• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ನಟಿ ಪೂಜಾ ಗಾಂಧಿ- ಬಿಜೆಪಿ ಮುಖಂಡ ಅನಿಲ್​ ಮೆಣಸಿನಕಾಯಿ ವಿರುದ್ಧ ವಂಚನೆ ಆರೋಪ: ಹೋಟೆಲ್​ ಬಿಲ್​ ಕೊಡದೆ ಕಾಲ್ಕಿತ್ತ ಮಳೆ ಹುಡುಗಿ..!

ನಟಿ ಪೂಜಾ ಗಾಂಧಿ- ಬಿಜೆಪಿ ಮುಖಂಡ ಅನಿಲ್​ ಮೆಣಸಿನಕಾಯಿ ವಿರುದ್ಧ ವಂಚನೆ ಆರೋಪ: ಹೋಟೆಲ್​ ಬಿಲ್​ ಕೊಡದೆ ಕಾಲ್ಕಿತ್ತ ಮಳೆ ಹುಡುಗಿ..!

ಬಿಜೆಪಿ ಮುಖಂಡ ಅನಿಲ್​ ಪಿ. ಮೆಣಸಿನಕಾಯಿ ಹಾಗೂ ನಟಿ ಪೂಜಾ ಗಾಂಧಿ

ಬಿಜೆಪಿ ಮುಖಂಡ ಅನಿಲ್​ ಪಿ. ಮೆಣಸಿನಕಾಯಿ ಹಾಗೂ ನಟಿ ಪೂಜಾ ಗಾಂಧಿ

ನಟಿ ಪೂಜಾ ಗಾಂಧಿ ಹಾಗೂ ಬಿಜೆಪಿ ನಾಯಕ ಅನಿಲ್​ ಪಿ. ಮೆಣಸಿನಕಾಯಿ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ. ದಿ ಲಲಿತ್​ ಅಶೋಕ ಹೋಟೆಲ್​ನಿಂದ ಸೇವೆ ಪಡೆದು ಬಿಲ್​ ಕಟ್ಟದ ಕಾರಣಕ್ಕೆ ಇವರ ವಿರುದ್ದ ದೂರು ದಾಖಲಿಸಲಾಗಿದೆ.

  • News18
  • 3-MIN READ
  • Last Updated :
  • Share this:

ಮಳೆ ಹುಡುಗಿ ಪೂಜಾ ಗಾಂಧಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಇಂತಹದ್ದೇ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಪೂಜಾ ವಿರುದ್ದ ಹೋಟೆಲ್ ಬಿಲ್ ಕಟ್ಟದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಸುಮಲತಾ ಅಂಬರೀಷ್​ ಸಾರಥ್ಯಕ್ಕೆ ಜೋಡಿ ಎತ್ತುಗಳಾದ ದರ್ಶನ್​-ಯಶ್​..!

ಮಾರ್ಚ್​ 11ರಂದೇ ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್​ ಪಿ. ಮೆಣಸಿನಕಾಯಿ ವಿರುದ್ದ ದೂರು ದಾಖಲಾಗಿದ್ದು,  3 ಲಕ್ಷದ 53 ಸಾವಿರ ಲಕ್ಷ ಬಿಲ್ ಕಟ್ಟದ ಆರೋಪ ಮಾಡಲಾಗಿದೆ. ಹಲವು ದಿನಗಳ ಕಾಲ ಅಶೋಕ ಹೋಟೆಲ್​ನ ರೂಮ್​ನಲ್ಲಿ ತಂಗಿದ್ದು, ನಂತರ ಬಿಲ್ ಕಟ್ಟದೆ ನಟಿ ಪೂಜಾಗಾಂಧಿ ಕಾಲ್ಕಿತ್ತಿದ್ದರು ಎನ್ನಲಾಗಿದೆ.

ಕೂಡಲೇ ಪೊಲೀಸರು ಪೂಜಾ ಗಾಂಧಿಯವರನ್ನು ಠಾಣೆಗೆ ಕರೆಸಿಕೊಂಡು ದೂರಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದ್ದಾರೆ, ನಟಿ ಪೂಜಾಗಾಂಧಿ ಪೊಲೀಸರ ಸಮ್ಮುಖದಲ್ಲಿಯೇ ಎರಡು ಲಕ್ಷ ರೂ.ಗಳನ್ನು ಕೊಟ್ಟು ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್​ ಪಿ. ಮೆಣಸಿನಕಾಯಿ ಒಂದು ವರ್ಷ ದಿ ಲಲಿತ್ ಅಶೋಕದಲ್ಲೇ ವಾಸ್ತವ್ಯ ಹೂಡಿದ್ದು, ಅಲ್ಲಿಂದ ಸೇವೆಯನ್ನು ಪಡೆದುಕೊಂಡಿದ್ದಾರೆ. ಇದಕ್ಕಾಗಿ ಇವರು ಹೋಟೆಲ್​ಗೆ 26.22 ಲಕ್ಷ ಹಣ ಪಾವತಿಸಬೇಕಿತ್ತು. ಅದರಲ್ಲಿ ಕೇವಲ  22.83 ಲಕ್ಷ ಪಾವತಿಸಲಾಗಿದ್ದು, 3.53 ಬಾಕಿ ಇತ್ತು.

ಇದನ್ನೂ ಓದಿ: ಸುಮಲತಾರಿಗಾಗಿ ಒಂದಾದ 'ಗಜ ಕೇಸರಿ': ಎಲ್ಲ ಮರೆತು ವೇದಿಕೆ ಹಂಚಿಕೊಂಡ ದರ್ಶನ್​-ಯಶ್​..!

ಈ ಸಂಬಂಧ ಹೋಟೆಲ್​ನವರು ಪೂಜಾ ಹಾಗೂ ಅನಿಲ್​ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರೂ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದಾಗಿ ಮಾರ್ಚ್​ 11ರಂದು ಹೋಟೆಲ್​ನವರು ಹೈಗೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಅನಿಲ್​ ಹಾಗೂ ಪೂಜಾ ವಿರುದ್ಧ ದೂರು ದಾಖಲಿಸಿದ್ದಾರೆ. ​

- ಮಂಜು ಆರ್ಯ, 

 

 PHOTOS: ಟ್ರೆಂಡಿ ಲುಕ್​ನಲ್ಲಿ ಪೋಸ್​ ನೀಡಿದ್ದಾರೆ 'ಕೇಸರಿ' ಸಿನಿಮಾದ ನಟಿ ಪರಿಣಿತಿ ಚೋಪ್ರಾ



 

 

First published: