ಸಿನಿಮಾದವ್ರಿಗೇ ಚಳ್ಳೆಹಣ್ಣು ತಿನಿಸಿದ ಅರುಣಾ ಕುಮಾರಿ ಕತೆ ಈಗ ಸಿನಿಮಾ ಆಗ್ತಿದೆ...!

ವಂಚನೆಗೆ ಒಳಗಾದ ನಾಗವರ್ಧನ್​​ ಅವರೇ ಸಿನಿಮಾ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ. ನಾಗವರ್ಧನ್​​ 2015ರಲ್ಲಿ ಅರುಣಾ ಕುಮಾರಿಯಿಂದ ವಂಚನೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ನಾಗವರ್ಧನ್​​ ಅರುಣಾ ಕುಮಾರಿ ಮೇಲೆ ಆರೋಪ ಮಾಡಿದ್ದರು.

ದರ್ಶನ್-ಉಮಾಪತಿ ಅರುಣಾ ಕುಮಾರಿ

ದರ್ಶನ್-ಉಮಾಪತಿ ಅರುಣಾ ಕುಮಾರಿ

 • Share this:
  ಬೆಂಗಳೂರು(ಜು.16): ಸದ್ಯ ಸ್ಯಾಂಡಲ್​ವುಡ್​ ಅಂಗಳದಲ್ಲಿ ಆರೋಪಿ ಅರುಣಾ ಕುಮಾರಿ ವಂಚನೆಯದ್ದೇ ಸದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸ್ತಿ ಪತ್ರಗಳನ್ನು ನಕಲು ಮಾಡಿ​ ಅವರಿಗೆ ಮೋಸ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ಸಂಬಂಧ ಪೊಲೀಸ್​ ತನಿಖೆಯೂ ಸಹ ನಡೆಯುತ್ತಿದೆ. ಈ ಆರೋಪಿತ ಮಹಿಳೆ ಅರುಣಾ ಕುಮಾರಿ ಈ ಹಿಂದೆ ನಾಗವರ್ಧನ್​ ಅವರಿಗೂ ವಂಚನೆ ಮಾಡಿದ್ದರು ಎಂಬ ವಿಷಯ ಕೇಳಿ ಬಂದಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಅರುಣಾ ಕುಮಾರಿ ವಂಚನೆ ಪ್ರಕರಣ ಇದೀಗ ಸಿನಿಮಾ ಆಗಲಿದೆಯಂತೆ. ಈ ಬಗ್ಗೆ  ನ್ಯೂಸ್ 18 ಕನ್ನಡ ವಾಹಿನಿಗೆ ನಾಗವರ್ಧನ್ ಎಕ್ಸ್​ಕ್ಲೂಸಿವ್​ ಮಾಹಿತಿ ನೀಡಿದ್ದಾರೆ.

  ಹೌದು, ವಂಚನೆಗೆ ಒಳಗಾದ ಉದ್ಯಮಿ ನಾಗವರ್ಧನ್​​ ಅವರೇ ಸಿನಿಮಾ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ. ನಾಗವರ್ಧನ್​​ 2015ರಲ್ಲಿ ಅರುಣಾ ಕುಮಾರಿಯಿಂದ ವಂಚನೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ನಾಗವರ್ಧನ್​​ ಅರುಣಾ ಕುಮಾರಿ ಮೇಲೆ ಆರೋಪ ಮಾಡಿದ್ದರು.

  ತೆಲುಗಿನ ಶ್ರೀಮಂತುಡು ಚಿತ್ರವನ್ನು ಕನ್ನಡದಲ್ಲಿ ಶ್ರೀಮಂತ ಎಂದು ರಿಮೇಕ್​ ಮಾಡೋದಾಗಿ ನಂಬಿಸಿ ಅರುಣಾ ಕುಮಾರಿ ನಾಗವರ್ಧನ್​ರನ್ನು ವಂಚಿಸಿದ್ದರು. ಈಗ ಅರುಣಾ ಕುಮಾರಿಯ ವಂಚನೆ ಪ್ರಕರಣಗಳು ಒಂದೊಂದಾಗಿ ತೆರೆದುಕೊಳ್ಳುತ್ತಿರುವ ಹಿನ್ನಲೆ,  ಅರುಣಾ ಕುಮಾರಿ ಕುರಿತೇ ಸಿನಿಮಾ ಮಾಡಲು ನಾಗವರ್ಧನ್ ಚಿಂತನೆ ನಡೆಸಿದ್ದಾರೆ.

  ಉದ್ಯಮಿ ನಾಗವರ್ಧನ್


  ಇದನ್ನೂ ಓದಿ:Happy Birthday Katrina Kaif: ಬಳುಕುವ ಬಳ್ಳಿ ಕತ್ರಿನಾ ಹುಟ್ಟುಹಬ್ಬ; ತೆರೆ ಮೇಲೆ ಈ ಚೆಲುವೆಯ ಬೆಸ್ಟ್ ಜೋಡಿ ಯಾರು ಹೇಳಿ?

  ಮೊನ್ನೆಯಷ್ಟೆ ನಾಗವರ್ಧನ್​​ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದರ್ಶನ್ ಹಾಗೂ ಉಮಾಪತಿ ವಿಚಾರದಲ್ಲಿ ಅರುಣಾ ಕುಮಾರಿ ವಂಚನೆ ಮಾಡಿದ್ದಾರೆ. 2015ರಲ್ಲಿ ನನಗೂ ಇದೇ ರೀತಿ‌‌ ಮೋಸ ಆಗಿತ್ತು. ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡು, ಹೈ ಫ್ರೊಫೈಲ್ ಇದ್ದೇನೆ ಎಂದು ಹೇಳಿಕೊಂಡಿದ್ದರು. ಬಳಿಕ  10-12ಕೋಟಿ‌ ಮೊತ್ತದ ಪ್ರಾಜೆಕ್ಟ್ ತೋರಿಸಿದ್ದರು. ಲ್ಯಾಂಡ್ ತೋರಿಸಿ ನಿರ್ಮಾಣ ಕಾರ್ಯಕ್ಕೆ ಬಂದರು. ಮೊದಲು ಸಿನಿಮಾ ಮಾಡುವುದಾಗಿ ಪರಿಚಯ ಮಾಡಿಕೊಂಡರು ಎಂದು ಮಹಿಳೆ ಮಾಡಿದ ಮೋಸವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದರು.

  ಅರುಣಾ ಕುಮಾರಿ ಅವರ ಮೂಲಕ ಹೆಸರು ನಂದಿತಾ ಎಂದು. ನನ್ನ‌ ಜೀವನದಲ್ಲೂ ಮೋಸ ಮಾಡಿದ್ದಾರೆ. ಹೀಗೆ ಬಿಟ್ಟರೆ ಇನ್ನು ಎಷ್ಟು ಮೋಸ ನಡೆಯುತ್ತೋ ಏನೋ ಎಂದು ನಾನು ನಾಗೇಂದ್ರಪ್ರಸಾದ್ ಅವರ ಗಮನಕ್ಕೆ‌ ತಂದೆ. ನನ್ನ ಸ್ನೇಹಿತರು, ಸಂಬಂಧಿಕರನ್ನು ದೂರ ಮಾಡುತ್ತಾ ಬಂದರು. ಸ್ನೇಹಿತರ‌ ಮಧ್ಯೆ ಈಗ ಗೊಂದಲ ಸೃಷ್ಟಿ‌ಮಾಡಿದ್ದಾರೆ. ಇದೇ ರೀತಿ ನನಗೂ ಸ್ನೇಹಿತರ ಮಧ್ಯೆ ತಂದಿಟ್ಟು ತಮಾಷೆ ನೋಡುತ್ತಾರೆ ಅರುಣಾ ಕುಮಾರಿ. ನಾನು ಹಾಗೂ ನಾಗೇಂದ್ರಪ್ರಸಾದ್ ಅವರು ಮಾತು ಬಿಡಲು ಇವರೇ ಕಾರಣ. ಸಿನಿಮಾ ಮಾಡುತ್ತೇನೆ ಎಂದು ಪರಿಚಯ ಮಾಡಿಕೊಂಡು, ನಂತರ 6ಲಕ್ಷದವರೆಗೆ ದುಡ್ಡು ಪಡೆದರು. ಚಿನ್ನ ಪಡೆದುಕೊಂಡು ಮೋಸ ಮಾಡಿದರು ಎಂದು ಆರೋಪಿಸಿದರು.

  ಅವರ ಕುಟುಂಬದಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ನಾನೇ ಅವರಿಗೆ 3 ತಿಂಗಳು ರಕ್ಷಣೆ ನೀಡಿದ್ದೆ. ಆಗಲೇ ಈಕೆಯ ವಿರುದ್ಧ ನನ್ನ ಪತ್ನಿಯೇ ದೂರು ನೀಡಿದ್ದರು. 2016ರಲ್ಲಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ನು ಮುಂದೆ ಬೇರೆ ಯಾರಿಗೂ ಮೋಸ ಮಾಡಬಾರದೆಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದೇನೆ. ಜೊತೆಗೆ ಆಕೆಯ ವಿರುದ್ಧ ಕಾನೂನು ಹೋರಾಟ ಮುಂದುವರೆಸಲಿದ್ದೇನೆ ಎಂದು ಹೇಳಿದ್ದರು ನಾಗವರ್ಧನ್.​

  ಇದನ್ನೂ ಓದಿ:Karnataka 2nd PUC Results: ಜು.20ಕ್ಕೆ ಪಿಯು ಫಲಿತಾಂಶ ಪ್ರಕಟ; ರಿಜಿಸ್ಟರ್​ ನಂಬರ್​ ಇಲ್ಲದೇ ಈ ಬಾರಿ ರಿಸಲ್ಟ್​ ನೋಡುವುದು ಹೇಗೆ?

  ಕೇವಲ ಮೂರು ತಿಂಗಳು ಅಷ್ಟೆ ನನ್ನ ಹಾಗೂ ಅರುಣಾ ಅವರ ಪರಿಚಯ. ಸಿನಿಮಾ ಹೀರೊ ಮಾಡ್ತೀನಿ ಅಂತ ಆಸೆ ಹುಟ್ಟಿಸಿದ್ದರು. ಹನಿ ಟ್ರ್ಯಾಪ್​ಗೆ ಬಳಸಿಕೊಂಡಿಲ್ಲ. ನನ್ನ ಬಳಿ ಫೋಟೋಸ್ ಯಾವುದೇ ಇಲ್ಲ. 2016 ಫೆಬ್ರವರಿ ಅಂತ್ಯದಲ್ಲಿ ಇವರ ನಾಟಕಗಳು ಗೊತ್ತಾಯ್ತು. 6 ಲಕ್ಷ ಹಾಗೂ ಚಿನ್ನ ತೆಗೆದುಕೊಂಡು ಮೋಸ ಮಾಡಿದ್ದಾರೆ. ನಾನು ಚಿತ್ರರಂಗಕ್ಕೆ ಹೊಸಬ. ನಿರ್ಮಾಪಕರು ಎಂದು ಅವರನ್ನು ನಂಬಿದ್ದೆ. ಪಂಚತಾರಾ ಹೋಟೆಲ್‌ಗಳಲ್ಲಿ ಊಟ ಮಾಡುತ್ತಿದ್ದರು. ಹೀಗಾಗಿ ನಾನು ನಂಬಿ ಮೋಸ ಹೋಗಿ ಬಿಟ್ಟೆ ಎಂದು ನಾಗವರ್ಧನ್​ ಬೇಸರ ವ್ಯಕ್ತಪಡಿಸಿದ್ದರು.

  ಈ ಅರುಣಾ ಕುಮಾರಿ ಮಾಡಿದ ವಂಚನೆಯನ್ನೇ ನಾಗವರ್ಧನ್​ ಸಿನಿಮಾ ಮಾಡಲು ಮುಂದಾಗಿದ್ದಾರೆ.

  (ವರದಿ: ಹರ್ಷವರ್ಧನ್)
  Published by:Latha CG
  First published: