'ಮೆಗಾಸ್ಟಾರ್' ಚಿರಂಜೀವಿ (Chiranjeevi), ರಾಮ್ ಚರಣ್ (Ram Charan), ಪೂಜಾ ಹೆಗ್ಡೆ (Pooja Hegde) ನಟನೆಯ 'ಆಚಾರ್ಯ' (Acharya) ಸಿನಿಮಾ ರಿಲೀಸ್ ಆಗಿದ್ದು, ಈ ಚಿತ್ರ ನೋಡಿದವರು ಸೋಶಿಯಲ್ ಮೀಡಿಯಾ(Social Media)ದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಅಭಿಮಾನಿಗಳು. ಮಗಧೀರ ಸಿನಿಮಾದಲ್ಲಿ ಅಪ್ಪ ಚಿರಂಜೀವಿ ಹಾಗೂ ಮಗ ರಾಮ್ಚರಣ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಆಚಾರ್ಯ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಅನ್ನುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ (Thrill) ಆಗಿದ್ದರು. ಇದೀಗ ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಬಾಕ್ಸಾಫೀಸ್ನಲ್ಲಿ ಕಮಾಲ್ ಮಾಡುವಲ್ಲಿ ಆಚಾರ್ಯ ಸಿನಿಮಾ ಸೋತಿದೆ. ಮೆಗಾ ಸ್ಟಾರ್ ಚಿರಂಜೀವಿ ಹಾಗೂ ರಾಮ್ಚರಣ್ ಕೆರಿಯರ್ನಲ್ಲೇ ಈ ಮಟ್ಟದ ಸೋಲು ನೋಡಿರಲಿಲ್ಲ.
ಅಪ್ಪ-ಮಗನ ಸಿನಿಮಾ ಅಟ್ಟರ್ಫ್ಲಾಪ್!
ಚಿತ್ರ ರಿಲೀಸ್ಗೂ ಮುನ್ನ ಕೂಡ ಹೆಚ್ಚಿನ ಕ್ರೇಜ್ ಇರಲಿಲ್ಲ. ಚಿತ್ರದ ರಿಲೀಸ್ ಬಳಿಕವೂ ಬಕ್ಸಾಫೀಸ್ ಗಳಿಕೆಯಲ್ಲಿ ಚಿತ್ರ ಸೋಲುಂಡಿದೆ. ಚಿತ್ರ ರಿಲೀಸ್ ಆದ ಮೊದಲ ದಿನವೇ 'ಆಚಾರ್ಯ' ಬಗ್ಗೆ ನೆಗೆಟಿವ್ ಕಮೆಂಟ್ಗಳು ಬಂದಿವೆ. ಮತ್ತು ಚಿತ್ರಕ್ಕೆ ಯಾವುದೇ ರೀತಿಯ ಪಾಸಿಟಿವ್ ವಿಮರ್ಶೆಗಳು ಬಂದಿಲ್ಲ. ಸಿನಿಮಾ ನೋಡಿದವರೆಲ್ಲ ಯಾಕಾದರೂ ಸಿನಿಮಾಗೆ ಬಂದ್ವಿ ಅಂತ ತಲೆ ಚೆಚ್ಚಿಕೊಳ್ಳುತ್ತಿದ್ದಾರೆ. ಈ ರೀತಿಯ ಸಿನಿಮಾವನ್ನು ಚಿರಂಜೀವಿ ಮಾಡಬಾರದಿತ್ತು ಎಂದು ಹೇಳುತ್ತಿದ್ದಾರೆ. ಚಿತ್ರಮಂದಿರದಲ್ಲಿ 30 ನಿಮಿಷ ಕೂತು ಸಿನಿಮಾ ನೋಡಿದರೆ ಸಾಕು ಎದ್ದು ಹೋಗೋಣ ಅನ್ನಿಸುವಂತಿದೆ ಈ ಸಿನಿಮಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಆಚಾರ್ಯ ಸಿನಿಮಾ 100 ಕೋಟಿ ಲಾಸ್!
'ಆಚಾರ್ಯ' ಚಿತ್ರ ಮೊದಲ ದಿನ ಕಳಪೆ ಮಟ್ಟದ ಗಳಿಕೆ ಕಂಡು, ನಂತರ ಎರಡನೇ ದಿನವೂ 'ಆಚಾರ್ಯ' ಉತ್ತಮ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಕುಸಿಯುತ್ತಿದೆ. ಈಗಾಗಲೆ ಚಿತ್ರ 50% ನಷ್ಟ ಅನುಭವಿಸುತ್ತಿದೆ ಎಂದು ಟಾಲಿವುಡ್ನಲ್ಲಿ ವರದಿ ಆಗಿದೆ. 40 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗ ಆಚಾರ್ಯ ಚಿತ್ರಕ್ಕೆ 100 ಕೋಟಿ ನಷ್ಟ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ವೆಬ್ ಸಿರೀಸ್ ಲೋಕಕ್ಕೆ ಶಿವಣ್ಣ ಎಂಟ್ರಿ! ಮಗಳ ನಿರ್ಮಾಣದಲ್ಲೇ ನಟಿಸ್ತಿದ್ದಾರೆ ಸೆಂಚುರಿ ಸ್ಟಾರ್
ಬಿಗ್ ಬಜೆಟ್ ಆಚಾರ್ಯ ಸಿನಿಮಾ ಹೇಗಿದೆ?
'ಆಚಾರ್ಯ' ಚಿತ್ರವು ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಆಗಿದ್ದು, ಸಾಮಾಜಿಕ ಸಂದೇಶವಿದೆ.ನಿಜ ಜೀವನದ ತಂದೆ-ಮಗನಾದ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ ಕಾಂಬಿನೇಶನ್ನಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ರಾಮ್ ಚರಣ್ ಅವರ 'ಮಗಧೀರ' ಚಿತ್ರದ ಒಂದು ಹಾಡಿನಲ್ಲಿ ಚಿರು ಕಾಣಿಸಿಕೊಂಡಿದ್ದರು. ಆಚಾರ್ಯ ಸಿನಿಮಾದ ಮೊದಲ ಭಾಗ ಅಷ್ಟೊಂದು ಚೆನ್ನಾಗಿಲ್ಲ, ಎರಡನೇ ಭಾಗ ಔಟ್ಡೇಟೆಡ್ ಆಗಿದೆ ಎಂದು ಸಿನಿಮಾ ನೋಡಿದ ವೀಕ್ಷಕರು ಹೇಳುತ್ತಿದ್ದಾರೆ. ಕೆಲ ದೃಶ್ಯಗಳು ಮಾತ್ರ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: Rashmika Mandanna ಈ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇದ್ದಿದ್ದು ಒಳ್ಳೆದಾಯ್ತು! ಅಟ್ಟರ್ ಫ್ಲಾಪ್ ರೀ
ಕಮಾಲ್ ಮಾಡಿಲ್ಲ ಅಪ್ಪ-ಮಗನ ಕಾಂಬೋ!
ಪೂಜಾ ಹೆಗಡೆ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಮೊದಲ ಭಾಗ ಆರ್ಡಿನರಿಯಾಗಿದೆ, 2ನೇ ಭಾಗ ಅಭಿಮಾನಿಗಳಿಗಾಗಿ ಮೀಸಲಿಡಲಾಗಿದೆ, ಅಲ್ಲಿ ಫೈಟ್, ಬಿಜಿಎಂ, ಹಾಡುಗಳೆಲ್ಲ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ತುಂಬ ಎಮೋಶನಲ್ ಆಗಿದೆ, ಹಿಂದು ಧರ್ಮದ ಕುರಿತು ಮೆಸೇಜ್ ಇದೆ. ಆದರೆ, ಅಪ್ಪ-ಮಗನ ಜೋಡಿ ವರ್ಕೌಟ್ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಳೇ ಬಾಟಲಿಗೆ ಹೊಸ ನೀರು ತುಂಬಿಸಿಕೊಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ