• Home
  • »
  • News
  • »
  • entertainment
  • »
  • Niveditha Gowda: ಡ್ಯಾನ್ಸ್ ಮಾಡ್ತಾ ಲಿಪ್​ಲಾಕ್ ಮಾಡಿದ ಜೋಡಿ

Niveditha Gowda: ಡ್ಯಾನ್ಸ್ ಮಾಡ್ತಾ ಲಿಪ್​ಲಾಕ್ ಮಾಡಿದ ಜೋಡಿ

ಚಂದನ್ ಶೆಟ್ಟಿ - ನಿವೇದಿತಾ ಗೌಡ

ಚಂದನ್ ಶೆಟ್ಟಿ - ನಿವೇದಿತಾ ಗೌಡ

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಖುಷಿಯಾಗಿ ಡ್ಯಾನ್ಸ್ ಮಾಡ್ತಾ ಮಾಡ್ತಾ ಕಿಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

  • Share this:

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿರುವ ಜೋಡಿ (Couple). ಬಿಗ್​ಬಾಸ್  (Bigg boss) ಮನೆಯಲ್ಲಿ ಪ್ರೀತಿಸಿ ಆಮೇಲೆ ಮದುವೆಯಾಗಿ ಈಗ ಖುಷಿಯಾಗಿ ಸಂಸಾರ ಮಾಡುತ್ತಿರುವ ಬಿಗ್​ಬಾಸ್ ಜೋಡಿ ಆಗಾಗ ವಿಡಿಯೋ (Video) ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈಗ ನಿವೇದಿತಾ ಹಾಗೂ ಚಂದನ್ ಡ್ಯಾನ್ಸ್ ವಿಡಿಯೋ (Dance Video) ಒಂದನ್ನು ಶೇರ್ ಮಾಡಿದ್ದು ಇದರಲ್ಲಿ ಈ ಕ್ಯೂಟ್ ಜೋಡಿ ಡ್ಯಾನ್ಸ್ ಮಾಡ್ತಾ ಮಾಡ್ತಾ ಲಿಪ್ ಲಾಕ್ ಮಾಡುವುದನ್ನು ಕಾಣಬಹುದು. ಗಲ್ಲಿ ಬಾಯ್ ಹಾಡಿಗೆ ಜೋಡಿ ಡ್ಯಾನ್ಸ್ ಮಾಡಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


58 ಸಾವಿರ ವ್ಯೂಸ್


ಬಿಗ್​ ಬಾಸ್ ಜೋಡಿಯ ಈ ಡ್ಯಾನ್ಸ್ ವಿಡಿಯೋಗೆ 58 ಸಾವಿರಕ್ಕೂ ಹೆಚ್ಚು ವ್ಯೂಸ್ ಬಂದಿದೆ. 188ಕ್ಕೂ ಹೆಚ್ಚು ಜನರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಇದರಲ್ಲಿ ನಿವೇದಿತಾ  ವೈಟ್ ಫ್ರಾಕ್ ಧರಿಸಿ ಕಂಡುಬಂದರೆ, ಚಂದನ್ ಶೆಟ್ಟಿ ಅರಶಿನ ಬಣ್ಣದ ಟೀಶರ್ಟ್ ಧರಿಸಿದ್ದಾರೆ.




ಕಮೆಂಟ್ ಮಾಡಿದ ನೆಟ್ಟಿಗರು ಸರ್ ಇನ್ನೂ ಗುಡ್​ನ್ಯೂಸ್ ಬರ್ತಿಲ್ಲ ನಿಮ್ಮ ಕಡೆಯಿಂದ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಕರ್ನಾಟಕದ ಸೂಪರ್ ಜೋಡಿ ಎಂದು ಹೊಗಳಿದ್ದಾರೆ. ಇನ್ನು ಕೆಲವರು ನಿವೇದಿತಾ ಹಾಗೂ ಚಂದನ್ ಅವರ ಡ್ಯಾನ್ಸ್ ಸ್ಕಿಲ್ಸ್ ಮೆಚ್ಚಿ ಕಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Niveditha Gowda: ಗಂಡನ ಜೊತೆ ಸುಕ್ಕ ಪಾರ್ಟಿ ಮಾಡಿದ ನಿವೇದಿತಾ ಗೌಡ, ಹೇಗಿತ್ತು ಗೊತ್ತಾ?


ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ ನಿವೇದಿತಾ


ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ಬರುವ ಯಾವುದೇ ಟ್ರೆಂಡ್​ಗಳನ್ನು ಕೂಡಾ ಮಿಸ್ ಮಾಡುವುದಿಲ್ಲ. ಪ್ರತಿಬಾರಿ ನಿವೇದಿತಾ ಟ್ರೆಂಡಿಂಗ್ ರೀಲ್ಸ್​ಗೆ ಹೆಜ್ಜೆ ಹಾಕುತ್ತಿದ್ದು ಯಾವುದೇ ಭಾಷೆಯ ಹಾಡು, ಆಡಿಯೋ ಕ್ಲಿಪ್ ವೈರಲ್ ಆದಾಗಲೂ ಅವರು ತಪ್ಪದೆ ರೀಲ್ಸ್ ಮಾಡಿ ಶೇರ್ ಮಾಡುತ್ತಾರೆ.




1.5 ಮಿಲಿಯನ್ ಫಾಲೋವರ್ಸ್


ಸದ್ಯ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1428 ಪೋಸ್ಟ್​​ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲ ದಿನವೂ ನಿವೇದಿತಾ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.


ಇದನ್ನೂ ಓದಿ: Niveditha Gowda: ಮತ್ತೆ ಟ್ರೆಂಡ್​ ಆಯ್ತು ನಿವ್ವಿ ರೀಲ್ಸ್​, ಸೂಪರ್ ಬಿಡವ್ವ ಅಂದ್ರು ಅಭಿಮಾನಿಗಳು


ನೆಟ್ಟಿಗರ ಪ್ರೀತಿಯ ನಿವಿ


ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನನಿತ್ಯ ಚಂದದ ರೀಲ್ಸ್ ವಿಡಿಯೋಗಳನ್ನು ಮಾಡುವ ನಟಿ ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್ ಮಾಡುತ್ತಾರೆ.


ಎಲ್ಲಿ ಹೋದ್ರೂ ರೀಲ್ಸ್


ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​. ನಿವೇದಿತಾ ಕಿರುತೆರೆಯಲ್ಲಿ ಸಹ ಬ್ಯುಸಿ ಇರುವ ನಟಿ. ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು.

Published by:Divya D
First published: