Sandalwood: 'ಇನ್' ಸಿನಿಮಾದ  ಫಸ್ಟ್​ ಲುಕ್ ಪೋಸ್ಟರ್ ರಿಲೀಸ್​ ಮಾಡಿದ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

ನಟಿ ಪಾವನಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಇನ್ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

'ಇನ್'​ ಕನ್ನಡ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಮಾಡಿದ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

'ಇನ್'​ ಕನ್ನಡ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಮಾಡಿದ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಹೊಸ ಹೊಸ ಪ್ರಯೋಗ ಮತ್ತು ವಿಭಿನ್ನ ಶೈಲಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ತಂಡಗಳ ಸಂಖ್ಯೆ ಮೆಲ್ಲನೆ ಏರುತ್ತಿದೆ. ಇಂತಹದ್ದೇ ಹೊಸಬರ ತಂಡವೊಂದು (New Movie Team) ಈಗ ಸಿನಿಮಾವೊಂದನ್ನು ನಿರ್ಮಿಸುತ್ತಿದೆ. ರುದ್ರಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ಯುವ ನಿರ್ದೇಶಕ ಬಡಿಗೇರ್ ದೇವೇಂದ್ರ (Badiger Devendra). ಒಬ್ಬಳೇ ಯುವತಿ ಒಂಟಿ ಮನೆ ಸುತ್ತ ಲಾಕ್ ಡೌನ್ ಪರಿಣಾಮದ ಕುರಿತ ವಿಭಿನ್ನ ಕಥಾ ಹಂದರವುಳ್ಳ ಚಿತ್ರ ನಿರ್ದೇಶನ ಮಾಡಿದ್ದಾರೆ. ಪತ್ರಕರ್ತ ಶಂಕರ ಪಾಗೋಜಿ ಅವರೊಂದಿಗೆ ಕಥೆ,ಚಿತ್ರಕತೆ, ಸಂಭಾಷಣೆ ಜವಾಬ್ದಾರಿ ನೋಡಿಕೊಂಡಿದ್ದಾರೆ.

ನಟಿ ಪಾವನಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಇನ್' ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

'ಇನ್​' ಕನ್ನಡ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​


ಸಿನಿಮಾದ ನಾಯಕಿ ಒಂದು ಸಣ್ಣ ಹಳ್ಳಿಯ ಹುಡುಗಿ. ತನ್ನ ಕನಸಿನ ನಗರಿ ಬೆಂಗಳೂರಿನಲ್ಲಿ ಅದ್ಧೂರಿ ಜೀವನ ನಡೆಸಬೇಕೆಂಬ ಕನಸು ಕಟ್ಡಿಕೊಂಡವಳು. ಅವಳು ಬೆಂಗಳೂರಿನಲ್ಲಿ ಒಬ್ಬಳೇ ಇದ್ದು ನೌಕರಿ ಮಾಡಿಕೊಂಡು ತನ್ನದೇ ಆದ ಸುಂದರ ಜೀವನ ರೂಪಿಸಿಕೊಳ್ಳುತ್ತಿರುವಾಗಲೇ ಕೋವಿಡ್ ಕಾರಣದಿಂದ ಇಡೀ ಜಗತ್ತಿಗೆ ಲಾಕ್​ಡೌನ್ ಜಾರಿಯಾಯಿತು. ಇದು ಅಕ್ಷರಶಃ ಎಲ್ಲರಿಗೂ ಗೃಹ ಬಂಧನವಾಯಿತು. ಲಾಕ್​ಡೌನ್ ಆರಂಭದ ಕೆಲವು ದಿನ ಖುಷಿ ಖುಷಿ ಎನಿಸಿದರೂ, ಲಾಕ್​ಡೌನ್ ಪರಿಣಾಮ ಕಂಪನಿಗಳಲ್ಲಿ ಸಂಬಳ ಕಡಿತ, ಉದ್ಯೋಗ ಕಡಿತದಿಂದ ಜನರು ತಿಂಗಳ ಇಎಂ ಐ ತುಂಬಲು ಕಷ್ಟ ಪಡುವಂತಾಯಿತು. ಇದನ್ನೇ ಸಿನಿಮಾದ ಕಥಾವಸ್ತುವನ್ನಾಗಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ವಿಭಿನ್ನ ಪಾತ್ರದೊಂದಿಗೆ ನಾಲ್ಕು ವರ್ಷಗಳ ನಂತರ ಬಣ್ಣದ ಲೋಕಕ್ಕೆ ಮರಳಿದ ನಟಿ Prema

ಲಾಕ್​ಡೌನ್ ಪರಿಣಾಮ ಜೀವನ ಎದುರಿಸಲಾಗದೇ ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಲಾಕ್​ಡೌನ್ ತಿಂಗಳು ಗಟ್ಟಲೇ ಮುಂದುವರಿದ ಪರಿಣಾಮ ಮನೆಯಲ್ಲಿ ಒಂಟಿಯಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದ ಯುವತಿ ಪ್ರತಿ ದಿನ ಸಮಸ್ಯೆಗಳನ್ನು ಎದುರಿಸುವಂತಾಯಿತು. ತಿಂಗಳುಗಟ್ಟಲೆ ಒಂದು ಮನೆಯೊಳಗೆ (ಇನ್) ಬಂಧಿಯಾಗುವ ಯುವತಿ ಈ ಸಂದರ್ಭದಲ್ಲಿ ಜೀವನವನ್ನು ಹೇಗೆ ನಿರ್ವಹಿಸುತ್ತಾಳೆ. ಲಾಕ್ ಡೌನ್ ಅವಳಿಗೆ ವರವೋ... ಶಾಪವೋ ಅದನ್ನು ಹೇಗೆ ಎದುರಿಸಿ ಜೀವನ ಸಾಗಿಸುತ್ತಾಳೆ ಎನ್ನುವುದೇ 'ಇನ್' ಚಿತ್ರದ ಕಥಾವಸ್ತು.

ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಬಡಿಗೇರ್ ದೇವೇಂದ್ರ, ಲಾಕ್​ಡೌನ್ ಸಂದರ್ಭದಲ್ಲಿ ಏನಾದರೂ ಪ್ರಯೋಗ ಮಾಡಬೇಕೆಂದು ಸ್ನೇಹಿತ ಹಾಗೂ ಪತ್ರಕರ್ತ ಶಂಕರ ಪಾಗೋಜಿ ಜೊತೆ ಈ ಚಿತ್ರದ ಕುರಿತು ಚರ್ಚಿಸಿದೆ. ನಟಿ ಪಾವನ ಗೌಡ ಅವರೂ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲಿದೆ. ಜನರು ನಮ್ಮ ಪ್ರಯತ್ನವನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾರ್ತಿಕ ದೀಪೋತ್ಸವದಲ್ಲಿ ಭಾಗಿಯಾದ ಕನ್ನಡತಿ Pranitha Subhash

ಒಂದು ವಿಭಿನ್ನ ಹಾಗೂ ಪ್ರಯೋಗಾತ್ಮಕ ಪಾತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಮಹಾನಗರದಲ್ಲಿ ಏಕಾಂಗಿಯಾಗಿ ಜೀವನ ನಡೆಸುವ ಯುವತಿಯರಿಗೆ ಈ ಚಿತ್ರ ಒಳ್ಳೆಯ ಸಂದೇಶ ಮತ್ತು ಸ್ಪೂರ್ತಿದಾಯಕವಾಗಲಿದೆ ಎನ್ನುವ ವಿಶ್ವಾಸವನ್ನು ಚಿತ್ರದ ನಾಯಕಿ ಪಾವನಾ ಗೌಡ ಅಭಿಪ್ರಾಯ ಪಟ್ಟಿದ್ದಾರೆ

ಕರುಣಾಕರ ಟಿ.ಎನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರಕತೆ ಮತ್ತು ಸಂಭಾಷಣೆಯನ್ನು ಶಂಕರ ಪಾಗೋಜಿ ಹಾಗೂ ಬಡಿಗೇರ್ ದೇವೇಂದ್ರ ಬರೆದಿದ್ದಾರೆ.
ಚಿತ್ರಕ್ಕೆ ಭರತ್ ನಾಯ್ಕ್ ಅವರ ಸಂಗೀತವಿದೆ.
Published by:Anitha E
First published: