ಮಗನ ಸಿನಿಮಾದ ಚಿತ್ರೀಕರಣ ನೋಡಲು ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ

news18
Updated:August 11, 2018, 5:03 PM IST
ಮಗನ ಸಿನಿಮಾದ ಚಿತ್ರೀಕರಣ ನೋಡಲು ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ
news18
Updated: August 11, 2018, 5:03 PM IST
ರಕ್ಷಾ ಜಾಸ್ಮೀನ್​, ನ್ಯೂಸ್​ 18 ಕನ್ನಡ

'ಸೀತಾರಾಮ ಕಲ್ಯಾಣ' ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಸುದ್ದಿ ಮಾಡುತ್ತಿರೋ ಸಿನಿಮಾ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಭರದಿಂದ ಸಾಗಿದ್ದು, ಭರ್ಜರಿ ಸೆಟ್‍ನಲ್ಲಿ ಎಲ್ಲ ತಂಡದ ಕಲಾವಿದರು ಹಾಜರಿದ್ದಾಗಲೇ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಸಹ ಸೆಟ್‍ಗೆ ಬಂದಿದ್ದು ವಿಶೇಷವಾಗಿತ್ತು.

ಸೆಟ್ಟೇರಿದಾಗಿನಿಂದಲೂ ಸುದ್ದಿಯಲ್ಲಿರೋ 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ  ನಾಯಕನಾಗಿ ನಿಖಿಲ್ ಕುಮಾರ್, ನಟಿ ರಚಿತಾ ರಾಮ್, ತಮಿಳು ನಟ ಶರತ್ ಕುಮಾರ್, ಆದಿತ್ಯ ಮೆನನ್ ಹಾಗೂ ಮಧುಬಾಲ ಸೇರಿದಂತೆ ಎಲ್ಲ ಕಲಾವಿದರು ಅಂತಿಮ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಮಗನ ಸಿನಿಮಾದ ಚಿತ್ರೀಕರಣ ನೋಡಲು ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ,  'ಚಿತ್ರತಂಡದ ಹಾಗೂ ಚಿತ್ರ ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ, ಒಬ್ಬ ನಿರ್ಮಾಪಕನಾಗಿ ಭೇಟಿ ನೀಡಿದ್ದೇನೆ' ಎಂದರು.

ಸಿನಿಮಾದ ಅಂತಿಮ ಭಾಗದ ಚಿತ್ರೀಕರಣಕ್ಕೆ ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಇದ್ದು, ಹಾಡುಗಳು ಮತ್ತು ಕೊಂಚ ಟಾಕಿ ಪೋಷನ್ ಅಷ್ಟೆ ಬಾಕಿ ಉಳಿದಿವೆ. ಹೀಗಾಗಿ ಇದೇ ತಿಂಗಳ 20ರಿಂದ ಊಟಿಯಲ್ಲಿ ಚಿತ್ರದ ಚಿತ್ರೀಕರಣ ಮುಂದುವರೆಯಲಿದ್ದು, ದಸರಾ ಹಬ್ಬಕ್ಕೆ ರಿಲೀಸ್ ಪ್ಲಾನ್ ನಡೆಸಿದೆ ಚಿತ್ರತಂಡ.

 
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...