Sangeetha Sringeri: ಚಾರ್ಲಿ ಚೆಲುವೆ, ಲಕ್ಕಿ ಮ್ಯಾನ್ ಬೆಡಗಿ! ಸಂಗೀತ ಕನ್ನಡದ ಮತ್ತೊಬ್ಬ ಭರವಸೆ ನಾಯಕಿ

ನಾನು ಸೆಕೆಂಡ್ ಚಾನ್ಸ್ ತೆಗೆದುಕೊಳ್ಳುವ ಹಾಗೆ ಮಾಡೋದೇ ಇಲ್ಲ. ನಾನು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನನಗೆ ನಂಬಿಕೆ ಇದೆ. ನನಗೆ ಜೀವನದಲ್ಲಿ ಯಾವುದೇ ರೀತಿಯ ಬೇಸರವೂ ಇಲ್ಲ.

ಕನ್ನಡದ ಮತ್ತೊಬ್ಬ ಭರವಸೆ ನಾಯಕಿ

ಕನ್ನಡದ ಮತ್ತೊಬ್ಬ ಭರವಸೆ ನಾಯಕಿ

  • Share this:
ಲಕ್ಕಿಮ್ಯಾನ್ (Lucky Man) ಸಿನಿಮಾ ಚೆನ್ನಾಗಿ ಬಂದಿದೆ. ಜನ ಕೂಡ ಇದನ್ನ ಒಪ್ಪಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ (Darling Krishna) ಲಕ್ಕಿಯೆಷ್ಟ ಮ್ಯಾನ್. ಈ ಚಿತ್ರದಲ್ಲಿ ದೇವರು ಪವರ್ ಸ್ಟಾರ್ (Power Star) ಎಲ್ಲರಿಗೂ ಇಷ್ಟ ಆಗ್ತಾರೆ. ಲಕ್ಕಿಮ್ಯಾನ್ ಸಿನಿಮಾದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದ ಲಕ್ಕಿ ಗರ್ಲ್ (Lucky Girl) ಇರೋದು ವಿಶೇಷ. ಈ ಲಕ್ಕಿ ಗರ್ಲ್ ಬೇರೆ ಯಾರೋ ಅಲ್ಲ. ಚಿತ್ರದ ನಾಯಕಿ ಸಂಗೀತಾ ಶೃಂಗೇರಿ (Sangeetha Sringeri) . ಈ ಲಕ್ಕಿ ಹುಡುಗಿಯ ಲಕ್ ತಿರುಗುತ್ತಲೇ ಇದೆ. ನಿಧಾನಕ್ಕೆ ಒಂದೊಂದೇ ಸಿನಿಮಾ ಮಾಡುತ್ತಲೇ ಕನ್ನಡ ಪ್ರೇಕ್ಷಕರ ಹೃದಯಕ್ಕೆ ಎಂಟ್ರಿಕೊಡುತ್ತಿದ್ದಾರೆ. ಚಿತ್ರ ಜೀವನದಲ್ಲಿ ಅಭಿನಯಿಸಿದ ಸಿನಿಮಾಗಳಲ್ಲಿ ಲಕ್ಕಿಮ್ಯಾನ್​ ಸಿನಿಮಾ ಒಂದಾದ್ರೆ, ಟ್ರಿಪಲ್ 7 ಚಾರ್ಲಿ (777 Charlie) ಕೂಡ ಮತ್ತೊಂದಾಗಿದೆ. ಇದರ ಹೊರತಾಗಿ ಇನ್ನೂ ಒಂದಷ್ಟು ಸಿನಿಮಾ ಇವೆ. ಈ ಭರವಸೆಯ ನಾಯಕಿಯ ಜೊತೆಗೆ ನಮ್ಮ ಚಾಟ್, ಫುಲ್ ಡಿಟೈಲ್ಸ್ ಇಲ್ಲಿದೆ.

ಸಂಗೀತಾ ದೇವರನ್ನ ನಂಬುತ್ತಾರೆಯೆ ?
ದೇವರು ಅನ್ನೋ ನಂಬಿಕೆ ಇಲ್ಲ. ಅಪ್ಪ-ಅಮ್ಮನೇ ದೇವರು. ನಾನು ಮಾಡುವ ಕೆಲಸವೇ ದೇವರು.

ನಿಮ್ಮ ಪ್ರಕಾರ ಲಕ್ಕಿಮ್ಯಾನ್ ಸಿನಿಮಾದಲ್ಲಿ ಲಕ್ಕಿಮ್ಯಾನ್ ಯಾರು ?
ಅನು ಪಾತ್ರದ ಪ್ರಕಾರ, ತನ್ನ ಪ್ರೀತಿಸಿದ ಹುಡುಗ ವಾಪಸ್ ಬರುತ್ತಾನೆ. ಆಗ ಅವಳು ಲಕ್ಕಿ. ಅರ್ಜುನ್ ಪಾತ್ರಧಾರಿ ಕೃಷ್ಣ ತಪ್ಪು ತಿದ್ದಿಕೊಂಡು ಸರಿ ಹೋಗ್ತಾನೆ ಅಲ್ವೇ. ಅವನು ಲಕ್ಕಿ, ಸಿನಿಮಾ ಹೊರತಾಗಿ ನೋಡೋದಾದ್ರೆ, ಪುನಿತ್ ಜೊತೆಗೆ ಅಭಿನಯಿಸಿದ ಕೃಷ್ಣ ಕೂಡ ಲಕ್ಕಿಮ್ಯಾನ್.

ನಿಮ್ಮ ಪ್ರಕಾರ ಸೆಕೆಂಡ್ ಚಾನ್ಸ್ ಇದೆ ಅಂತ ನಂಬುತ್ತೀರಾ ?
ನಾನು ಸೆಕೆಂಡ್ ಚಾನ್ಸ್ ತೆಗೆದುಕೊಳ್ಳುವ ಹಾಗೆ ಮಾಡೋದೇ ಇಲ್ಲ. ನಾನು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನನಗೆ ನಂಬಿಕೆ ಇದೆ. ನನಗೆ ಜೀವನದಲ್ಲಿ ಯಾವುದೇ ರೀತಿಯ ಬೇಸರವೂ ಇಲ್ಲ.

ಪುನಿತ್ ರಾಜಕುಮಾರ್ ಜೊತೆಗೆ ಮಾತನಾಡೋ ಚಾನ್ಸ್ ಸಿಕ್ಕಿತ್ತಾ ?
ಪುನಿತ್ ರಾಜ್​ಕುಮಾರ್ ಜೊತೆಗೆ ಮಾತನಾಡೋ ಚಾನ್ಸ್ ಸಿಗಲೇ ಇಲ್ಲ. ಅವರ ಜೊತೆಗೆ ನನ್ನ ಸೀನ್​ಗಳೂ ಇಲ್ಲ. ಈ ವಿಚಾರದಲ್ಲಿ ನಾನು ಅನ್​ಲಕ್ಕಿ. ಅವರನ್ನ ಪ್ರೆಸ್ ಮೀಟ್​ಗಳಲ್ಲಿ ಮೀಟ್​ ಆಗೋಕೆ ಆಗಲಿಲ್ಲ. ಅವರು ಇಲ್ಲೆ ಎಲ್ಲೋ ಇದ್ದಾರೆ ಅಂತ ನನಗೆ ಅನಿಸುತ್ತದೆ.

Heroin Sangeetha Sringeri Talks about her Films
ಚಾರ್ಲಿ ಸಿನಿಮಾ ನಾಯಕಿ ಸಂಗೀತಾ ಶೃಂಗೇರಿ


ಸಂಗೀತಾ ಶೃಂಗೇರಿಗೆ ನಾಯಿ ಅಂದ್ರೆ ತುಂಬಾ ಇಷ್ಟಾನಾ?
ನನಗೆ ನಾಯಿಗಳು ಅಂದ್ರೆ ತುಂಬಾ ಇಷ್ಟ. ಬೀದಿ ನಾಯಿಗಳನ್ನ ಮನೆಗೆ ತಂದು ಸಾಕಿದ್ದೇನೆ.

ಚಾರ್ಲಿ ಜೊತೆಗೆ ಹೇಗಿತ್ತು ಚಿತ್ರೀಕರಣದ ಅನುಭವ?
ಚಿಕ್ಕ ಚಾರ್ಲಿ ನನ್ನ ಜೊತೆಗೆ ಫ್ರೆಂಡ್ಲಿ ಆಗಿಯೇ ಇತ್ತು. ಅದನ್ನ ಮುದ್ದು ಮಾಡುತ್ತಿದ್ದೆ. ಆದರೆ ಒಮ್ಮೆ ಅದು ನನ್ನ ಮುಖದ ಬಳಿ ಬಂದು ಕಚ್ಚೋ ತರ ಆಟ ಆಡುತ್ತಿತ್ತು. ಆಗ ರಕ್ತ ಕೂಡ ಬಂದಿತ್ತು.

ಸಂಗೀತಾ ನಿಮ್ಮ ವಾಯ್ಸ್ ಚೆನ್ನಾಗಿದೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ನನಗೆ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಬೇಕು ಅಂತ ಬಹಳ ಇಷ್ಟ. ಕೆಲವು ಸಿನಿಮಾಗಳಲ್ಲಿ ನನ್ನ ಪಾತ್ರಕ್ಕೆ ಡಬ್ ಮಾಡೋಕೆ ಬೇಡ ಅಂದ್ರು. ಆದರೆ ಈಗ ಚಾರ್ಲಿ ಮತ್ತು ಲಕ್ಕಿ ಮ್ಯಾನ್ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಡಬ್ ಮಾಡೋಕೆ ಚಾನ್ಸ್ ಸಿಕ್ಕಿದೆ.

ನೀವು ನಿಮ್ಮ ಪಾತ್ರಕ್ಕಾಗಿಯೇ ಹೇಗೆ ಸಿದ್ದತೆ ಮಾಡಿಕೊಳ್ಳುತ್ತೀರಾ?
ಚಾರ್ಲಿ ಚಿತ್ರದ ಟೈಮ್​ ನಲ್ಲಿ ಡೈರೆಕ್ಟರ್ ಕಿರಣ್​ ರಾಜ್ ವರ್ಕ್ ಶಾಪ್ ಎಲ್ಲ ಮಾಡಿಸಿದ್ದರು. ಆಗ ಪಾತ್ರಕ್ಕೆ ಹೇಗೆ ಬೇಕೋ ಹಾಗೆ ಸಿದ್ದತೆ ಮಾಡಿಕೊಂಡಿದ್ದೇನೆ.

Heroin Sangeetha Sringeri Talks about her Films
ಸಂಗೀತಾ ಶೃಂಗೇರಿ ಹಾಟ್ ಲುಕ್


ನೀವು ಸಹಜವಾಗಿ ನಟಿಸೋ ನಟೀನಾ?
ಅದನ್ನ ಜನ ಹೇಳಬೇಕು. ಚಾರ್ಲಿ ಟೈಮ್​ ನಲ್ಲಿ ಹೇಗೆಲ್ಲ ನಟಿಸಬೇಕು ಅನ್ನೋದನ್ನ ಕಲಿತುಕೊಂಡಿದ್ದೇನೆ. ಹರಹರ ಮಹಾದೇವ ಸೀರಿಯಲ್​ನಲ್ಲಿ ಹೆಚ್ಚು ಎಕ್ಸಪ್ರೆಷನ್ ಕೊಡ್ತಾ ಇದ್ದೆ. ಸಿನಿಮಾದಲ್ಲಿ ಅದನ್ನ ಕಡಿಮೆ ಮಾಡಿಕೊಂಡಿದ್ದೇನೆ.

ನಿಮ್ಮ ಮುಂದಿನ ಪ್ರೋಜೆಕ್ಟ್ ಗಳಾವವರು?
ಪಂಪ ಹೆಸರಿನ ಸಿನಿಮಾ ಇದೇ ತಿಂಗಳು 16 ಕ್ಕ ರಿಲೀಸ್ ಆಗುತ್ತದೆ. ಮಾರಿಗೋಲ್ಡ್ ನವೆಂಬರ್​ ನಲ್ಲಿ ಓಟಿಟಿಯಲ್ಲಿ ಬರುತ್ತದೆ. ಲಕ್ಕಿಮ್ಯಾನ್ ಮತ್ತು ಚಾರ್ಲಿ ಈಗಾಗಲೇ ರಿಲೀಸ್ ಆಗಿವೆ.

ಲಕ್ಕಿ ಮ್ಯಾನ್ ಹುಡುಗಿ ಸಂಗೀತ ಶೃಂಗೇರಿ ನಮ್ಮ ಈ ಪುಟ್ಟ ಚಾಟ್​ ನಲ್ಲಿ ನೇರವಾಗಿಯೇ ಪ್ರ್ಯಾಕ್ಟಿಕಲ್ ಆಗಿಯೆ ಉತ್ತರ ಕೊಟ್ಟಿದ್ದಾರೆ.
First published: