• Home
  • »
  • News
  • »
  • entertainment
  • »
  • ಬೇರೆಯಾಗ್ತೀವಿ ಎಂದಿದ್ದ ಬಾಲಿವುಡ್ ಜೋಡಿ ಮತ್ತೆ ಒಂದಾಯ್ತಾ? ಡ್ಯಾನ್ಸ್​ ವಿಡಿಯೋ ವೈರಲ್

ಬೇರೆಯಾಗ್ತೀವಿ ಎಂದಿದ್ದ ಬಾಲಿವುಡ್ ಜೋಡಿ ಮತ್ತೆ ಒಂದಾಯ್ತಾ? ಡ್ಯಾನ್ಸ್​ ವಿಡಿಯೋ ವೈರಲ್

ಡ್ಯಾನ್ಸ್​ ಮಾಡಿದ ದಂಪತಿ

ಡ್ಯಾನ್ಸ್​ ಮಾಡಿದ ದಂಪತಿ

ಚಾರು ಮತ್ತು ರಾಜೀವ್ ಇಬ್ಬರು ‘ಹಮ್ ಆಪ್ಕೆ ಹೈ ಕೌನ್’ ಚಿತ್ರದ 'ಪೆಹ್ಲಾ ಪೆಹ್ಲಾ ಪ್ಯಾರ್ ಹೈ' ಹಾಡಿಗೆ ಒಟ್ಟಿಗೆ ಡ್ಯಾನ್ಸ್ ಮಾಡಿದರು. ನಟಿ ಗೌಹರ್ ಖಾನ್ ಅವರ ಜನಪ್ರಿಯ ಹಾಡಾದ 'ಝಲ್ಲಾ ವಾಲಾಹ್' ನಲ್ಲಿ ಸೋಲೋ ಡ್ಯಾನ್ಸ್ ಸಹ ಮಾಡಿದರು.

  • Share this:

ಈ ಸೆಲೆಬ್ರಿಟಿಗಳು(Celebrities) ಯಾವಾಗ ಪ್ರೀತಿ ಮಾಡುತ್ತಾರೆ? ಯಾವಾಗ ಮತ್ತು ಯಾರನ್ನ ಮದುವೆಯಾಗ್ತಾರೆ? ಯಾವಾಗ ಕಿತ್ತಾಡಿಕೊಂಡು ಬೇರೆ ಆಗ್ತಾರೆ?ಯಾವಾಗ ಮತ್ತೆ ಎಲ್ಲವನ್ನೂ ಮರೆತು ಒಂದಾಗ್ತಾರೆ ಅಂತ ಯಾರಿಂದಲೂ ಊಹಿಸುವುದಕ್ಕೂ ಸಾಧ್ಯವಿಲ್ಲ. ಅದರಲ್ಲೂ ಬಾಲಿವುಡ್(Bollywood) ನಲ್ಲಿರುವ ನಟ-ನಟಿಯರ ಬಗ್ಗೆಯಂತೂ ಹೇಳೋದೆ ಬೇಕಾಗಿಲ್ಲ. ನಾವು ಈಗಾಗಲೇ ಅನೇಕ ನಟ-ನಟಿ ಮದುವೆಯಾಗಿ ಸುಮಾರು ವರ್ಷಗಳ ಬಳಿಕ ಮತ್ತೆ ಬೇರೆ ಬೇರೆ ಆಗಿರುವುದನ್ನು ನಾವು ನೋಡಿದ್ದೇವೆ.


ಇಲ್ಲಿಯೂ ಸಹ ಅಂತಹದೇ ಒಂದು ಜೋಡಿ ಇದೆ ನೋಡಿ. ಆ ಜೋಡಿ ಸುಮಾರು ಒಂದು ವರ್ಷಗಳಿಂದ ಕಿತ್ತಾಡುತ್ತಿದ್ದರು. ಬೇರೆ ಆಗೋ ದಾರಿ ಬಿಟ್ಟರೆ ಬೇರೆ ಇಲ್ಲ ಅಂತ ಹೇಳಿದ್ದರು. ಆದರೆ ಈಗ ಈ ಜೋಡಿ ಮದುವೆಯೊಂದರಲ್ಲಿ  ಒಟ್ಟಿಗೆ ಕೈ ಕೈ ಹಿಡಿದುಕೊಂಡು ಡ್ಯಾನ್ಸ್ ಮಾಡಿದ್ದಾರೆ.


ಬೇರೆ ಬೇರೆ ಆಗ್ತೀವಿ ಅಂತ ಹೇಳಿದ್ದ ಬಾಲಿವುಡ್ ಜೋಡಿ


ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರ ಸಹೋದರನಾದ ರಾಜೀವ್ ಸೇನ್ ಮತ್ತು ಚಾರು ಅಸೋಪಾ ಅವರ ಮಧ್ಯೆ ಮನಸ್ತಾಪವಾಗಿ ಆರೋಪ ಪ್ರತ್ಯಾರೋಪಗಳು ಮಾಡಿಕೊಂಡು ಬೇರೆ ಬೇರೆ ಆಗಿದ್ದಾರೆ ಅನ್ನೋದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ.


ಹಾಗಂತ ಈ ಜೋಡಿ ವಿಚ್ಛೇದನೆ ಪಡೆದುಕೊಂಡಿಲ್ಲ. ಆದರೆ ಮತ್ತೆ ಈಗ ತಮ್ಮ ಸಹೋದರ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಷ್ಟೇ ಅಲ್ಲದೆ, ಕೈ ಕೈ ಹಿಡಿದುಕೊಂಡು ಡ್ಯಾನ್ಸ್ ಸಹ ಮಾಡಿದ್ದಾರೆ.


ಇದನ್ನೂ ಓದಿ: Nysa Devgan-Ajay Devgan: ವಿಮಲ್​ನಿಂದ ಟೈಂ ಸಿಕ್ಕಿದರೆ ಸ್ವಲ್ಪ ಮಗಳನ್ನೂ ನೋಡ್ಕೊಳ್ಳಿ! ನೈಸಾ ಫೋಟೋ ವೈರಲ್


ಈ ಇಬ್ಬರೂ ಪರಸ್ಪರ ಮತ್ತು ಅವರ ಕುಟುಂಬಗಳೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆಂದು ಕೆಲವೊಂದು ಘಟನೆಗಳಿಂದ ತೋರುತ್ತದೆ.


ನವವಿವಾಹಿತರ ಮುಂದೆ ಒಟ್ಟಿಗೆ ಡ್ಯಾನ್ಸ್ ಮಾಡಿದ ಚಾರು ಮತ್ತು ರಾಜೀವ್


ಚಾರು ಇತ್ತೀಚೆಗೆ ಕೋಲ್ಕತ್ತಾದಲ್ಲಿ ರಾಜೀವ್ ಮತ್ತು ಸುಶ್ಮಿತಾ ಸೇನ್ ಅವರ ಸೋದರ ಸಂಬಂಧಿಯ ವಿವಾಹದಲ್ಲಿ ಭಾಗವಹಿಸಿದ್ದರು ಮತ್ತು ಇಡೀ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆದರು.


ಇಡೀ ಸೇನ್ ಕುಟುಂಬವು ಒಟ್ಟಿಗೆ ಸೇರಿತ್ತು ಮತ್ತು ಅಲ್ಲಿ ಚಾರು, ರಾಜೀವ್ ಮತ್ತು ಅವರ ಮಗಳು ಜಿಯಾನಾ ಅವರನ್ನು ಸುಶ್ಮಿತಾ ಸೇನ್, ಅವರ ಪುತ್ರಿಯರಾದ ರೆನೀ ಮತ್ತು ಅಲಿಸಾ ಮತ್ತು ಮಾಜಿ ಗೆಳೆಯ ರೋಹ್ಮನ್ ಶಾಲ್ ಮತ್ತು ಅವರ ಹೆತ್ತವರೊಂದಿಗೆ ನೋಡಬಹುದು.


ಚಾರು ಕೇವಲ ಮದುವೆಗೆ ಹಾಜರಾಗಿದ್ದಲ್ಲದೆ, ಮದುವೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದರು. ನವವಿವಾಹಿತರನ್ನು ಸ್ವಾಗತಿಸುವ ಮೊದಲು ಅವಳು ರಾಜೀವ್ ಅವರೊಂದಿಗೆ ವೇದಿಕೆಗೆ ಬಂದರು.


ಚಾರು ಮತ್ತು ರಾಜೀವ್ ಇಬ್ಬರು ‘ಹಮ್ ಆಪ್ಕೆ ಹೈ ಕೌನ್’ ಚಿತ್ರದ 'ಪೆಹ್ಲಾ ಪೆಹ್ಲಾ ಪ್ಯಾರ್ ಹೈ' ಹಾಡಿಗೆ ಒಟ್ಟಿಗೆ ಡ್ಯಾನ್ಸ್ ಮಾಡಿದರು. ನಟಿ ಗೌಹರ್ ಖಾನ್ ಅವರ ಜನಪ್ರಿಯ ಹಾಡಾದ 'ಝಲ್ಲಾ ವಾಲಾಹ್' ನಲ್ಲಿ ಸೋಲೋ ಡ್ಯಾನ್ಸ್ ಸಹ ಮಾಡಿದರು.


 ತಮ್ಮ ಮಗು ಜಿಯಾನಾ ಜೊತೆ ಆಟವಾಡುತ್ತಾ ಸಮಯ ಕಳೆದ ರಾಜೀವ್


ರಾಜೀವ್ ಮದುವೆಗೆ ಬಂದಿದ್ದ ಅವರ ಮಗಳು ಜಿಯಾನಾ ಜೊತೆ ಆಟವಾಡುತ್ತಾ ಸ್ವಲ್ಪ ಸಮಯವನ್ನು ಕಳೆದರು. ಜಿಯಾನಾ ಆ ಮದುವೆಯಲ್ಲಿ ಕೇಂದ್ರಬಿಂದುವಾಗಿದ್ದಳು ಮತ್ತು ಅಪ್ಪನ ಪ್ರೀತಿಯನ್ನು ಮತ್ತು ಆಟವಾಡುತ್ತಾ ಕೆಲ ಕಾಲ ಎಂಜಾಯ್ ಮಾಡಿದಳು.


ಇದನ್ನೂ ಓದಿ: Swara Bhaskar: ಆ ಮ್ಯಾಟರ್​ನಲ್ಲಿ ಹಿಂದೂಗಳಿಗಿಂತ ಮುಸ್ಲಿಮರೇ ಸ್ಟ್ರಾಂಗ್, ನಾಲಗೆ ಹರಿಬಿಟ್ಟ ಸ್ಟಾರ್​ ನಟಿಗೆ ಫುಲ್ ಕ್ಲಾಸ್!


ತಮ್ಮ ಮಗುವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ದಂಪತಿಗಳು


ಬಹಳ ಸಮಯದ ನಂತರ ಚಾರು ಮತ್ತು ರಾಜೀವ್ ಸಂತೋಷದಿಂದ ತಮ್ಮ ಮಗಳು ಜಿಯಾನಾ ಸೇನ್ ಅವರೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದರು. ಮದುವೆ ಸಮಾರಂಭಕ್ಕಾಗಿ, ಚಾರು ಕೆಂಪು ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ರಾಜೀವ್ ಜಾಕೆಟ್ ನೊಂದಿಗೆ ಸಾಂಪ್ರದಾಯಿಕ ಕುರ್ತಾದಲ್ಲಿ ಸುಂದರವಾಗಿ ಕಾಣುತ್ತಿದ್ದರು.


ರಾಜೀವ್ ಅವರ ತಂದೆ ತಮ್ಮ ಮೊಮ್ಮಕ್ಕಳು ಎಂದರೆ ಸುಶ್ಮಿತಾ ಅವರ ಪುತ್ರಿಯರಾದ ರೆನೀ ಮತ್ತು ಅಲಿಸಾ ಮತ್ತು ಚಾರು ಮತ್ತು ರಾಜೀವ್ ಅವರ ಪುಟ್ಟ ಮಗು ಜಿಯಾನಾ ಅವರೊಂದಿಗೆ ಫೋಟೋ ತೆಗೆಸಿಕೊಂಡರು. ರಾಜೀವ್ ಮತ್ತು ಸುಶ್ಮಿತಾ ಸಹ ಸೆಲ್ಫಿ ಕ್ಲಿಕ್ಕಿಸಿಕೊಂಡರು.

Published by:Latha CG
First published: