ಯುವದಸರಾದಲ್ಲಿ ಪ್ರಪೋಸ್ ವಿವಾದ; ನಿವೇದಿತಾ ಗೌಡಗೆ ಥ್ಯಾಂಕ್ಸ್​ ಹೇಳಿದ ಚಂದನ್ ಶೆಟ್ಟಿ!

Chandan Shetty: ತಮ್ಮ ಮತ್ತು ನಿವೇದಿತಾ ಗೌಡ ಅವರ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಚಂದನ್ ಶೆಟ್ಟಿ ತಮ್ಮ ಪ್ರೇಯಸಿಗೆ ಥ್ಯಾಂಕ್ಯೂ ಹೇಳಿದ್ದಾರೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

  • Share this:
ಬೆಂಗಳೂರು (ಅ. 6): ಮೈಸೂರಿನ ಯುವದಸರಾ ವೇದಿಕೆಯಲ್ಲಿ ಬಿಗ್​ಬಾಸ್​ ಖ್ಯಾತಿಯ ಕನ್ನಡ ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ ತಮ್ಮ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸರ್ಕಾರದ ದುಡ್ಡಿನಲ್ಲಿ ನಡೆಸಲಾಗುವ ದಸರಾ ವೇದಿಕೆಯನ್ನು ತಮ್ಮ ಪ್ರೇಮ ನಿವೇದನೆಗೆ ಬಳಸಿಕೊಂಡಿದ್ದಕ್ಕೆ ಸಾಕಷ್ಟು ಜನರಿಂದ ವಿರೋಧ ವ್ಯಕ್ತವಾಗಿತ್ತು.

ಬಿಗ್​ಬಾಸ್​ನಲ್ಲಿ ತಾವಿಬ್ಬರೂ ಅಣ್ಣ-ತಂಗಿ ಎಂದು ಹೇಳಿಕೊಂಡಿದ್ದ ಚಂದನ್ ಶೆಟ್ಟಿ ಇದೀಗ ನಿವೇದಿತಾಗೆ ಪ್ರಪೋಸ್ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಯುವದಸರಾ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಸರ್ಕಾರಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಚಂದನ್ ಶೆಟ್ಟಿ ವಿರುದ್ಧ ಮೈಸೂರಿನಲ್ಲಿ 3 ದೂರುಗಳು ದಾಖಲಾಗಿದ್ದವು.

ಚಂದನ್ ಶೆಟ್ಟಿ-ನಿವೇದಿತಾ ಗೌಡ ಯುವ ದಸರಾ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ನಿವೇದಿತಾಗೆ ಪ್ರಪೋಸ್ ಮಾಡಿದ್ದ ಚಂದನ್ ಶೆಟ್ಟಿ ಆಕೆಗ ಬೆರಳಿಗೆ ಉಂಗುರ ತೊಡಿಸಿದ್ದರು. ಸದ್ಯದಲ್ಲೇ ಮದುವೆಯಾಗುವುದಾಗಿಯೂ ಘೋಷಿಸಿದ್ದರು. ಈ ಮೂಲಕ ಬಿಗ್​ಬಾಸ್​ ಜೋಡಿ ತಮ್ಮ ಪ್ರೇಮ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದಾದ ನಂತರ ಜನರ ವಿರೋಧಗಳು ಹೆಚ್ಚಾಗುತ್ತಿದ್ದಂತೆ ಚಂದನ್ ಶೆಟ್ಟಿ ಜನರ ಕ್ಷಮಾಪಣೆಯನ್ನೂ ಕೇಳಿದ್ದರು.

ಯುವದಸರಾದಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಪ್ರಪೋಸ್ ವಿವಾದ; ಇದುವರೆಗೂ ದಾಖಲಾದ ದೂರುಗಳೆಷ್ಟು ಗೊತ್ತಾ?

ಇದೀಗ ತಮ್ಮ ಮತ್ತು ನಿವೇದಿತಾ ಗೌಡ ಅವರ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಚಂದನ್ ಶೆಟ್ಟಿ ತಮ್ಮ ಪ್ರೇಯಸಿಗೆ ಥ್ಯಾಂಕ್ಯೂ ಹೇಳಿದ್ದಾರೆ!. 'ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಥ್ಯಾಂಕ್ಯೂ ನಿವೇದಿತಾ. ನನ್ನ ರಾಣಿಯಾದ ನಿನ್ನ ನಾನು ತುಂಬ ಪ್ರೀತಿಸುತ್ತೇನೆ. ನಮ್ಮ ಪ್ರೀತಿಯನ್ನು ಬೆಂಬಲಿಸಿ ಆಶೀರ್ವದಿಸಿದ ಪ್ರತಿಯೊಬ್ಬರಿಗೂ ಥ್ಯಾಂಕ್ಯೂ' ಎಂದು ಚಂದನ್ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.
ಆ ವೇಳೆ ಅದು ತಪ್ಪು ಎಂದು ನನಗೆ ಗೊತ್ತಾಗಲಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಯುವದಸರಾ ಉಪಸಮಿತಿ ಅನುಮತಿಯನ್ನೂ ಕೇಳಿರಲಿಲ್ಲ. ನಮ್ಮ ಮದುವೆ ವಿಚಾರವನ್ನು ಜನರಿಗೆ ತಿಳಿಸಲು ಹೀಗೆ ಮಾಡಿದೆ. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದರು. ನಿವೇದಿತಾ ಅವರ ತಂದೆ-ತಾಯಿ ಕೂಡ ಚಂದನ್​ ಮಾಡಿದ್ದು ತಪ್ಪೇನಲ್ಲ ಎಂದು ಹೇಳಿಕೆ ನೀಡಿದ್ದರು.

ಇನ್​ಸ್ಟಾಗ್ರಾಂನಲ್ಲಿ ಪ್ರೇಯಸಿಯ ಖಾಸಗಿ ಫೋಟೋ, ವಿಡಿಯೋ ಪೋಸ್ಟ್​; ಬೆಂಗಳೂರು ಖಾಸಗಿ ಕಂಪನಿ ಸಿಇಓ ಬಂಧನ

ನಿನ್ನೆಯಷ್ಟೇ ಚಂದನ್ ಶೆಟ್ಟಿ ವರ್ತನೆಯ ಬಗ್ಗೆ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದ ಮೈಸೂರು ಪ್ರಜ್ಞಾವಂತ ವೇದಿಕೆಯವರು ಚಂದನ್ ಶೆಟ್ಟಿ ಸಂಭಾವನೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಸಾರ್ವಜನಿಕರು ಹಣದಲ್ಲಿ ಆಯೋಜಿಸಲಾಗುವ ಯುವದಸರಾ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವ ಚಂದನ್ ಶೆಟ್ಟಿ ಅವರ ಕಾರ್ಯಕ್ರಮದ ವೆಚ್ಚವನ್ನು ಅವರ ತಂಡದವರೇ ಭರಿಸಲಿ. ಅವರಿಗೆ ನೀಡಬೇಕಾದ ಸಂಭಾವನೆಯನ್ನು ರದ್ದುಗೊಳಿಸಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಕೋರಿದ್ದರು.

 

First published: