Avane Srimannarayana: ಸ್ಟಾರ್​ ನಟರು ಬಿಡುಗಡೆ ಮಾಡಲಿರುವ ಅವನೇ ಶ್ರೀಮನ್ನಾರಾಯಣ ಟ್ರೈಲರ್​ನ ಪುಟ್ಟ ಝಲಕ್​ ಇಲ್ಲಿದೆ ನೋಡಿ..!

Avane Srimannarayana Trailer: ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೈಲರ್ ಬಿಡುಗಡೆ​ ದಿನಾಂಕ ಪ್ರಕಟಿಸಿದಾಗಿನಿಂದ ರಕ್ಷಿತ್​ ಶೆಟ್ಟಿ ಟ್ವಿಟರ್​ನಲ್ಲಿ ಟ್ರೈಲರ್​ಗೆ ಸಂಬಂಧಿಸಿದ ಒಂದೊಂದು ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

Anitha E | news18-kannada
Updated:November 28, 2019, 2:50 PM IST
Avane Srimannarayana: ಸ್ಟಾರ್​ ನಟರು ಬಿಡುಗಡೆ ಮಾಡಲಿರುವ ಅವನೇ ಶ್ರೀಮನ್ನಾರಾಯಣ ಟ್ರೈಲರ್​ನ ಪುಟ್ಟ ಝಲಕ್​ ಇಲ್ಲಿದೆ ನೋಡಿ..!
ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಇದೇ ತಿಂಗಳು 27 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
  • Share this:
ರಕ್ಷಿತ್​ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾದ ಎರಡು ಟೀಸರ್​​ ಬಿಡುಗಡೆಯಾಗಿದ್ದು, ಈಗ ಟ್ರೈಲರ್​ ರಿಲೀಸ್​ಗೆ ಕ್ಷಣ ಗಣನೆ ಆರಂಭವಾಗಿದೆ.

'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟ್ರೈಲರ್ ಬಿಡುಗಡೆ​ ದಿನಾಂಕ ಪ್ರಕಟಿಸಿದಾಗಿನಿಂದ ರಕ್ಷಿತ್​ ಶೆಟ್ಟಿ ಟ್ವಿಟರ್​ನಲ್ಲಿ ಟ್ರೈಲರ್​ಗೆ ಸಂಬಂಧಿಸಿದ ಒಂದೊಂದು ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ನ.23ರಂದು ಟ್ರೈಲರ್​ ಬಿಡುಗಡೆ ದಿನಾಂಕವನ್ನು ರಕ್ಷಿತ್​ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದರು. ನಂತರ ನಿನ್ನೆ ಅಂದರೆ ನ.26ರಂದು ಸಿನಿಮಾದಲ್ಲಿನ ಒಂದು ಅಂಶದ ಕುರಿತಾದ ಒಂದು ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಅದು ಶಾಂತಿ ಪ್ರಿಯ ಪಕ್ಷ ಯಾರದ್ದು, ಅದರ ನಾಯಕರು ಯಾರು ಎಂದು ಟ್ರೈಲರ್​ನಲ್ಲಿ ನೋಡಿ ಎಂದು ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ.ಶಾಂತಿ ಪ್ರಿಯ ಪಾರ್ಟಿ ಯಾರದ್ದು ಅಂತ ನಿಮಗೆ Trailer ನೋಡಿದ್ರೆ ಗೊತ್ತಾಗುತ್ತೆ!

ಈಗ ಒಂದು ಪಿಸ್ತೂಲ್​ ಅನ್ನು ಇಟ್ಟು, ಇವತ್ತು ನಾನು ಈ ವಿಡಿಯೋದಲ್ಲಿ ಇದ್ದೀನಿ, ಆದರೆ ನಾಳೆ ನಾರಾಯಣನ ಕೈಯಲ್ಲಿ ಇರ್ತೀನಿ ಅಂತ ಬರೆದು ಮತ್ತೊಂದು ವಿಡಿಯೋವನ್ನು ಕೆಲವೇ ಗಂಟೆಗಳ ಹಿಂದೆಯಷ್ಟೆ ಪೋಸ್ಟ್​ ಮಾಡಿದ್ದಾರೆ.ಇದನ್ನೂ ಓದಿ: ವೈರಲ್​ ಆಗುತ್ತಿದೆ ನಟಿ ನಯನತಾರಾ ಟಿವಿ ನಿರೂಪಕಿಯಾಗಿದ್ದಾಗಿನ ವಿಡಿಯೋ..!

ಸ್ಟಾರ್​ ನಟರು ಬಿಡುಗಡೆ ಮಾಡಲಿದ್ದಾರೆ

ಕನ್ನಡ ದೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಟ್ರೈಲರ್​ ಅನ್ನು ಬೇರೆ ಭಾಷೆಗಳ ಸ್ಟಾರ್​ ನಟರು ಬಿಡುಗಡೆ ಮಾಡಲಿದ್ದಾರಂತೆ. ತೆಲುಗು ಟ್ರೈಲರ್ ಅನ್ನು ನಾನಿ, ತಮಿಳಿನಲ್ಲಿ ಧನುಷ್​, ಮಲಯಾಳಂನಲ್ಲಿ ನಿವಿನ್​ ಪೌಲಿ ರಿಲೀಸ್​ ಮಾಡಿದರೆ, ಕನ್ನಡ ಹಾಗೂ ಹಿಂದಿ ಟ್ರೈಲರ್​ ಅನ್ನು ಖುದ್ದು ರಕ್ಷಿತ್​ ಬಿಡುಗಡೆ ಮಾಡುತ್ತಾರಂತೆ.

ಇನ್ನು ಪಂಚ ಭಾಷೆಗಳಲ್ಲಿ ಎಂಟ್ರಿ ಕೊಡಲಿರುವ 'ಅವನೇ ಶ್ರೀಮನ್ನಾರಾಯಣ' ಮತ್ತೊಮ್ಮೆ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಲಿದ್ದಾನೆ ಅನ್ನೋ ಟಾಕ್​ ಈಗ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

Nabha Natesh: ಸಿನಿಮಾ ಬಿಟ್ಟು ನಾಡಿನಿಂದ ಕಾಡಿಗೆ ಹೋದ ಸ್ಯಾಂಡಲ್​ವುಡ್​ ನಟಿ ನಭಾ ನಟೇಶ್​..!

First published: November 27, 2019, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading