ಮತ್ತೊಂದು ಸಿನಿಮಾ ರಿಮೇಕ್ ಮಾಡಲು ಹೊರಟ ಚಿರಂಜೀವಿ?

ಇದಾದ ನಂತರ ವೇದಾಲಂ ರಿಮೇಕ್ ನಲ್ಲೂ ಸಹ ಚಿರಂಜೀವಿ ಅಭಿನಯಿಸಲಿದ್ದು, ಮೆಹರ್ ರಮೇಶ್ ಆಕ್ಷನ್ ಕಟ್ ನಲ್ಲಿ ಈ ಸಿನಿಮಾ ತೆಲುಗು ರೂಪ ಪಡೆದುಕೊಳ್ಳಲಿದೆ.

ಅಜಿತ್​ ಕುಮಾರ್​- ಮೆಗಾ ಸ್ಟಾರ್ ಚಿರಂಜೀವಿ

ಅಜಿತ್​ ಕುಮಾರ್​- ಮೆಗಾ ಸ್ಟಾರ್ ಚಿರಂಜೀವಿ

  • Share this:
ಮೆಗಾ ಸ್ಟಾರ್ ಚಿರಂಜೀವಿ ಸದ್ಯ ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಮುಂದಿನ ವರ್ಷದ  ಬೇಸಿಗೆಯ ಸಮಯದಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ. ಇದರ ನಡುವೆ ಚಿರಂಜೀವಿ ಬ್ಯಾಕ್ ಟು ಬ್ಯಾಕ್ ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಲು ರೆಡಿಯಾಗಿದ್ದಾರೆ. ಈಗಾಗಲೇ ಲೂಸಿಫರ್ ಸಿನಿಮಾದ ಸಿದ್ಧತೆಗಳು ನಡೆದಿವೆ. ಪ್ರೀ ಪ್ರೊಡಕ್ಷನ್ಸ್ ಕೆಲಸ ಗಳು ನಡೀತಾ ಇವೆ. ಮುಂದಿನ ವರ್ಷ ಈ ಸಿನಿಮಾ ಶೂಟಿಂಗ್ ಸ್ಟಾರ್ಟ್ ಮಾಡಲಿದ್ದು, ವಿವಿ ವಿನಾಯಕ್ ಆಕ್ಷನ್ ಕಟ್ ನಲ್ಲಿ ದೃಶ್ಯರೂಪ ಪಡೆದುಕೊಳ್ಳಲಿದೆ.

ಇದಾದ ನಂತರ ವೇದಾಲಂ ರಿಮೇಕ್ ನಲ್ಲೂ ಸಹ ಚಿರಂಜೀವಿ ಅಭಿನಯಿಸಲಿದ್ದು, ಮೆಹರ್ ರಮೇಶ್ ಆಕ್ಷನ್ ಕಟ್ ನಲ್ಲಿ ಈ ಸಿನಿಮಾ ತೆಲುಗು ರೂಪ ಪಡೆದುಕೊಳ್ಳಲಿದೆ. ಹೀಗಿರುವಾಗಲೇ ಟಾಲಿವುಡ್ ನಲ್ಲಿ ಚಿರಂಜೀವಿ ಕುರಿತಾಗಿ ಮತ್ತೊಂದು ಟಾಕ್ ಕೇಳಿ ಬರುತ್ತಿದೆ. ಅದು ಏನಂದ್ರೆ, ಅಜಿತ್ ನಟನೆಯ ‘ಎನೈ ಅರಿಂದಾಳ್’ ಸಿನಿಮಾ ರಿಮೇಕ್ ಗೆ ಸಹ ಚಿರು ಮುಂದಾಗಿದ್ದಾರೆ ಎನ್ನುವುದು.ತಮ್ಮದೇ ಬ್ಯಾನರ್ ಆದ ಕೊನಿಡಾಲ ಬ್ಯಾನರ್ ನಲ್ಲಿ 'ಎನೈ ಅರಿಂದಾಳ್' ನಿರ್ಮಾಣ ಮಾಡೋ ಉತ್ಸಾಹದಲ್ಲಿದ್ದಾರಂತೆ ಟಾಲಿವುಡ್ ಮೆಗಾಸ್ಟಾರ್.

ಅಂದಹಾಗೆ ಚಿರು ಕೆರಿಯರ್ ನಲ್ಲಿ ಸಾಕಷ್ಟು ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದು, ರಾಜಕೀಯ ರಂಗಕ್ಕೆ ಬ್ರೇಕ್ ಕೊಟ್ಟು, ಮತ್ತೆ ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಮೆಗಾಸ್ಟಾರ್ ಆಯ್ದುಕೊಂಡಿದ್ದು ರಿಮೇಕ್ ಕಥೆಯನ್ನ. ತಮಿಳಿನ‌ ಕತ್ತಿ ಸಿನಿಮಾವನ್ನ ‘ಖೈದಿ’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿ ಕಂಬ್ಯಾಕ್ ಮಾಡಿದ್ದರು ಚಿರಂಜೀವಿ. ಹಾಗೆಯೇ, ಟಾಗೋರ್, ಘರಾನ ಮುಗುಡು, ಹಿಟ್ಲರ್, ಹೀಗೆ ಚಿರು ಕೆರಿಯರ್ ನ ಮೈಲಿಗಲ್ಲಿನ ಸಿನಿಮಾಗಳೆಲ್ಲಾ ರಿಮೇಕ್. ಹೀಗಾಗಿ ಬೇರೆ ಭಾಷೆಯ ಹಿಟ್ ಕಥೆಗಳನ್ನ ತೆಲುಗಿಗೆ ತರುವುದರಲ್ಲಿ ಚಿರು ಯಾವಾಗಲೂ ಮುಂದೆ ಇರುತ್ತಾರೆ.

Airtel Big Offer: ಪ್ರಿಪೇಯ್ಡ್ ಪ್ಲಾನ್​​​ ರೀಚಾರ್ಜ್​ ಮಾಡಿದರೆ ಸಿಗಲಿದೆ ಶೇ.50ರಷ್ಟು ಕ್ಯಾಶ್​ಬ್ಯಾಕ್​!
Published by:Harshith AS
First published: