ಮಾರ್ಚ್ 19ಕ್ಕೆ ಕರ್ನಾಟಕದಲ್ಲಿ RRR Pre-Release Event, `ರಾಜರತ್ನ’ನಿಗೆ ಈ ಕಾರ್ಯಕ್ರಮ ಅರ್ಪಣೆ!

ಜೂ.ಎನ್​ಟಿಆರ್ (Jr.NTR)​, ರಾಮಚರಣ್ (Ramcharan)​, ಆಲಿಯಾ ಭಟ್ (​Alia Bhatt), ಎಸ್​​.ಎಸ್​.ರಾಜಮೌಳಿ ಪ್ರಮುಖ ರಾಜ್ಯಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ.ಇದೀಗ  ಮಾರ್ಚ್ 19ಕ್ಕೆ ರಾಜ್ಯದಲ್ಲಿ ಆರ್​ಆರ್​ಆರ್​​ ಪ್ರೀ ರಿಲೀಸ್​ ಇವೆಂಟ್​ ಕಾರ್ಯಕ್ರಮ ಆಯೋಜಿಸಲಾಗಿದೆ.

ಆರ್​ಆರ್​ಆರ್​ ಚಿತ್ರತಂಡ

ಆರ್​ಆರ್​ಆರ್​ ಚಿತ್ರತಂಡ

  • Share this:
ಮಾರ್ಚ್​ 25ರಂದಯ ‘ಆರ್​ಆರ್​ಆರ್’​​ (RRR) ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ. ಹೀಗಾಗಿ ಚಿತ್ರತಂಡ ಈಗಾಗಲೇ ಬೆಂಗಳೂರು (Bengaluru), ಆಂಧ್ರ, ತಮಿಳುನಾಡು, ಕೇರಳ, ಮುಂಬೈನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಎಸ್​.ಎಸ್​.ರಾಜಮೌಳಿ (S.S Rajamouli) ಅಂದರೆ ಅಲ್ಲಿ ಹೊಸತನ ಇರುತ್ತೆ. ಅದು ಚಿತ್ರದಲ್ಲಿ ಆಗಲಿ, ಸಿನಿಮಾದ ಪ್ರಚಾರದಲ್ಲಿ ಆಗಲಿ, ವಿಭಿನ್ನವಾಗಿಯೇ ಪ್ರಮೋಷನ್​ ಮಾಡಿದ್ದಾರೆ.  ಸಿನಿಮಾ ಬಿಡುಗಡೆಗೆ ಇನ್ನೂ 13 ದಿನ ಬಾಕಿ ಇರುವಾಗಲೇ ರಾಜಮೌಳಿ ಪ್ರಚಾರದ ಅಖಾಡಕ್ಕೆ ಎಂಟ್ರಿಕೊಟ್ಟಿದ್ದರು. ಜೂ.ಎನ್​ಟಿಆರ್ (Jr.NTR)​, ರಾಮಚರಣ್ (Ramcharan)​, ಆಲಿಯಾ ಭಟ್ (​Alia Bhatt), ಎಸ್​​.ಎಸ್​.ರಾಜಮೌಳಿ ಪ್ರಮುಖ ರಾಜ್ಯಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ.ಇದೀಗ  ಮಾರ್ಚ್ 19ಕ್ಕೆ ರಾಜ್ಯದಲ್ಲಿ ಆರ್​ಆರ್​ಆರ್​​ ಪ್ರೀ ರಿಲೀಸ್​ ಇವೆಂಟ್​ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಕಾರ್ಯಕ್ರಮ!

ಕನ್ನಡದ ಹೆಮ್ಮೆಯ ಸಂಸ್ಥೆ ಕೆವಿಎನ್​ ಪ್ರೊಡಕ್ಷನ್​ ಭಾರತದ ಬಹುನಿರೀಕ್ಷಿತ ಸಿನಿಮಾ ರಾಜಮೌಳಿ ನಿರ್ದೇಶನದ ‘ರೌದ್ರ ರಣಂ ರುಧಿರಂ’ ಸಿನಿಮಾದ ಎಲ್ಲಾ ಭಾಷೆಗಳ ಕರ್ನಾಟಕ ರಾಜ್ಯದ ವಿತರಣ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ. ಭಾರತೀಯ ಚಿತ್ರರಂಗದ ಅತಿ ದೊಡ್ಡ ಸಿನಿಮಾವೆಂದೆ ಬಿಂಬಿತವಾರಗಿರುವ ‘ಆರ್​ಆರ್​ಆರ್’
​ ಚಿತ್ರದ ಪ್ರೀ ರಿಲೀಸ್​ ಇವೆಂಟ್​ ಅನ್ನು ಕೆ.ವಿ.ಎನ್​ ಪ್ರೋಡಕ್ಷನ್​ ದಾಖಲೆ ಮಟ್ಟಕ್ಕೆ ಆಯೋಜಿಸಿದೆ. ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಯಾರು ಕಂಡು ಕೇಳರಿಯದ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮಾರ್ಚ್ 19ರ ಸಂಜೆ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನಡೆಯುತ್ತಿದೆ.

ಪವರ್​ ಸ್ಟಾರ್​ ಪುನೀತ್​ಗೆ ಈ ಕಾರ್ಯಕ್ರಮ ಅರ್ಪಣೆ!

ಇನ್ನೂ ಈ ಕಾರ್ಯಕ್ರಮವನ್ನು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ‘ಆರ್​ಆರ್​ಆರ್​’ ಚಿತ್ರತಂಡ ಅರ್ಪಿಸುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 20 ನಿಮಿಷಕ್ಕೆ ತಲುಪವಷ್ಟು ದೂರದಲ್ಲಿ ಇವೆಂಟ್​ ನಡೆಯುತ್ತಿದೆ. ಇನ್ನೂ ಇದೇ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ಟ್ರಿಬ್ಯೂಟ್​ ನೀಡುವ ಪರ್ಫಾಮೆನ್ಸ್​ ಕೂಡ ಇದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ದಾಖಲೆ ಮಟ್ಟದ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: 'RRR' ಪ್ರಮೋಷನ್, ಪೋಸ್ಟರ್​​ಗೆ ಎಷ್ಟು ಖರ್ಚಾಗಿದೆ? ಈ ಹಣದಲ್ಲಿ ಇನ್ನೊಂದು ಚಿತ್ರ ಮಾಡಬಹುದಿತ್ತು!

ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆ!

ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್​ ಇವೆಂಟ್​ ಕಾರ್ಯಕ್ರಮ ನಡೆಯಲಿದೆ. ಎಲ್ಲ ಘಟಾನುಘಟಿ ನಾಯಕರು ಒಂದೇ ವೇದಿಕೆ ಮೇಲೆ ಸೇರತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಜೂ.ಎನ್​ಟಿಆರ್, ಹಾಗೂ ರಾಮಚರಣ್​ಗೆ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇವರೆಲ್ಲ ಈ ದಾಖಲೆ ಮಟ್ಟದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಒಂದೇ ವೇದಿಕೆಯಲ್ಲಿ ಘಟಾನುಘಟಿಗಳ ಸಮಾಗಮ!

ಆತಿಥಿಗಳಾಗಿ ಮುಖ್ಯಮಂತ್ರಿ ಬೊಸವರಾಜ ಬೊಮ್ಮಾಯಿ, ರಾಕಿಂಗ್​ ಸ್ಟಾರ್​ ಯಶ್, ಶಿವರಾಜ್​ಕುಮಾರ್​, ಉಪೇಂದ್ರ ಹಾಗೂ ಧ್ರುವ ಸರ್ಜಾ ಆಗಮಿಸುತ್ತಿದ್ದಾರೆ. ಈ ಮೂಲಕ ಕಾರ್ಯಕ್ರಮದ ರಂಗನ್ನು ಇವರು ಹೆಚ್ಚಿಸಲಿದ್ದಾರೆ.ಇವರ ಜತೆಗೆ ಇಡೀ ಸಿನಿಮಾ ತಂಡ ಇರಲಿದೆ ಎನ್ನಲಾಗಿದೆ. ನಿರ್ದೇಶಕ ಎಸ್​.ಎಸ್​. ರಾಜಮೌಳಿ, ನಟ ಜ್ಯೂ.ಎನ್​ಟಿಆರ್​, ರಾಮ್​ ಚರಣ್​, ನಟಿ ಆಲಿಯಾ ಭಟ್​ ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿಯೇ ಈ ಕಾರ್ಯಕ್ರಮ ನಡೆಯುತ್ತಿದೆ.

ಇದನ್ನೂ ಓದಿ: RRR ಮೇಲೆ KGF- 2 ಅಭಿಮಾನಿಗಳ ಕಿಡಿ: KGF ಪ್ರಚಾರದ ವಿಳಂಬಕ್ಕೆ ರಾಜಮೌಳಿ ಕಾರಣ ಎನ್ನುತ್ತಿದ್ದಾರೆ ಅಭಿಮಾನಿಗಳು

52 ಸಾವಿರ ಚದುರಡಿಯ ಬೃಹತ್​ ಎಲ್ಇಡಿ ಸ್ಕ್ರೀನ್​ ಹಾಗೂ 42 ಬೃಹತ್​ ಲೇಸರ್​​ ಲೈಟ್​ಗಳ ಬಹುದೊಡ್ಡ ಸ್ಟೇಜ್​ ಇದಕ್ಕಾಗಿ ಸಿದ್ದವಾಗುತ್ತಿದೆ. ಇದು ಅಭಿಮಾನಿಗಳ ಕಣ್ಣಿಗೆ ಹಬ್ಬದಂತಿರುತ್ತದೆ. ಸುಮಾರು 100 ಎಕರೆ ಜಾಗದ ಬೃಹತ್​ ಮೈದಾನದಲ್ಲಿ ಈ ಅದ್ದೂರಿ ಕಾರ್ಯಕ್ರಮ ಆಯೋಜನೆ ಆಗುತ್ತಿದೆ.
Published by:Vasudeva M
First published: