Chandramukhi 2: ಮತ್ತೆ ಬರ್ತಿದ್ದಾಳೆ ಚಂದ್ರಮುಖಿ, ಸೂಪರ್ ಸ್ಟಾರ್ Rajinikanth ಆಶೀರ್ವಾದದೊಂದಿಗೆ! ಈ ಚಿತ್ರದಲ್ಲಿ ಯಾರೆಲ್ಲಾಇದ್ದಾರೆ ನೋಡಿ

ಚಂದ್ರಮುಖಿ ಸಿನಿಮಾದ ಸೀಕ್ವೆಲ್ ಅನೌನ್ಸ್ ಆಗಿದ್ದು, ಶೂಟಿಂಗ್ ಆರಂಭವಾಗಿದೆ. ಹೌದು, ಚಂದ್ರಮುಖಿ 2‘ ಚಿತ್ರದ ಶೂಟಿಂಗ್ ಅಧಿಕೃತವಾಗಿ ಆರಂಭವಾಗಿದ್ದು, ಈ ಸೀಕ್ವೆಲ್ ನಲ್ಲಿ ನಾಯಕನಾಗಿ ನಟಿಸುತ್ತಿರುವ ರಾಘವ್ ಲಾರೆನ್ಸ್ ರಜನಿಕಾಂತ್ ಅವರ ಆಶೀರ್ವಾದ ಪಡೆದಿದ್ದಾರೆ.

ರಜನಿಕಾಂತ್ ಮತ್ತು ರಾಘವ್ ಲಾರೆನ್ಸ್

ರಜನಿಕಾಂತ್ ಮತ್ತು ರಾಘವ್ ಲಾರೆನ್ಸ್

  • Share this:
ಸ್ಯಾಂಡಲ್​ವುಡ್​ನ ಎವರ್​ಗ್ರೀನ್​ ಸಿನಿಮಾಗಳಲ್ಲಿ ಒಂದಾದ 'ಆಪ್ತಮಿತ್ರ' ತಮಿಳಿನಲ್ಲಿ 'ಚಂದ್ರಮುಖಿ' (Chandramukhi ) ಹೆಸರಿನಲ್ಲಿ ರಿಲೀಸ್​ ಆಗಿತ್ತು. 2005ರಲ್ಲಿ ತೆರೆಕಂಡಿದ್ದ ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಸಖತ್ ಹಿಟ್​ ಆಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ (Rajinikanth), ಜ್ಯೋತಿಕಾ, ನಯನತಾರಾ (Nayanthara) ನಟಿಸಿದ್ದ 'ಚಂದ್ರಮುಖಿ' ಸಿನಿಮಾ ಹೊಸ ಸಂಚಲನವನ್ನೇ ಮೂಡಿಸಿತ್ತು.  ಇತ್ತೀಚೆಗಷ್ಟೇ ಈ ಸಿನಿಮಾ ರಿಲೀಸ್ ಆಗಿ 17 ವರ್ಷ ಪೂರೈಸಿದೆ. ಇದರ ಬೆನ್ನಲ್ಲೇ ಇದೀಗ ಈ ಸಿನಿಮಾದ ಸೀಕ್ವೆಲ್ ಅನೌನ್ಸ್ ಆಗಿದ್ದು, ಶೂಟಿಂಗ್ ಆರಂಭವಾಗಿದೆ. ಹೌದು, ಚಂದ್ರಮುಖಿ 2‘ (Chandramukhi  2) ಚಿತ್ರದ ಶೂಟಿಂಗ್ ಅಧಿಕೃತವಾಗಿ ಆರಂಭವಾಗಿದ್ದು, ಈ ಸೀಕ್ವೆಲ್ ನಲ್ಲಿ ನಾಯಕನಾಗಿ ನಟಿಸುತ್ತಿರುವ ರಾಘವ್ ಲಾರೆನ್ಸ್ (Raghava Lawrence) ತಲೈವಾ ರಜನಿಕಾಂತ್ ಅವರ ಆಶೀರ್ವಾದ ಪಡೆದಿದ್ದಾರೆ.

17 ವರ್ಷಗಳ ನಂತರ ಚಂದ್ರಮುಖಿ ಸೀಕ್ವೆಲ್:

ಹೌದು, 2005ರಲ್ಲಿ ರಜನಿಕಾಂತ್ ನಾಯಕನಾಗಿ ಅಭಿನಯಿಸಿದ್ದ, ‘ಚಂದ್ರಮುಖಿ‘ ಚಿತ್ರವು ಸೂಪರ್ ಹಿಟ್​ ಆಗಿತ್ತು. ಅಲ್ಲದೇ ಬಾಕ್ಸ್ ಆಫೀಸ್​ನಲ್ಲಿಯೂ ಸಹ ಉತ್ತಮ ಕಲೆಕ್ಷನ್ ಮಾಡುವ ಮೂಲಕ ರಜನಿಕಾಂತ್ ಅವರ ಹಿಟ್​ ಲಿಸ್ಟ್ ಸೇರಿಕೊಂಡಿತ್ತು. ಇದೀಗ ಬರೋಬ್ಬರ 17 ವರ್ಷಗಳ ನಂತರ ಇದೀಗ ಚಂದ್ರಮುಖಿ ಸೀಕ್ವೆಲ್ ಬರುತ್ತಿದೆ. ಹೌದು, ಆದರೆ ಈ ಬಾರಿ ಚಂದ್ರಮುಖಿ 2 ಚಿತ್ರದಲ್ಲಿ ನಾಯಕನಾಗಿ ಲಾರೆನ್ಸ್ ಅವರು ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಗೂ​ ಮೊದಲು ಲಾರೆನ್ಸ್ ಅವರು ಸ್ವತಃ ರಜನಿಕಾಂತ್ ಅವರ ಆಶೀರ್ವಾದ ಪಡೆದುಕೊಂಡಿದ್ದು, ಮೈಸೂರಿನಲ್ಲಿ ಶೂಟಿಂಗ್​ ಆರಂಭವಾಗಿದೆ ಎಂದು ಟ್ವಿಟರ್​ ಮೂಲಕ ಬಹಿರಂಗಪಡಿಸಿದ್ದಾರೆ.

ಮೈಸೂರಲ್ಲಿ ಶೂಟಿಂಗ್ ಆರಂಭ:

ಇನ್ನು, ಚಂದ್ರಮುಖಿ ಶೂಟಿಂಗ್ ಮೈಸೂರಲ್ಲಿ ಆರಂಭವಾಗಿದೆ ಎಂದು ರಾಘವ್ ಲಾರೆನ್ಸ್ ಮಾಹಿತಿ ನೀಡಿದ್ದಾರೆ. ರಜನಿಕಾಂತ್ ಅವರ ಆಶೀರ್ವಾದ ಪಡೆದು ಫೋಟೋ ಹಂಚಿಕೊಂಡಿರುವ ಅವರು, ‘ಹಾಯ್ ಫ್ರೆಂಡ್ಸ್ ಮತ್ತು ಫ್ಯಾನ್ಸ್, ಇಂದು ನನ್ನ ತಲೈವರ್ ಮತ್ತು ಗುರು ರಜನಿಕಾಂತ್ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ಚಂದ್ರಮುಖಿ 2 ಶೂಟಿಂಗ್ ಪ್ರಾರಂಭವಾಗಿದೆ! ನನಗೆ ನಿಮ್ಮೆಲ್ಲರ ಹಾರೈಕೆ ಬೇಕು‘ ಎಂದು ಬರೆದುಕೊಂಡಿದ್ದಾರೆ.





ವಿಶೇಷ ಪಾತ್ರದಲ್ಲಿ ಸೂಪರ್ ಸ್ಟಾರ್​ ರಜನಿಕಾಂತ್:

ಇನ್ನು, ಚಿತ್ರದಲ್ಲಿ ಈ ಬಾರಿ ನಾಯಕನಾಗಿ ರಾಘವ್ ಲಾರೆನ್ಸ್ ಅವರು ಅಭಿನಯಿಸುತ್ತಿದ್ದಾರೆ. ಆದರೆ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸಲಿದ್ದಾರಂತೆ. ವಡಿವೇಲು ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಿ.ವಾಸು ನಿರ್ದೇಶಿಸುತ್ತಿದ್ದಾರೆ. ಇನ್ನು, ಪಿ.ವಾಸು ಚಂದ್ರಮುಖಿ ನಿರ್ದೇಶನದ ನಂತರ ಕನ್ನಡದಲ್ಲಿ ಆಪ್ತರಕ್ಷಕ ಚಿತ್ರವನ್ನು ನಿರ್ದೇಶಿಸಿದರು. ಆ ಸಿನಿಮಾ ಮಾಡಿದ ನಂತರ ಅದರಲ್ಲಿ ನಾಯಕನಾಗಿ ನಟಿಸಿದ್ದ ಡಾ. ವಿಷ್ಣುವರ್ಧನ್ ಅವರು ಹಠಾತ್ತನೆ ನಿಧನರಾದರು ಮತ್ತು ರಜನಿಕಾಂತ್ ಮತ್ತು ಚಂದ್ರಮುಖಿ ಸೀಕ್ವೆಲ್ ಮಾಡುವ ಆಲೋಚನೆಯನ್ನು ನಿಲ್ಲಿಸಿದರು ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಇದೀಗ ಚಂದ್ರಮುಖಿ 2 ಶೂಟಿಂಗ್ ಆರಂಭವಾಗಿದೆ.

ಇದನ್ನೂ ಓದಿ:  Actor Death: ಖ್ಯಾತ ನಟ ನಿಧನ, ಚೆನ್ನೈನ ಫ್ಲಾಟ್​ನಲ್ಲಿ ಶವ ಪತ್ತೆ!

ಹಲವು ಭಾಷೆಗಳಲ್ಲಿ ತೆರೆಕಂಡಿದ್ದ ಏಕೈಕ ಕಥೆ:

ಹೌದು, ಒಂದೇ ಒಂದು ಚಿತ್ರ ಹಲವಾರು ಭಾಷೆಗಳಲ್ಲಿ ತೆರೆಕಂಡಿದೆ. ಕನ್ನಡದಲ್ಲಿ ಆಪ್ತಮಿತ್ರ ಮತ್ತು ಆಪ್ತರಕ್ಷಕ ಎಂದು 2 ಭಾಗಗಳಲ್ಲಿ ಚಿತ್ರವು ಬಿಡುಗಡೆ ಆಗಿ ಸೂಪರ್ ಹಿಟ್​ ಆಗಿತ್ತು. ಆಪ್ತಮಿತ್ರ ಚಿತ್ರವು ಸುಮಾರು 1 ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿತ್ತು. ಇದಲ್ಲದೇ ತಮಿಳಿನಲ್ಲಿ ಚಂದ್ರಮುಖಿ ಚಿತ್ರ ತೆರೆಕಂಡಿತ್ತು. ಇದರಲ್ಲಿ ಸೂಪರ್ ಸ್ಟಾರ್​ ರಜನಿಕಾಂತ್​ ಅಭಿನಯಿಸಿದ್ದರು. ಈ ಸಿನಿಮಾ ಸಹ 2 ವರ್ಷಗಳ ಕಾಲ ಪ್ರದರ್ಶನ ಕಂಡು ದಾಖಲೆ ಮಾಡಿತ್ತು. ಇದೀಗ ಇದರ ಮುಂದುವರೆದ ಭಾಗ ಚಂದ್ರಮುಖಿ 2 ಶೂಟಿಂಗ್ ಆರಮಬಿಸಿದೆ. ಇದಲ್ಲದೇ ಮಲಯಾಳಂ ನಲ್ಲಿ ನಾಗವಲ್ಲಿ ಮತ್ತು ಹಿಂದಿಯಲ್ಲಿ ಬೂಲ್​ ಬುಲಯ್ಯ ಮತ್ತು ಬೂಲ್​ ಬುಲಯ್ಯ 2 ಚಿತ್ರವಾಗಿ ತೆರೆಕಂಡಿದೆ.
Published by:shrikrishna bhat
First published: