Chhorii Movie: ದೆವ್ವದ ಪಾತ್ರ ಮಾಡಿದ ನಟಿ ಆಸ್ಪತ್ರೆಗೆ ದಾಖಲು, ತೊಟ್ಟ ವೇಷದ ಹಿಂದೆ ಭಯಾನಕ ಕತೆಯಿದೆ!

ಚಿತ್ರೀಕರಣದ ಕೊನೆಯ ದಿನ ನಾನು ಏನನ್ನೂ ತಿನ್ನಲಿಲ್ಲ ಅಥವಾ ಕುಡಿಯಲಿಲ್ಲ ಏಕೆಂದರೆ ನಾನು ಏನನ್ನೂ ಸೇವಿಸಿದರೂ, ವಾಂತಿ ಮಾಡಿಕೊಳ್ಳುತ್ತಿದ್ದೆ ಸಲಾಡ್‌ ತಿನ್ನಲೂ ಕೂಡ ಸಾಧ್ಯವಾಗಲಿಲ್ಲ ಎಂದೂ ಯಾನೀ ಭಾರದ್ವಾಜ್‌ ಹೇಳಿದರು

ನಟಿ ಯಾನೀ ಭಾರದ್ವಾಜ್‌

ನಟಿ ಯಾನೀ ಭಾರದ್ವಾಜ್‌

  • Share this:
ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ (Amazon Prime Video) ಇತ್ತೀಚೆಗೆ ಬಿಡುಗಡೆಯಾದ ಹಾರರ್ ಚಲನಚಿತ್ರ ಛೋರಿಯಲ್ಲಿ ನಟಿ ಯಾನೀ ಭಾರದ್ವಾಜ್‌ (Yaaneea Bharadwaj) ಚೋಟಿ ಮಾಯಿ (Choti Maayi )ಪಾತ್ರವನ್ನು ನಿರ್ವಹಿಸಿದ್ದಾರೆ. ನಟಿಯ ಬಹುಪಾಲು ದೇಹದ ಭಾಗಗಳನ್ನು ಪ್ರಾಸ್ಥೆಟಿಕ್ಸ್‌ನಿಂದ ಮುಚ್ಚಲಾಗಿತ್ತು. ಆಕೆ ಸುಟ್ಟ ಮಹಿಳೆಯಂತೆ ಕಾಣುವಂತೆ ಮಾಡಲಾಗಿತ್ತು ಮತ್ತು ಆಕೆಯ ಭಯಾನಕ, ಪ್ರೇತದಂತಹ ನೋಟವನ್ನು ಚಲನಚಿತ್ರದಲ್ಲಿ ಸಾಕಷ್ಟು (Appreciated) ಪ್ರಶಂಸಿಸಲಾಗಿತ್ತು. ಇನ್ನು, ‘’ಪ್ರಾಸ್ಥೆಟಿಕ್ಸ್‌ ಹಾಕಲು 3-4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ತೆಗೆದುಹಾಕಲು 2 ಗಂಟೆಗಳಿಗಿಂತ(2 hours to Remove) ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದರಂತೆ, ನಾನು ಸೆಟ್‌ನಲ್ಲಿ ಎಲ್ಲರಿಗಿಂತ ಮುಂಚೆಯೇ ಕಾಣಿಸಿಕೊಳ್ಳಬೇಕಿತ್ತು’’ ಎಂದು ನಟಿ ಯಾನೀ ಭಾರದ್ವಾಜ್‌ ಆಕೆಯ ರೂಪಾಂತರದ ( Transformation) ಬಗ್ಗೆ ಹೇಳಿದರು.

ಶೂಟಿಂಗ್‌ ವೇಳೆ ನಟಿ ಪಟ್ಟ ಕಷ್ಟ
“ಸ್ಕ್ರೀನ್‌ನಲ್ಲಿ ಹೇಗೆ ಕಾಣುತ್ತದೆ ಎನ್ನುವುದಕ್ಕಿಂತಲೂ ಅದನ್ನು ಸಾಧಿಸುವುದು ತುಂಬಾ ಕಷ್ಟಕರವಾಗಿತ್ತು. ದೇಹದಿಂದ ಎಲ್ಲವನ್ನೂ ತೆಗೆದುಹಾಕುವುದು ತುಂಬಾ ನೋವಿನಿಂದ ಕೂಡಿದೆ. ಮೈನವಿರೇಳಿಸುವ ಅನುಭವವಿತ್ತು. ಅದನ್ನು ತೆಗೆಯುವಾಗ ಹೊಟ್ಟೆಯಲ್ಲಿದ್ದ ಚಿಕ್ಕ ಕೂದಲು ಎಳೆದಾಡುತ್ತಿತ್ತು. ನನಗೆ ಆ ಭಾಗದಲ್ಲಿ ದದ್ದುಗಳು ಬರುತ್ತಿತ್ತು ಮತ್ತು ರಕ್ತಸ್ರಾವವೂ ಆಗುತ್ತಿತ್ತು. ನನ್ನ ಕಿವಿ, ಕೈ ಮತ್ತು ಮುಖವನ್ನು ಪ್ರಾಸ್ಥೆಟಿಕ್ಸ್‌ನಿಂದ ಮುಚ್ಚಲಾಗುತ್ತಿತ್ತು’’ ಎಂದು ಚಿತ್ರದ ಶೂಟಿಂಗ್‌ ವೇಳೆ ನಟಿ ತಾನು ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Hayu: ಭಾರತದಿಂದ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅನ್ನು ದೂರ ಸರಿಸಲು ಬಂದಿದೆ ಹೊಸ OTT ಸೇವೆ!

ಪೇನ್‌ ಕಿಲ್ಲರ್‌ ಮಾತ್ರೆ ಸೇವನೆ
ಅಲ್ಲದೆ, ಸ್ಪೆಷಲ್ ಮೇಕಪ್ ಹಾಕಿಕೊಂಡು ಆಹಾರ ತಿನ್ನಲಾಗುತ್ತಿರಲಿಲ್ಲ. ನಾನು ಪ್ರತಿದಿನ ಪೇನ್‌ ಕಿಲ್ಲರ್‌ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ನಾನು ಜ್ವರವನ್ನು ಅನುಭವಿಸುತ್ತಿದ್ದೆ. ನನ್ನ ಶ್ವಾಸಕೋಶಗಳು ಊದಿಕೊಂಡವು ಮತ್ತು ನನ್ನನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದೂ ಶೂಟಿಂಗ್‌ ಅನುಭವದ ಬಗ್ಗೆ ಮತ್ತಷ್ಟು ಹೇಳಿಕೊಂಡಿದ್ದಾರೆ. ಕೆಲವೇ ಜನರಿಗೆ ಪ್ರಾಸ್ಥೆಟಿಕ್ಸ್ ಹಾಕಿಕೊಂಡು ನಟಿಸಲು ಅವಕಾಶ ಸಿಗುತ್ತದೆ ಮತ್ತು ನಾನು ಆ ರೀತಿಯಲ್ಲಿ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಜಗತ್ತಿನ ಸಿನಿಮಾದಲ್ಲಿ, ಪ್ರಾಸ್ಥೆಟಿಕ್ಸ್‌ ಎಂದರೆ ನೀವು ಹೇಗೆ ಕಾಣುತ್ತೀರಿ ಎನ್ನುವುದಲ್ಲ ಬದಲಾಗಿ ಹೇಗೆ ವರ್ತಿಸುತ್ತೀರಿ ಎನ್ನುವುದು ಮುಖ್ಯ.

ಪೂರ್ತಿ ಪ್ರಾಸ್ಥೆಟಿಕ್ಸ್
ನನ್ನ ಕೈನ ಒಂದು ಸೀನ್‌ ತೆಗೆಯಬೇಕಾದರೂ ನಾನು ಪೂರ್ತಿ ಪ್ರಾಸ್ಥೆಟಿಕ್ಸ್ ಮಾಡಿಸಿಕೊಳ್ಳುತ್ತಿದ್ದೆ. ಇನ್ನು, ಪ್ರಾಸ್ಥೆಟಿಕ್ಸ್‌ನಿಂದ ನಾನು ಒಂದು ನಿರ್ದಿಷ್ಟ ರೀತಿಯಲ್ಲಿ ಕಾಣುತ್ತೇನೆ ಎಂದು ನನಗೆ ತಿಳಿದಿತ್ತು. ಆದರೆ, ಅದು ನನ್ನ ದೇಹ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿರಲಿಲ್ಲ. ಚಿತ್ರೀಕರಣದ ಕೊನೆಯ ದಿನ ನಾನು ಏನನ್ನೂ ತಿನ್ನಲಿಲ್ಲ ಅಥವಾ ಕುಡಿಯಲಿಲ್ಲ. ಏಕೆಂದರೆ ನಾನು ಏನನ್ನೂ ಸೇವಿಸಿದರೂ, ವಾಂತಿ ಮಾಡಿಕೊಳ್ಳುತ್ತಿದ್ದೆ. ಸಲಾಡ್‌ ತಿನ್ನಲೂ ಕೂಡ ಸಾಧ್ಯವಾಗಲಿಲ್ಲ” ಎಂದೂ ಯಾನೀ ಭಾರದ್ವಾಜ್‌ ಹೇಳಿದರು.

ಮೇಡ್ ಇನ್ ಹೆವನ್
ಯಾನೀ ಈ ಹಿಂದೆ ‘ಮೇಡ್ ಇನ್ ಹೆವನ್’ (2019) ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಒಂದು ಕಥೆಯಲ್ಲಿ ಪಾತ್ರಧಾರಿಯಾಗಿದ್ದರು. “ಪ್ರಾಮಾಣಿಕವಾಗಿ, ದೊಡ್ಡ ಬ್ಯಾನರ್‌ಗೆ ಸಹಿ ಹಾಕಲು ನಾನು ಇಷ್ಟಪಡುತ್ತೇನೆ ಆದರೆ ನನಗೆ ಫಿಲ್ಮಿ ಹಿನ್ನೆಲೆ ಇಲ್ಲ ಮತ್ತು ಅದನ್ನು ಪ್ರಾರಂಭಿಸುವುದು ತುಂಬಾ ಕಷ್ಟ. ನಾನು ಛೋರಿಗೆ ಸಹಿ ಮಾಡಿದಾಗ ನನ್ನ ಖಾತೆಯಲ್ಲಿ 500 ರೂ. ಮಾತ್ರ ಇತ್ತು. ಈ ಹಿನ್ನೆಲೆ ನಾನು ಆ ಚಿತ್ರವನ್ನು ಮಾಡಬೇಕಾಗಿತ್ತು. ನನ್ನ ಬಾಡಿಗೆ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ ಮತ್ತು ಅದಕ್ಕಾಗಿ ನನ್ನ ಪೋಷಕರನ್ನು ಕೇಳಲು ನಾನು ಬಯಸುವುದಿಲ್ಲ”ಎಂದೂ ನಟಿ ಹೇಳಿದರು.

ನಟನಾ ವೃತ್ತಿ ಬಗ್ಗೆ
ನಟನಾ ವೃತ್ತಿಗೆ ಪ್ರವೇಶಿಸುವ ತನ್ನ ನಿರ್ಧಾರದ ಬಗ್ಗೆ ಯಾನೀ ಹಂಚಿಕೊಂಡಿರುವುದು ಹೀಗೆ.. “ನನ್ನ ಚಿಕ್ಕ ದಿನಗಳಲ್ಲಿ, ನಟನೆಯು ಸ್ಟಾರ್‌ಗಳಿಗೆ ಮಾತ್ರ ಎಂದು ನನಗೆ ಅನಿಸುತ್ತಿತ್ತು. ನಾನು ಟಿವಿಯಲ್ಲಿ ಚಲನಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇನೆ ಮತ್ತು ಅವೆಲ್ಲವೂ ಸ್ಟಾರ್‌ಗಳ ಬಗ್ಗೆ. ಅದು ನನಗೆ ನಟಿಸಲು ಎಂದಿಗೂ ಪ್ರೇರಣೆ ನೀಡಲಿಲ್ಲ. ಚೆನ್ನಾಗಿ ಕಾಣಬೇಕು, ಕುಣಿಯಬೇಕು ಎಂಬ ಸಂದೇಶ ರವಾನಿಸುತ್ತಿತ್ತು.

ಇದನ್ನೂ ಓದಿ: Amazon Prime Subscription ದರ ಹೆಚ್ಚಳ; ಮಾಸಿಕ ಸೇರಿದಂತೆ ವಾರ್ಷಿಕ ಪ್ಲಾನ್​ ಬೆಲೆ ಇಂತಿದೆ

ಇದಕ್ಕೆ ನಟನೆಯ ಅಗತ್ಯವಿಲ್ಲ ಮತ್ತು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಬೇರೆ ಏನಾದರೂ ಬೇಕು ಎಂದು ನಾನು ಭಾವಿಸಿದೆ. ನಟನೆಗೆ ಬರಲುHead Onನನಗೆ ಸ್ಫೂರ್ತಿ ನೀಡಿತು. ಯೋಧನ ಪಾತ್ರ ಮಾಡಬೇಕೆಂಬುದು ನನ್ನ ಕನಸು. ನನಗೆ ಕತ್ತಿ ಕಾಳಗ ತಿಳಿದಿದೆ ಮತ್ತು ಬಹುಶಃ ನಾನು ಅದನ್ನು ಮಾಡಲು ಬಯಸುತ್ತೇನೆ’’ ಎಂದೂ ಛೋರಿ ಚಿತ್ರ ನಟಿ ಯಾನೀ ಭಾರದ್ವಾಜ್‌ ನ್ಯೂಸ್‌ 18ಗೆ ಹೇಳಿದ್ದಾರೆ.
Published by:vanithasanjevani vanithasanjevani
First published: