ನೀವು ‘ಮೇರೆ ಆಂಗ್ನೆ ಮೇ’ (Mere Angne Mein) ಎಂಬ ಹಿಂದಿ ಧಾರಾವಾಹಿ ನೋಡಿದ್ದರೆ, ನಿಮಗೆ ಅದರಲ್ಲಿ ನಟಿಸಿರುವ ನಟಿ ಚಾರು ಅಸೋಪಾ (Charu Asopa) ಅವರನ್ನು ನೋಡಿರುತ್ತೀರಿ. ಹೌದು, ಈ ಧಾರವಾಹಿಯಲ್ಲಿ ನಟಿಸುವುದರೊಂದಿಗೆ ತುಂಬಾನೇ ಫೇಮಸ್ ಆದ ಸೀರಿಯಲ್ ನಟಿ (Serial Actress) ಈಕೆ. ಚಾರು ಅಸೋಪಾ ತುಂಬಾ ದಿನಗಳಿಂದ ರಾಜೀವ್ ಸೇನ್ ಅವರೊಂದಿಗಿನ ತಮ್ಮ ವೈವಾಹಿಕ ಜೀವನದಲ್ಲಿ ನಡೆದ ಕೆಲವು ವಿಷಯಗಳಿಂದ ಸುದ್ದಿಯಲ್ಲಿದ್ದರು. ಆದರೆ ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿರುವುದು ಅವರ ಫಿಟ್ನೆಸ್ನಿಂದಾಗಿ.
ಇತ್ತೀಚೆಗೆ, ನಟಿ ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ (Social Media Platforms) ತಮ್ಮನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗಿದ್ದರು. ಆ ವಿಷಯಗಳಲ್ಲಿ ಮಹಿಳೆಯರು ಗರ್ಭಧಾರಣೆಯ ನಂತರ ದೇಹದ ತೂಕ ಇಳಿಸಿಕೊಳ್ಳುವ ಜರ್ನಿ ಬಗ್ಗೆ ಸಹ ಮಾತನಾಡಿದ್ದಾರೆ ನೋಡಿ.
ಶೋ ಗಾಗಿ ತೂಕ ಕಡಿಮೆ ಮಾಡಿಕೊಂಡ್ರಂತೆ ನಟಿ ಚಾರು
ಅಲ್ಲದೆ ಒಂದು ಶೋ ಗಾಗಿ ಅವರು ಹೇಗೆ ತಮ್ಮ ದೇಹದ ತೂಕವನ್ನು ಇಳಿಸಿಕೊಂಡರು ಅಂತ ಇಲ್ಲಿ ಹಂಚಿಕೊಂಡಿದ್ದಾರೆ. "ದೇಹದ ತೂಕ ಇಳಿಸಿಕೊಳ್ಳುವ ಪ್ರಯಾಣವು ನನಗೆ ಅಷ್ಟೊಂದು ಸುಲಭವಾಗಿರಲಿಲ್ಲ.
ಜೋಹ್ರಿ ಎಂಬ ನನ್ನ ಶೋ ಗೆ ನಾನು ತುಂಬಾ ಕಟ್ಟುನಿಟ್ಟಾದ ಡಯೆಟ್ ಅನ್ನು ಮಾಡಿದ್ದೇನೆ. ನಾನು ದೇಹದ ತೂಕವನ್ನು ಕಡಿಮೆ ಮಾಡಬೇಕಾಯಿತು. ಏಕೆಂದರೆ ಅವರು ನನ್ನನ್ನು 16-17 ವರ್ಷ ವಯಸ್ಸಿನ ಹುಡುಗಿಯಂತೆ ತೋರಿಸಬೇಕಾಗಿತ್ತು ಮತ್ತು ನಂತರ ಅಂತಿಮವಾಗಿ ಅಲ್ಲಿಂದ ದೊಡ್ಡವಳಾಗಿ ಬೆಳೆಯಬೇಕಾಗಿತ್ತು. ಆದ್ದರಿಂದ ನಾನು ಬೇಗನೆ ತೂಕವನ್ನು ಕಡಿಮೆ ಮಾಡಬೇಕಾಯಿತು ಎಂದು ಅಸೋಪಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸಾನ್ಯಾ ಮನೆಗೆ ಬಂದ ರೂಪೇಶ್ ಶೆಟ್ಟಿ, ಮದುವೆ ಮಾತುಕತೆ ಮುಕ್ತಾಯ ಎಂದ ಫ್ಯಾನ್ಸ್!
ಕಟ್ಟುನಿಟ್ಟಾದ ಡಯೆಟ್ ಮಾಡುವುದಲ್ಲದೆ, ಜಿಮ್ ನಲ್ಲಿ ತಾಲೀಮು ಸಹ ಮಾಡ್ತಿದ್ರಂತೆ
ದೇಹದ ತೂಕ ಇಳಿಸಿಕೊಳ್ಳಲು ನಟಿ ಕಠಿಣವಾದ ಡಯೆಟ್ ಅಷ್ಟೇ ಅಲ್ಲದೆ, ಕಠಿಣವಾದ ವರ್ಕ್ಔಟ್ ಸಹ ಮಾಡಿದರಂತೆ. "ನಾನು ಮೊದಲು ಊಟ ಮಾಡುವುದನ್ನು ನಿಲ್ಲಿಸಿದೆ, ನಾನು ತುಂಬಾನೇ ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದೆ, ಅದನ್ನು ಕಡಿಮೆ ಮಾಡಿದೆ ಮತ್ತು ಹಾಲು ಕುಡಿಯುವುದನ್ನು ಸಹ ಬಿಟ್ಟೆ.
ಒಟ್ಟಿನಲ್ಲಿ ನಾನು ತುಂಬಾನೇ ಕಟ್ಟುನಿಟ್ಟಾದ ಡಯೆಟ್ ನಲ್ಲಿದ್ದೆ. ಕೆಲವೊಮ್ಮೆ ನಾನು ಬೆಳಿಗ್ಗೆ ಹಣ್ಣುಗಳು ಅಥವಾ ಡ್ರೈ ಫ್ರೂಟ್ಸ್ ಗಳನ್ನು ಮಾತ್ರ ಸೇವಿಸುತ್ತಿದ್ದೆ ಮತ್ತು ಬ್ಲ್ಯಾಕ್ ಕಾಫಿ ಕುಡಿಯುತ್ತಿದ್ದೆ.
ನಾನು ಪ್ರತಿದಿನ ಜಿಮ್ ನಲ್ಲಿ 2 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದೆ. ನಾನು ಎಂದಿಗೂ ಮಧ್ಯದಲ್ಲಿ ವಿಶ್ರಾಂತಿ ತೆಗೆದುಕೊಳುತ್ತಿರಲಿಲ್ಲ ಮತ್ತು ಬದಲಿಗೆ ದೀರ್ಘ ಗಂಟೆಗಳ ಕಾಲ ಚಿತ್ರೀಕರಣಕ್ಕೆ ಹೋದೆ. ಇದರಿಂದ ನನಗೆ ಸಾಕಷ್ಟು ಒತ್ತಡವು ಆಯಿತು" ಎಂದು ನಟಿ ಹೇಳಿದ್ದಾರೆ.
ತನ್ನಂತೆ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬೇಡಿ, ನಿಧಾನಕ್ಕೆ ಮಾಡಿಕೊಳ್ಳಿ ಅಂದ್ರು ನಟಿ
ಆದರೆ ಚಾರು ತಮ್ಮ ಫಾಲೋವರ್ ಗಳಿಗೆ ಮತ್ತು ಫ್ಯಾನ್ಸ್ ಗೆ ತನ್ನ ಹಾಗೆ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬೇಡಿ, ನಿಧಾನವಾಗಿ ತೂಕ ಕಡಿಮೆ ಮಾಡಿಕೊಳ್ಳಿ ಅಂತ ಕೇಳಿಕೊಂಡರು.
"ತೂಕ ಇಳಿಸಿಕೊಳ್ಳಲು ನಿಮ್ಮದೆ ಆದ ಸಮಯವನ್ನು ತೆಗೆದುಕೊಳ್ಳಿ, ನನಗೆ ಸಾಕಷ್ಟು ಜವಾಬ್ದಾರಿಗಳು ಇದ್ದವು. ಆದ್ದರಿಂದ ನಾನು ಬೇಗನೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾಯಿತು. ನಾನು ಆಗ ತಾನೇ ಮುಂಬೈಗೆ ಬಂದಿದ್ದೆ, ನಾನು ಮನೆಯ ಬಾಡಿಗೆಯನ್ನು ಕಟ್ಟಬೇಕಾಗಿತ್ತು, ನನ್ನ ಮನೆಯಲ್ಲಿ ಕೆಲಸ ಮಾಡುವವರಿಗೂ ಸಂಬಳ ನೀಡಬೇಕಿತ್ತು.
ಅದಕ್ಕಾಗಿ ನಾನು ಕಷ್ಟಪಟ್ಟು ಕೆಲಸ ಮಾಡಬೇಕಾಯಿತು. ನಾನು ಕೆಲವೊಮ್ಮೆ ಈ ಒತ್ತಡಭರಿತ ಜೀವನಶೈಲಿಯಿಂದ ಕುಸಿದು ಬೀಳುತ್ತಿದ್ದೆ, ಆದರೆ ಜಿಯಾನಾ ಮುಖವನ್ನು ನೋಡಿದಾಗ, ನನಗೆ ಎಲ್ಲವೂ ಮರೆತು ಹೋಗುತ್ತಿತ್ತು" ಎಂದು ನಟಿ ಹೇಳಿದರು.
ಮಗುವಿಗೆ ಜನ್ಮ ನೀಡಿದ ನಂತರ ಖಿನ್ನತೆಯಿಂದ ಸಹ ಬಳಲಿದ್ರಂತೆ ನಟಿ
ಜಿಯಾನಾಗೆ ಜನ್ಮ ನೀಡಿದ ನಂತರ ಪ್ರ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಸಹ ಈ ನಟಿ ಮುಕ್ತವಾಗಿ ಮಾತನಾಡಿದರು. ಅಲ್ಲದೆ ಒಂಟಿ ಪೋಷಕರಾಗಿ ತಮ್ಮ ಜೀವನದ ಬಗ್ಗೆ ಮತ್ತು ತಮ್ಮ ಮಾನಸಿಕ ಕುಸಿತವನ್ನು ಹೇಗೆ ನಿರ್ವಹಿಸುತ್ತಾಳೆ ಎಂಬುದರ ಬಗ್ಗೆಯೂ ಮಾತನಾಡಿದರು.
ಚಾರು ಜಿಯಾನಾಗೆ ಜನ್ಮ ನೀಡಿದ ನಂತರ ಖಿನ್ನತೆಯಿಂದ ಬಳಲಿದ್ದರ ಬಗ್ಗೆ ಮಾತನಾಡಿ “ತಾಯಂದಿರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾನೇ ಸದೃಢರಾಗಿರಬೇಕು ಮತ್ತು ತಮ್ಮ ಮಗುವಿಗೆ ಉತ್ತಮವಾದದ್ದನ್ನು ನೀಡಲು ಕೆಲಸ ಮಾಡಿ” ಅಂತ ಹೇಳಿದರು.
ಚಾರು 2019 ರ ಜೂನ್ ನಲ್ಲಿ ರಾಜೀವ್ ಸೇನ್ ಅವರನ್ನು ವಿವಾಹವಾದರು. ನಂತರ 2021 ನವೆಂಬರ್ ನಲ್ಲಿ ಜಿಯಾನಾ ಜನಿಸಿದಳು. ಇದರ ನಂತರದಲ್ಲಿ ಅವರ ವೈವಾಹಿಕ ಜೀವನದಲ್ಲಿ ತೊಂದರೆ ಶುರುವಾಯಿತು. ದಂಪತಿಗಳು ಕಳೆದ ವರ್ಷ ಅಂತಿಮವಾಗಿ ಇಬ್ಬರು ಬೇರ್ಪಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ