ಚಿತ್ರ ನಿರ್ಮಾಣ (Producing Film) ಮಾಡುವುದು ಸುಲಭದ ಮಾತಲ್ಲ. ಚಿತ್ರ ಸಕ್ಸಸ್ ಆಗಿ ಗಳಿಕೆ ಮಾಡಿದ್ರೆ ಒಳ್ಳೆಯದು. ಹಾಕಿದ ಬಂಡವಾಳ ವಾಪಸ್ ಬರುತ್ತದೆ. ಕೊನೆ ಪಕ್ಷ ಭರ್ಜರಿ ಗಳಿಕೆ ಮಾಡದಿದ್ದರೂ ಸಹ ಚಿತ್ರಕ್ಕೆ ಹಾಕಿ ಹಣ ವಾಪಸ್ ಬಂದರೆ ಸಾಕು. ಇಲ್ಲದಿದ್ದರೆ ನಿಜಕ್ಕೂ ಕಷ್ಟಕರವೇ. ಈ ಸಿನಿಮಾ ಎಂಬುದು ಮಾಯಾಬಜಾರ್ ಇದ್ದಂತೆ, ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪ್ರೇಕ್ಷಕ ಪ್ರಭು ಯಾರ ಕೈ ಹಿಡಿಯುತ್ತಾನೆ ಎಂಬುದು ತಿಳಿಯಲ್ಲ. ಇದೀಗ ಸಿನಿಮಾ ಮಾಡಲು ಹೋಗಿ ಕೈ ಸುಟ್ಟುಕೊಂಡ ನಿರ್ಮಾಪಕ (Producer) ಒಬ್ಬ ಪೊಲೀಸರ (Police) ಅತಿಥಿಯಾಗಿದ್ದಾರೆ. ಏನಿದು ಸ್ಟೋರಿ? ಇಲ್ಲಿದೆ ನೋಡಿ.
ಮಂಜುನಾಥ್ ಎನ್ನುವ ನಿರ್ಮಾಪಕ ಸಿನಿಮಾವೊಂದನ್ನು ಮಾಡಿ ಸೋತಿದ್ದರು. ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಾವುದೇ ಗಳಿಕೆ ಮಾಡಿರಲಿಲ್ಲ. ಹಾಗಾಗಿ ಹಾಕಿದ್ದ ಹಣ ಮುಳುಗಿ ಹೋಗಿತ್ತು. ಇದರ ನಂತರ ನಿರ್ಮಾಪಕ ಮಾಡಿದ ಕೆಲಸ ಮಾತ್ರ ನಿಜಕ್ಕೂ ಅವಮಾನಕರ. ಕೋಮಲ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಮಂಜುನಾಥ್, ಈ ಸಿನಿಮಾದಲ್ಲಿ ನಷ್ಟ ಅನುಭವಿಸಿದ ಹಿನ್ನಲೆ ರಾಜಾಜಿನಗರದಲ್ಲಿ ರಿಯಲ್ ಎಸ್ಟೇಟ್ ಆಫೀಸ್ ಶುರುಮಾಡಿ, ಬ್ಯುಸಿನೆಸ್ ಆರಂಭಿಸಿದ್ದರು. ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಹೆಸರಿನಲ್ಲಿ ಕಂಪನಿ ತೆರೆದಿದ್ದ ನಿರ್ಮಾಪಕ ಮಾಡಿದ್ದು ಮಾತ್ರ ವಂಚನೆಯ ಕೆಲಸ.
ನಿರ್ಮಾಪಕ ಸೇರಿ ನಾಲ್ವರ ಬಂಧನ
ನಿರ್ಮಾಪಕ ಮಂಜುನಾಥ್ ಕೊಟ್ಟಿದ್ದ ಒಂದು ಜಾಹೀರಾತನ್ನು ನೋಡಿ ಪುಷ್ಪಕುಮಾರ್ ಎಂಬಾತ, ಇವರನ್ನು ಸಂಪರ್ಕಸಿ ಮೋಸ ಹೋಗಿದ್ದಾರೆ. ಹೌದು, ಈ ಆಸಾಮಿ ಕಡಿಮೆ ಬೆಲೆಗೆ ಸೈಟ್ ಕೊಡಿಸೋದಾಗಿ ಹಂತ ಹಂತವಾಗಿ 2 ಲಕ್ಷ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಪುಷ್ಪಕುಮಾರ್ ಆರೋಪ ಮಾಡಿ, ದೂರು ದಾಖಲಿಸಿದ್ದು, ಈ ಹಿನ್ನೆಲೆ ರಾಜಾಜಿ ನಗರ ಪೊಲೀಸರು ನಿರ್ಮಾಪಕ ಮಂಜುನಾಥ್ ಅವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮತ್ತೆ ಕಿರಿಕ್ ಮಾಡಲು ರಕ್ಷಿತ್ ಶೆಟ್ಟಿ ರೆಡಿ, ಹೇಗಿರಲಿದೆ ಪಾರ್ಟಿ ಸೀಕ್ವೆಲ್?
ನನಗೆ ಬೇರೆ ಯಾರದ್ದೋ ಸೈಟ್ ತೋರಿಸಿ ಕೊಡಿಸೋದಾಗಿ ನಂಬಿಸಿದ್ರು, ಅವರು ಕೇಳಿದಾಗ ನಾನು ಕೇಳಿದಷ್ಟು ಹಣ ನೀಡಿದ್ದೇನೆ. ಈ ಸೈಟ್ಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ ನಿರ್ಮಾಪಕನ ಬಂಡವಾಳ ಬಯಲಾಗಿದ್ದು, ಮೋಸ ಆಗಿದ್ದು ತಿಳಿದು ದೂರು ನೀಡಿದ್ದೇನೆ ಎಂದು ಪುಷ್ಪಕುಮಾರ್ ತಿಳಿಸಿದ್ದಾರೆ. ರಾಜಾಜಿನಗರ ಠಾಣೆಗೆ ಪುಷ್ಪಕುಮಾರ್ ದೂರು ನೀಡಿದ್ದು, ದೂರು ದಾಖಲಿಸಿಕೊಂಡು ನಿರ್ಮಾಪಕ ಮಂಜುನಾಥ್ ಸೇರಿ ನಾಲ್ವರ ಬಂಧಿಸಲಾಗಿದೆ. ಮಂಜುನಾಥ್, ಶಿವಕುಮಾರ್, ಗೋಪಾಲ್, ಚಂದ್ರಶೇಖರ್ ಬಂಧಿತ ಆರೋಪಿಗಳಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಲೆ ಮರೆಸಿಕೊಂಡಿದ್ದ ಆರೋಪಿಗಳು
ಇನ್ನು ಸದ್ಯದ ಮಾಹಿತಿ ಪ್ರಕಾರ, ಸಿನಿಮಾಗೆ ಹಾಕಿದ್ದ ಬಂಡವಾಳ ಮುಗಿದ ಕಾರಣ ಆರೋಪಿ ನಿರ್ಮಾಪಕ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ, ಹಾಗಾಗಿ ಪುಷ್ಪಕುಮಾರ್ ಅವರಿಗೆ ನೆಲಮಂಗಲದ ನ್ಯೂ ಗಾರ್ಡನ್ ಸಿಟಿ ಲೇಔಟ್ನಲ್ಲಿ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಂಬಿಸಿದ್ದರು, ನಂತರ ಸಂಗೀತಾ ಭಟ್ ಎನ್ನುವವರ ಹೆಸರಿನಲ್ಲಿ ಮಂಜುರಾಗಿದ್ದ ಸೈಟ್ ಅನ್ನು ಕೊಡುವುದಾಗಿ ನಂಬಿಸಿ, ಅವರ ನಕಲಿ ಸಹಿ ಇರುವ ನಕಲಿ ಪೇಪರ್ ಅನ್ನು ನೀಡಿ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ
ಅಲ್ಲದೇ ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಸಬೂಬು ಹೇಳಿದ್ದು, ಸೈಟ್ ಅಥವಾ ಹಣವನ್ನು ಸಹ ಮರಳಿ ನೀಡಿಲ್ಲ. ಅವರ ಆಫೀಸ್ ಬಳಿ ಹೋದಾಗ ಸಹ ತಲೆಮೆರೆಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ