ಕೊರೋನಾ ಲಾಕ್ಡೌನ್ ಆರಂಭವಾದಾಗಿನಿಂದ ನಟ ಉಪೇಂದ್ರ ಅವರು ಸಮಾಜ ಸೇವೆ ಮಾಡುತ್ತಿದ್ದಾರೆ. ಕನ್ನಡದ ಕಲಾವಿದರು ಸೇರಿದಂತೆ ಕಷ್ಟದಲ್ಲಿರುವ ಸಾಮಾನ್ಯ ಜನರಿಗೂ ನೆರವಾಗುತ್ತಿದ್ದಾರೆ. ದಿನಸಿ ಕಿಟ್ ಜೊತೆ ಹಣ್ಣು-ತರಕಾರಿ ವಿತರಿಸುತ್ತಾ ಜನರಿಗೆ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಆಸರೆಯಾಗಿದ್ದಾರೆ. ಇನ್ನು ಬೆಳೆದ ಬೆಳೆ ಮಾರಲು ಸಮಸ್ಯೆ ಎದುರಿಸುತ್ತಿರುವ ರೈತರಿಂದ ಅದನ್ನು ಖರೀಸಿಸುವ ಮೂಲಕ ನೇಗಿಲ ಯೋಗಿಯ ಕಷ್ಟಕ್ಕೂ ಸಪಂದಿಸುತ್ತಿದ್ದಾರೆ. ಹೀಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯದ ಕೆಲಸಗಳಲ್ಲೂ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಾಜ ಸೇವೆಯ ಜೊತೆಗೆ ಪ್ರಜಾಕೀಯದ ಕೆಲಸಗಳನ್ನೂ ಮಾಡುತ್ತಿದ್ದಾರೆ.
ಪ್ರಜಾಕೀಯದ ಕೆಲಸಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಉಪೇಂದ್ರ ಅವರು ಕಳೆದ ಕೆಲವು ದಿನಗಳಿಂದ ಒಂದರ ಹಿಂದೆ ಒಂದರಂತೆ ವಿವಾದಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚೆಗಷ್ಟೆ ಉಪೇಂದ್ರ ಅವರು ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಯೊಂದರಿಂದ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.
ಹಿರಿಯ ಕಲಾವಿದರು ಬೆಂಗಳೂರು ನಾಗೇಶ್ ನಿಮ್ಮ ಆಶೀರ್ವಾದ ಎಲ್ಲರ ಮೇಲಿರಲಿ 🙏🙏🙏 pic.twitter.com/Y7sJlKoIQt
— Upendra (@nimmaupendra) May 22, 2021
ಇದನ್ನೂ ಓದಿ: Khushi Kapoor: ತನ್ನನ್ನ ತಾನು ಬೆಡ್ ರೂಮ್ ರಾಜಕುಮಾರಿ ಎಂದು ಕರೆದುಕೊಂಡ ನಟಿ ಶ್ರೀದೇವಿಯ ಮಗಳು ಖುಷಿ ಕಪೂರ್..!
ಪ್ರಜಾಕೀಯದ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜಾತಿ ವಿಚಾರವಾಗಿ ಕೆಲ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉಪೇಂದ್ರ ಅವರು ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ. ಆ ವಿಡಿಯೋದಲ್ಲಿ ಜಾತಿ ಎನ್ನುವ ಪದ ಬಳಸುವುದು ತಪ್ಪು ಎಂದಿದ್ದಾರೆ. ಜಾತಿ ವಿಚಾರವಾಗಿ ಉಪೇಂದ್ರ ಅವರು ಕೊಟ್ಟಿರುವ ಪ್ರತಿಕ್ರಿಯೆ ಕುರಿತಾಗಿ ಚೇತನ್ ಸಿಟ್ಟಿಗೆದ್ದಿದ್ದಾರೆ.
ಉಪೇಂದ್ರ ಅವರ ಹೆಸರು ತೆಗೆದುಕೊಳ್ಳದೆ ಚೇತನ್ ಅವರು ಒಂದು ವಿಡಿಯೋ ಮೂಲಕ ಬುದ್ಧಿಮಾತು ಹೇಳಿದ್ದಾರೆ.
View this post on Instagram
ಹಲವಾರು ಉದಾಹರಣೆ ಕೊಟ್ಟಿರುವರ್ಥ. ಚೇತನ್, ಜಾತಿ ವ್ಯವಸ್ಥೆ ಸಮಾಜದಲ್ಲಿ ಒಂದು ಕಾಯಿಲೆ ಇದ್ದಂತೆ. ಅದನ್ನು ಗುರುತಿಸಿ ಅದನ್ನು ಹೋಗಲಾಡಿಸಬೇಕು ಎಂದಿದ್ದಾರೆ. ಜಾತಿ ವ್ಯವಸ್ಥೆಯ ಬಗ್ಗೆ ಆ ಸೆಲೆಬ್ರಿಟಿ ಕೊಟ್ಟಿರುವ ಹೇಳಿಕೆ ಅವರಲ್ಲಿರುವ ಮಾನಸಿಕ ಪ್ರಭುದ್ಧತೆಯನ್ನು ಎತ್ತಿ ತೋರಿಸುತ್ತದೆ. ಜಾತಿಗೂ ಬಡತನಕ್ಕೂ ಇರುವ ಸಂಬಂಧ ಕಾಣುವುದಿಲ್ಲ ಅಂದರೆ ನಿಮಗೆ ಕುರುಡತನ ಕಾಡುತ್ತಿದೆ ಎಂದರ್ಥ. ನೀವು ನಿಮ್ಮ ಗಾಜಿನ ಮನೆಯಿಂಧ ಇಳಿದು ನಮ್ಮ ಜತೆ ಬನ್ನಿ ರಾಜ್ಯದ ಮೂಲೆ ಮೂಲೆಗೂ ಕರೆದುಕೊಂಡು ಹೋಗಿ ಏನು ಸತ್ಯ ಎಂದು ತೋರಿಸಿಕೊಡುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೋನಾದಿಂದ ಗುಣಮುಖರಾಗಿ 3 ತಿಂಗಳು ಕಳೆಯುವ ಮುನ್ನವೇ ಕೋವಿಡ್ ಲಸಿಕೆ ಪಡೆದ ಶ್ವೇತಾ ಚೆಂಗಪ್ಪ
ಜಾತಿ ಮೀರಿ, ಧರ್ಮ ಮೀರಿ ಪಕ್ಷ ಕಟ್ಟುವುದಾಗಿ ಹೇಳುತ್ತಿರುವ ನೀವು, ಕರ್ನಾಟಕದ ಹೋರಾಟದ ಚರಿತ್ರೆ ಒಮ್ಮೆ ಓದಿಕೊಳ್ಳಿ. ಬಸವಾದಿ ಶರಣದ ಚರಿತ್ರೆ ಓದಿ. ಇವರೆಲ್ಲ ಏನೇನು ಸಾಧನೆ ಮಾಡಿದ್ದಾರೆ ಓದಿಕೊಳ್ಳಿ. ನಿಮಗೆ ಪುಸ್ತಕ ಬೇಕೆಂದರೆ ಹೇಳಿ ನಾನೇ ನಿಮಗೆ ಕೊಡುತ್ತೇನೆ. ಹಾಗೆಯೇ ನಮ್ಮ ಸಂವಿಧಾನ ಓದಿಕೊಂಡು ನಿಜವಾದ ಬುದ್ಧಿವಂತರಾಗಿ ಎಂದು ಖಾರವಾಗಿ ನುಡಿದಿದ್ದಾರೆ ಚೇತನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ