Good Newwz: 2 ಕೋಟಿ ವೀಕ್ಷಣೆ ಪಡೆದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ 'ಗುಡ್​ನ್ಯೂಸ್'​ ಚಿತ್ರದ ಈ ಹಾಡು..!

Good Newwz: ಮಕ್ಕಳಿಗಾಗಿ ಐವಿಎಫ್​ ಸೆಂಟರ್​ಗೆ ಹೋಗುವ ಒಂದೇ ಉಪನಾಮ ಇರುವ ಕುಟುಂಬಗಳ ನಡುವೆ ನಡೆಯುವ ಹಾಸ್ಯ ಹಾಗೂ ಎಮೋಷನಲ್​ ಡ್ರಾಮಾ ಈ 'ಗುಡ್​ ನ್ಯೂಸ್​'. ಈಗಾಗಲೇ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಯೂಟ್ಯೂಬ್​ನಲ್ಲಿ 6 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗಿದೆ.

'ಗುಡ್​ ನ್ಯೂಸ್'​ ಸಿನಿಮಾದ ಪೋಸ್ಟರ್​

'ಗುಡ್​ ನ್ಯೂಸ್'​ ಸಿನಿಮಾದ ಪೋಸ್ಟರ್​

  • Share this:
    ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್, ಕರೀನಾ ಕಪೂರ್, ದಿಲ್​ಜಿತ್​ ದೋಸಾಂಜ್ ಹಾಗೂ ಕಿಯಾರಾ ಅಡ್ವಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ 'ಗುಡ್ ನ್ಯೂಸ್'. ರಾಜ್ ಮೆಹ್ತಾ ನಿರ್ದೇಶನದ 'ಗುಡ್ ನ್ಯೂಸ್' ಒಂದು ಕಂಪ್ಲೀಟ್ ಕಾಮಿಡಿ ಸಿನಿಮಾ.

    ಮಕ್ಕಳಿಗಾಗಿ ಐವಿಎಫ್​ ಸೆಂಟರ್​ಗೆ ಹೋಗುವ ಒಂದೇ ಉಪನಾಮ ಇರುವ ಕುಟುಂಬಗಳ ನಡುವೆ ನಡೆಯುವ ಹಾಸ್ಯ ಹಾಗೂ ಎಮೋಷನಲ್​ ಡ್ರಾಮಾ ಈ 'ಗುಡ್​ ನ್ಯೂಸ್​'. ಈಗಾಗಲೇ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಯೂಟ್ಯೂಬ್​ನಲ್ಲಿ 6 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗಿದೆ.



    ಅದರ ಬೆನ್ನಲ್ಲೇ ಚಿತ್ರತಂಡ ಇತ್ತೀಚೆಗಷ್ಟೆ ಪೆಪ್ಪಿ ಪಾರ್ಟಿ ಸಾಂಗ್ ಒಂದನ್ನು ರಿಲೀಸ್​ ಮಾಡಿದೆ. 'ಚಂಡೀಗಡ್​ ಮೇ...' ಎಂದು ಸಾಗುವ ಈ ಹಾಡಿಗೆ ತನಿಷ್ ಬಗ್ಚಿ ಸಂಗೀತ ನೀಡಿದ್ದು, ಕೇವಲ 24 ತಾಸುಗಳಲ್ಲಿ ಒಂದು ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಇನ್ನು  ನ.27ರಂದು ಬಿಡುಗೆಯಾಗಿರುವ ಈ ಹಾಡಿಗೆ ಸದ್ಯ 2.69 ಕೋಟಿ ವೀಕ್ಷಣೆ ಸಿಕ್ಕಿದೆ.



    Your energy is unbeatable, Chandigarh waalon! Milte hai ab theatres mein, 27th Dec ko!😁 #ChandigarhMein #GoodNewwz#KareenaKapoorKhan @diljitdosanjh @Advani_Kiara @raj_a_mehta @Its_Badshah @HARRDYSANDHU @tanishkbagchi @ZeeStudios_ @DharmaMovies #CapeOfGoodFilms @ZeeMusicCompany pic.twitter.com/Wo8JF2d0wO



    ಪೋಸ್ಟರ್​, ಟ್ರೈಲರ್ ಹಾಗೂ ಹಾಡುಗಳಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ  ಡಿಸೆಂಬರ್ 27ರಂದು ರಿಲೀಸ್ ಆಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ತುಂಬಾನೇ ಭಿನ್ನವಾಗಿದ್ದು, ಪ್ರೇಕ್ಷಕರಲ್ಲಿ ಸಿನಿಮಾ ಬಗೆಗಿನ ನಿರೀಕ್ಷೆಯನ್ನು ದುಪಟ್ಟು ಮಾಡಿದೆ.

    Bikini Photo: ಬಿಕಿನಿ ತೊಟ್ಟು ಬೆಂಕಿ ಹೊತ್ತಿಸಿದ ದಿಶಾ: ಪರೀಕ್ಷೆ ಇದೆ ಅಕ್ಕ ನನಗೆ ಓದಲು ಬಿಡು ಎಂದ ಅಭಿಮಾನಿ..!


     

     

     
    First published: