Coffee Nadu Chandu: ಕಾಫಿನಾಡಿನಲ್ಲೇ ಚಂದುಗೆ ಜನರಿಂದ ಧಮ್ಕಿ! ಅಪಾಯಿಂಟ್ಮೆಂಟ್​ ಫಿಕ್ಸ್ ಮಾಡಿ ಅಣ್ಣನ್ನ ಭೇಟಿ ಮಾಡ್ಬೇಕಂತೆ

ಸದ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಚಂದು ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಚಂದು ಆಟೋ ಒಳಗಡೆ ಕೂತಿದ್ದಾರೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಚಂದುಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. 

ಕಾಫಿ ನಾಡಿದ ಚಂದು

ಕಾಫಿ ನಾಡಿದ ಚಂದು

  • Share this:
ನಾನು ಶಿವಣ್ಣ(Shivanna) , ಪುನೀತ್ (Puneeth) ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್. ಸೋಷಿಯಲ್​ ಮೀಡಿಯಾ (Social Media) ಓಪನ್​ ಮಾಡಿದರೆ ಸಾಕು ನಮಸ್ಕಾರ ನಾನು ಕಾಫಿ ನಾಡಿನ ಚಂದು (Coffee Nadu Chandu) ಎಂಬ ವಿಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ದಿಲ್ಲಿಯಿಂದ ಹಳ್ಳಿವರೆಗೂ ಕಾಫಿನಾಡಿದ ಚಂದು ಹವಾ ಜೋರಾಗಿದೆ. ಎಲ್ಲೇಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಹೀಗಿದ್ದ ಚಂದು ಅಣ್ಣನ ಪರಿಸ್ಥಿತಿ ಈಗ ಹೇಗಾಗಿದೆ ನೋಡಿ. ಬರೀ ಬರ್ತ್​ಡೇ ಸಾಂಗ್​ಗಳಿಂದ ವೈರಲ್ ಆಗಿದ್ದ ಚಂದು ಅಣ್ಣ, ಈ ಬಾರಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲೇ ಚಂದುಗೆ ಫುಲ್​ ಕ್ಲಾಸ್​!

ಸದ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಚಂದು ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಚಂದು ಆಟೋ ಒಳಗಡೆ ಕೂತಿದ್ದಾರೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಚಂದುಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಜನ ಆಟೋ ಒಡಿಸಲು ಬಿಡದೆ ಹಾಡು ಹೇಳುವಂತೆ ಕಾಫಿ ನಾಡು ಚಂದುಗೆ ಪೀಡಿಸುತ್ತಿದ್ದಾರೆ. ಇದಲ್ಲದೇ ಚಿಕ್ಕಮಗಳೂರಿನ ಜನರೇ ಚಂದುಗೆ ಅವಾಜ್​ ಹಾಕಿದ್ದಾರೆ. ನಮ್ಮಿಂದ ನೀನು ಹೋಗೋಲೇ ಎಂದು ಬೈಯ್ದು ಕಳಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಎಲ್ಲರ ಮೊಬೈಲ್​ನಲ್ಲೂ ಈ ವಿಡಿಯೋ ಹರಿದಾಡುತ್ತಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ?

ಚಿಕ್ಕಮಗಳೂರಿನ ಜನರು ಕಾಫಿ ನಾಡಿನ ಚಂದುಗೆ ಬರ್ತ್​ಡೇ ಹಾಡು ಹೇಳಲು ಕೇಳಿದ್ದಾರೆ. ಅದಕ್ಕೆ ಚಂದು ಈಗ ಆಗಲ್ಲ ಎಂದಿದ್ದಾರೆ. ಯಾಕೆ ಆಗಲ್ಲ ಚಿಕ್ಕಮಗಳೂರಿನವರೇ ನಿನಗೆ ಬೇಡವಾ ಎಂದು ಕೇಳಿದ್ದಾರೆ. ಅದಕ್ಕೆ ಚಂದು ನಾನೂ ಆಟೋ ಓಡಿಸೋಕೆ ಬಂದಿರೋದು ಈಗ ಆಗಲ್ಲ. ನಾಲ್ಕು ಗಂಟೆಗೆ ಬನ್ನಿ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಕೋಪಗೊಂಡ ಜನರು ಹೋಗೋಲೋ ನಮ್ಮಿಂದ ನೀನು ಎಂದು ಹೇಳಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.


ಇದನ್ನೂ ಓದಿ: ಕೊನೆಗೂ ಆಸೆ ಈಡೇರಿಸಿಕೊಂಡ ಕಾಫಿ ನಾಡಿನ ಚಂದು! ಶಿವಣ್ಣ ಕಂಡು ಕುಣಿದು, ಕುಪ್ಪಳಿಸಿದ ವೈರಲ್​ ಸ್ಟಾರ್​

ಶಿವಣ್ಣನ ಭೇಟಿಯಾದ ಕಾಫಿ ನಾಡಿನ ಚಂದು!

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ  ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! ಶುರುವಾಯ್ತು ಹೊಸ ಅಭಿಯಾನ

ಕಾಫಿನಾಡಿನ ಚಂದು ಹಿನ್ನೆಲೆ ಏನು?

ಮನಸ್ಸಿಗೆ ಬಂದಥ ಹಾಡು, ಮನಸ್ಸಿಗೆ ಬಂದತಹ ಸಾಹಿತ್ಯವನ್ನು ಹೇಳುತ್ತಾ ಫೇಮಸ್​ ಆದವರು ಈ ಚಂದು. ಮೊದಲು ಇನ್​ಸ್ಟಾಗ್ರಾಮ್​ನಲ್ಲಿ ಸ್ನೇಹಿತರಿಗೆ ಬರ್ತ್​ಡೇಗೆ ವಿಶ್​ ಮಾಡುತ್ತಿದ್ದರು. ಇವರ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಕಾಫಿನಾಡಿನ ಚಂದುಗೆ ಇನ್​ಸ್ಟಾಗ್ರಾಮ್​ನಲ್ಲಿ ಸದ್ಯಕ್ಕೆ 1 ಲಕ್ಷದ 24 ಸಾವಿರ ಜನ ಫಾಲೋವರ್ಸ್​ ಇದ್ದಾರೆ. ಇದು ನಿಜಕ್ಕೂ ಮೆಚ್ಚುವಂಥ ಕಾರ್ಯವೇ. 2 ವಾರಗಳಿಂದ ಸಿಕ್ಕಾಪಟ್ಟೆ ಪ್ರಸಿದ್ಧಿಗೆ ಬಂದಿದ್ದಾರೆ. ಇವರು ಮೂಲತಃ ಚಿಕ್ಕಮಗಳೂರಿನ ಮೂಡಗೆರೆಯ ಭಾಗದ ಮಲ್ಲಂದೂರಿನ ಭಾಗಮನೆ ಆಸುಪಾಸಿನವರು. ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​​ ಅವರ ಊರಿನವರಂತೆ.
Published by:Vasudeva M
First published: