ್ಟಾರೆ ಸೈರಾ ಪ್ರೀ-ರಿಲೀಸ್ ಈವೆಂಟ್ ಕಲರ್‍ಫುಲ್ ಆಗಿ ನಡೆಯಿತು ಅಂದ್ರೆ ತಪ್ಪಾಗದು.

KGF: ಥೈಲೆಂಡ್​ ಬೀಚ್​ನಲ್ಲಿ ಬಿಕಿನಿ ತೊಟ್ಟ 'ಕೆ.ಜಿ.ಎಫ್​' ನೀರೆಯ ನೀರಾಟ..!

First published: September 30, 2019, 6:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories