ವಂಚನೆ ಪ್ರಕರಣ: ರಾಬರ್ಟ್​ ನಿರ್ಮಾಪಕ ಉಮಾಪತಿ ಪರ ಮಾತನಾಡಿದ ದರ್ಶನ್​..!

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಳವಣಿಗೆಯಾಗಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮತ್ತೊಮ್ಮೆ ಹೇಳಿಕೆ ಕೊಟ್ಟಿದ್ದು, ಉಮಾಪತಿ ನಮ್ಮ ನಿರ್ಮಾಪಕರು. ಆ ಮಹಿಳೆ ಇಷ್ಟೊಂದು ಮಾಡೋದಕ್ಕೆ ಹೇಗೆ ಧೈರ್ಯ ಬಂತು ಅನ್ನೋದು ನನಗೆ ತಿಳಿಯಬೇಕು. ಯಾರೋ ಹೇಳ್ತಾರೆ ಅಂತ ನೀವು ಮಾಡ್ತಿರಾ? ಉಮಾಪತಿ ಅವರನ್ನು ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ.

ನಟ ದರ್ಶನ್

ನಟ ದರ್ಶನ್

  • Share this:
ದರ್ಶನ್ ಅವರ ಹೆಸರು ಬಳಿಸಿಕೊಂಡು 25 ಕೋಟಿ ವಂಚನೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ನಾನಾ ರೀತಿಯ ಹೇಳಿಕೆಗಳು ಹಾಗೂ ಹಲವಾರು ಬೆಳವಣಿಗೆಗಳು ಆಗುತ್ತಿವೆ. ನಿನ್ನೆಯಷ್ಟೆ ದರ್ಶನ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಎಲ್ಲ ಕಡೆಯಿಂದ ನಿರ್ಮಾಪಕ ಉಮಾಪತಿ ಅವರ ಹೆಸರು ಕೇಳಿ ಬರುತ್ತಿದೆ ಎಂದಿದ್ದರು. ಇದಾದ ನಂತರ ಬೆಂಗಳೂರಿನಲ್ಲಿ ರಾಬರ್ಟ್​ ಸಿನಿಮಾ ನಿರ್ಮಾಪಕ ಉಮಾಪತಿ ಅವರೂ  ಸುದ್ದಿಗೋಷ್ಠಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರು. ದರ್ಶನ್ ಅವರು ನನಗೆ ಮುಖ್ಯ. ಅವರ ಮುಖ ನೋಡಿಕೊಂಡು ಸುಮ್ಮನಿದ್ದೇನೆ. ನನ್ನ ಹಾಗೂ ದರ್ಶನ್ ಅವರ ನಡುವಿನ ಸ್ನೇಹ ಇನ್ನೂ ಚೆನ್ನಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ಪೊಲೀಸ್​ ತನಿಖೆಯಿಂದ ಹೊರ ಬೀಳಲಿದೆ ಎಂದಿದ್ದರು. 

ಈಗ ಮತ್ತೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಳವಣಿಗೆಯಾಗಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮತ್ತೊಮ್ಮೆ ಹೇಳಿಕೆ ಕೊಟ್ಟಿದ್ದು, ಉಮಾಪತಿ ನಮ್ಮ ನಿರ್ಮಾಪಕರು. ಆ ಮಹಿಳೆ ಇಷ್ಟೊಂದು ಮಾಡೋದಕ್ಕೆ ಹೇಗೆ ಧೈರ್ಯ ಬಂತು ಅನ್ನೋದು ನನಗೆ ತಿಳಿಯಬೇಕು. ಯಾರೋ ಹೇಳ್ತಾರೆ ಅಂತ ನೀವು ಮಾಡ್ತಿರಾ? ಉಮಾಪತಿ ಅವರನ್ನು ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ. ಇದೇನು ಮಕ್ಕಳ ಆಟವೇ ಎಂದಿರುವ ದಾಸ, ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ಹೊರ ಬರಬೇಕಿದೆ. ಎಲ್ಲವೂ ಸುಖಾoತ್ಯ ಕಾಣಲಿ ಅನ್ನೋದು ಆಸೆ ಎಂದಿದ್ದಾರೆ.

Darshan press meet on rs 25 cr fraud case, umapathy srinivas, Harsha Melanta, Darshan and umapathy Controversy, ದರ್ಶನ್ ಸುದ್ದಿಗೋಷ್ಠಿ, ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್, Roberrt Producer Umapathy Srinivas says still me and Darshan are good friends ae
ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್​


ಹರ್ಷ ಮತ್ತು ಉಮಾಪತಿ ನಾನು ಸಾಯೋವರೆಗೂ ಗೆಳೆಯರೆ. ಉಮಾಪತಿಯನ್ನು ನಾಳೆ ಭೇಟಿ ಮಾಡೊದಕ್ಕೆ ಹೇಳಿದ್ದಿನಿ. ಇಂದು ವಾಕ್ಸಿನ್ ತೆಗೆದುಕೊಂಡಿದ್ದೆ ಹೀಗಾಗಿ ನಾಳೆ ಬರೋದಕ್ಕೆ ಹೇಳಿದಿನಿ ಎಂದು ಉಮಾಪತಿಯ ಪರ ದರ್ಶನ್ ಮಾತನಾಡಿದ್ದಾರೆ.

ಇದನ್ನೂ ಓದಿ: ಟಾಸ್ಕ್​ನಲ್ಲಿ ರಕ್ತ ಬರುವಂತೆ ಗಾಯಗೊಂಡ ದಿವ್ಯಾ ಉರುಡುಗ..!ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಉಮಾಪತಿ ಅವರು ದರ್ಶನ್ ಪರವಾಗಿಯೇ ಈಗಲೂ ಮಾತನಾಡಿದ್ದಾರೆ. ದರ್ಶನ್​ ಅವರ ಗೆಳೆಯರಲ್ಲಿ ಕೆಲವರು ಅವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದ ಆ ಮಹಿಳೆ ಮೂಲಕ ನನಗೆ ಗೊತ್ತಾಯಿತು. ಕೂಡಲೇ ಅದನ್ನು ದರ್ಶನ್​ ಅವರ ಗಮನಕ್ಕೆ ತಂದೆ. ಆದರೆ ಈಗ ನನ್ನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ ನಿರ್ಮಾಪಕರು.
ದರ್ಶನ್​ ಅವರ ಸ್ನೇಹಿತರಾದ ರಾಕೇಶ್​ ಪಾಪಣ್ಣ, ಹರ್ಷ ಮೆಲೆಂಟಾ ಅವರ ಮೇಲೆ ಆರೋಪ ಮಾಡಿರುವ ನಿಮಾ್ಪಕ ಉಮಾಪತಿ ಅವರು ಈ ಪ್ರಕರಣ ನ್ಯಾಯಾಲಯದಲ್ಲೇ ತೀರ್ಮಾನವಾಗಲಿ ಎಂದಿದ್ದಾರೆ.

ಏನಿದು ಪ್ರಕರಣ?

ಮೈಸೂರು ನಗರದ ಹೆಬ್ಬಾಳದಲ್ಲಿ ಇರುವ 'ಮೈಸೂರು ಯೂನಿಯನ್ ಕ್ಲಬ್ ನಡೆಸುತ್ತಿರುವ ಹರ್ಷ ಮೆಲಂತಾ ಎನ್ನುವ ವ್ಯಕ್ತಿಯನ್ನು ಜೂನ್ 16 ನೇ ತಾರೀಕು ಅರುಣ್ ಕುಮಾರಿ ಎನ್ನುವವರು ಭೇಟಿ ಮಾಡಿ "ನಾನು ಬ್ಯಾಂಕ್ ವ್ಯವಸ್ಥಾಪಕಿ ಎಂದು ಪರಿಚಯಿಸಿಕೊಂಡಿದ್ದಾರೆ. 'ಬೆಂಗಳೂರಿನ ಸೌತ್ ಎಂಡ್ ಸರ್ಕಲ್ಲಿನಲ್ಲಿ ಇರುವ ಕೆನರಾ ಬ್ಯಾಂಕಿನಲ್ಲಿ 25 ಕೋಟಿ ಸಾಲಕ್ಕೆ ನೀವು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಚಲನಚಿತ್ರ ನಟ ದರ್ಶನ್ ಅವರ ಅಸ್ತಿಯ ನಕಲಿ ದಾಖಲೆ ಒದಗಿಸಿದ್ದು ಅಲ್ಲದೆ ಅವರ ಸಹಿಯನ್ನೂ ಸಹ ನಕಲು ಮಾಡಿ ಮೋಸ ಮಾಡಿದ್ದೀರಿ ಎಂದು ಹೇಳಿ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಅಲ್ಲದೇ ಈ ವಿಷಯ ಹೊರಗೆ ಬಾರದಂತೆ ನೋಡಿಕೊಳ್ಳಲು 25 ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದಾದ ಮೇಲೆ ಈ ಮಹಿಳೆ ನಕಲಿ ಎಂಬುದು ಹರ್ಷ ಅವರಿಗೆ ಗೊತ್ತಾಗಿದೆ, ಅವರು ತಕ್ಷಣ ಜುಲೈ 3 ನೇ ತಾರೀಕು ದೂರು ದಾಖಲಿಸುತ್ತಾರೆ.

ವಿಚಾರಕ್ಕೆ ಸಂಬಂಧಿಸಿದಂತೆ ಹರ್ಷ ಅವರು ಜುಲೈ 3 ನೇ ತಾರೀಕು ಮೈಸೂರು ನಗರದ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ದೂರು ಆಧರಿಸಿ, ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Darshan: ನನ್ನ ದರ್ಶನ್​ ನಡುವಿನ ಸ್ನೇಹ ಇನ್ನೂ ಚೆನ್ನಾಗಿದೆ: ನಿರ್ಮಾಪಕ ಉಮಾಪತಿ

ಇದೇ ಮಹಿಳೆ ದರ್ಶನ್ ಅಭಿನಯದ ರಾಬರ್ಟ್​ ಚಿತ್ರದ ನಿರ್ಮಾಪಕ ಉಮಾಪತಿ ಅವರಿಗೂ ಕರೆ ಮಾಡಿ, ಹರ್ಷ ಎಂಬುವರು ದರ್ಶನ್​ ಅವರ ಆಸ್ತಿಯನ್ನು ಸಾಲಕ್ಕಾಗಿ ಬ್ಯಾಂಕಿಗೆ ಅಡ ಇಟ್ಟಿದ್ದಾರೆ ನಿಜವೇ ಎಂದು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ನಿರ್ಮಾಪಕ ಉಮಾಪತಿ ಅವರು ಕೂಡಲೇ ಬೆಂಗಳೂರಿನ ಪೊಲೀಸ್​ ಠಾಣೆಯಲ್ಲಿ ಜೂನ್​ 17 ರಂದು ಅರುಣಕುಮಾರಿ ಅವರ ಮೇಲೆ ದೂರು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ನಟ ದರ್ಶನ್ ಅವರು ಮೈಸೂರಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಭಾನುವಾರ ಭೇಟಿ ನೀಡಿದ್ದರು.

ಮೈಸೂರಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಬಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಾರೇ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡರು ಅವರ ರೆಕ್ಕೆಯನ್ನಲ್ಲ, ತಲೆಯನ್ನೆ ತೆಗೆಯುತ್ತೇನೆ ಎಂದು ದರ್ಶನ್ ಎಚ್ಚರಿಕೆ ನೀಡಿದ್ದರು.'ನೋಡಿ ನನಗೆ ಯಾರೂ ಬ್ಲಾಕ್ ಮೇಲ್ ಮಾಡಿಲ್ಲ, ಆದರೆ ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಅನಂತರ ಏನಾಗುತ್ತದೆ ಎಂಬುದನ್ನು ನಿಮಗೆ ಸಂಪೂರ್ಣ ವಿವರ ಕೊಡುತ್ತೇನೆ ಎಂದು ಹೇಳಿದರು.ಈ ಪ್ರಕರಣದ ರೂವಾರಿ ಆರೋಪಿ ಅರುಣಕುಮಾರಿ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ಯಾಕೆ ಇಂತಹ ಕೆಲಸ ಮಾಡಿದ್ದಾರೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ನಟ ದರ್ಶನ್ ಒತ್ತಾಯಿಸಿದ್ದಾರೆ.

ಮೈಸೂರು ಪೊಲೀಸರು ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿ ಜೊತೆಗೆ, ಮಧುಕೇಶವ ಹಾಗೂ ನಂದೀಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
Published by:Anitha E
First published: