Niveditha Gowda - Chandan Shetty: ಪತ್ನಿ ನಿವೇದಿತಾ ಜೊತೆ ಚಂದನ್ ಶೆಟ್ಟಿ ಕೊಕ್ಕರೆ ಡ್ಯಾನ್ಸ್! ನೀವೂ ಮಾಡಬೇಕಂತೆ

Chandan shetty Niveditha Gowda: ರ್ಯಾಪರ್ ಚಂದನ್ ಶೆಟ್ಟಿ ಅಭಿಮಾನಿಗಳಿಗಾಗಿ ಸೂಪರ್ ವಿಡಿಯೋ ಶೇರ್ ಮಾಡಿದ್ದಾರೆ. ಹೆಂಡ್ತಿ ಜೊತೆ ಸೇರಿ ಕೊಕ್ಕರೆ ಹಾಗೂ ಜಿಂಕೆ ಡ್ಯಾನ್ಸ್ ಮಾಡಿದ್ದು ಎಲ್ಲರೂ ಈ ಡ್ಯಾನ್ಸ್ ಮಾಡುವಂತೆ ಕೇಳಿದ್ದಾರೆ.

ಚಂದನ್ ಶೆಟ್ಟಿ - ನಿವೇದಿತಾ ಗೌಡ

ಚಂದನ್ ಶೆಟ್ಟಿ - ನಿವೇದಿತಾ ಗೌಡ

  • Share this:
ಬಿಗ್​ಬಾಸ್ ಮೂಲಕ ಪ್ರೀತಿಯಲ್ಲಿ ಬಿದ್ದು ವಿವಾಹವಾಗಿ ರ್ಯಾಪರ್ ಚಂದನ್ ಶೆಟ್ಟಿ  (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸೆಲೆಬ್ರಿಟಿ ಜೋಡಿಗಳು. ಚಂದನ್ ಶೆಟ್ಟಿ ಸೂಪರ್ ಹಾಡುಗಳನ್ನು (Song) ತಯಾರಿಸಿದ್ರೆ ನಿವೇದಿತಾ ಅವರು ರಿಯಾಲಿಟಿ ಶೋ, ಇನ್​ಸ್ಟಾಗ್ರಾಮ್ ರೀಲ್ಸ್ (Instagram Reels), ಯೂಟ್ಯೂಬ್ ಚಾನೆಲ್ ಎಂದು ಫುಲ್ ಬ್ಯುಸಿಯಾಗಿದ್ದಾರೆ. ಈಗ ಚಂದನ್ ಶೆಟ್ಟಿ ಅವರು ವಿಡಿಯೋ ಒಂದನ್ನು ಅಪ್​​ಲೋಡ್ ಮಾಡಿದ್ದಾರೆ. ಎರಡು ಗಂಟೆಗಳಲ್ಲಿ ಈ ವಿಡಿಯೋ (Video) 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡು ವೈರಲ್ ಆಗುತ್ತಿದೆ. ವಿಶೇಷ ಏನಪ್ಪಾ ಎಂದರೆ ಇದು ಐಜಿಗೋಸ್ಕರ ಮಾಡಿದ ಮೊದಲ ಮಿನಿ ಮ್ಯೂಸಿಕ್ (Mini Music) ಅಂತೆ. ಏನೇ ಅಂದರೆ ಈ ಸಾಂಗ್ ಮಾತ್ರ ಫನ್ನಿಯಾಗಿದೆ. ಡ್ಯಾನ್ಸ್ ಅಂತೂ ಸೂಪರ್ ಆಗಿದೆ. ಚಂದನ್ ಹಾಗೂ ನಿವೇದಿತಾ ಜೋಡಿಯಾಗಿ ಈ ಹಾಡಿಗೆ ಡ್ಯಾನ್ಸ್  (Dance) ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ. ಇನ್ನಷ್ಟು ಜನರು ಈ ಹಾಡಿಗೆ ರೀಲ್ಸ್ ಮಾಡುವ ಸಾಧ್ಯತೆ ಇದೆ.

ಚಂದನ್ ಶೆಟ್ಟಿ ಕೊಕ್ಕರೆ ಡ್ಯಾನ್ಸ್

ಚಂದನ್ ಶೆಟ್ಟಿ ಕೊಕ್ಕರೆ ಡ್ಯಾನ್ಸ್ ಎಂದು ಶುರುವಾಗುವ ವಿಡಿಯೋದಲ್ಲಿ ಚಂದನ್ ಹಾಗೂ ನಿವೇದಿತಾ ಜಾಲಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಚಂದನ್ ಬ್ಲಾಕ್ ಶೂಸ್, ಬ್ಲಾಕ್ ಗಾಗಲ್ಸ್ ಧರಿಸಿದ್ದು ವೈಟ್ ಟೀಶರ್ಟ್​ ಮಾಲೆ ಜಾಕೆಟ್ ಧರಿಸಿದ್ದಾರೆ. ನಿವೇದಿತಾ ಗೌಡ ಕೂಡಾ ಮಿನಿ ಡ್ರೆಸ್ ಧರಿಸಿಕೊಂಡು ಗಂಡನ ಡ್ಯಾನ್ಸ್​ಗೆ ಸಾಥ್ ಕೊಟ್ಟಿದ್ದಾರೆ. ಸ್ಟೈಲಿಷ್ ಲುಕ್​​ನಲ್ಲಿ ಇಬ್ಬರೂ ಸಖತ್ ಸ್ಟೆಪ್ ಹಾಕಿದ್ದು ನಿವೇದಿತಾ ಹೀಲ್ಸ್ ಹಾಕಿ ಡ್ಯಾನ್ಸ್ ಮಾಡುವುದನ್ನು ಕಾಣಬಹುದು.

ವಿಡಿಯೋ ವೈರಲ್

ವಿಡಿಯೋವನ್ನು ಇನ್​​ಸ್ಟಾಗ್ರಾಮ್​ಗೆ ವೈರಲ್ ಮಾಡಿದ ಬರೀ 2 ಗಂಟೆಗಳಲ್ಲಿ ಇದು ವೈರಲ್ ಆಗಿದೆ. 25 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದ ವಿಡಿಯೋಗೆ 100ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರು ಕಮೆಂಟ್ ಮಾಡಿ ಕ್ಯೂಟೆಸ್ಟ್ ಜೋಡಿ, ಸಾಂಗ್ ಸೂಪರ್ ಎಂದೆಲ್ಲಾ ಮೆಚ್ಚಿ ಬರೆಯುತ್ತಿದ್ದಾರೆ.

ಇದನ್ನೂ ಓದಿ: Niveditha Gowda: ಗಂಡನ ಜೊತೆ ಸುಕ್ಕ ಪಾರ್ಟಿ ಮಾಡಿದ ನಿವೇದಿತಾ ಗೌಡ, ಹೇಗಿತ್ತು ಗೊತ್ತಾ?

ಕನ್ನಡ ಬಿಗ್​ಬಾಸ್ ಮೂಲಕ ಕನ್ನಡ ಜನರಿಗೆ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಅಭಿಮಾನಿಗಳನ್ನು ಗಳಿಸಿದ ನಿವೇದಿತಾ ಗೌಡ ಸಹ ಸ್ಪರ್ಧಿ ಚಂದನ್ ಶೆಟ್ಟಿ ಅವರನ್ನೇ ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತು. ಈಗ ಈ ಜೋಡಿ ತಮ್ಮ ಮೆರಿಟಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಆಗಾಗ ಫನ್ನಿ, ಜಾಲಿಯಾಗಿರೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.


ಸುಕ್ಕ ಪಾರ್ಟಿ ಸಾಂಗ್​​ಗೆ ಸಖತ್ ಸ್ಟೆಪ್

ಚಂದನ್ ಶೆಟ್ಟಿ ಅವರ ಫೇಮಸ್ ಸುಕ್ಕ ಪಾರ್ಟಿ ಸಾಂಗ್ ಹಾಕಿ ರೀಲ್ಸ್ ಮಾಡಿದ್ದಾರೆ ನಿವೇದಿತಾ ಗೌಡ. ತನ್ನ ಸ್ನೇಹಿತರ ಬಳಗದ ಜೊತೆ ಬೆಟ್ಟದ ಮೇಲೆ ನಿವೇದಿತಾ ಗೌಡ ಗಂಡನನ್ನೂ ಸೇರಿಸಿಕೊಂಡು ಸುಕ್ಕ ಪಾರ್ಟಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಅವರ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಅವರ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Niveditha Gowda: ಕೆಂಪು ಕಲರ್ ಸೀರೆಯಲ್ಲಿ ನಿವೇದಿತಾ ಗೌಡ! ದೇವತೆ ಎಂದ ಫ್ಯಾನ್ಸ್

ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ ನಿವೇದಿತಾ

ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ಬರುವ ಯಾವುದೇ ಟ್ರೆಂಡ್​ಗಳನ್ನು ಕೂಡಾ ಮಿಸ್ ಮಾಡುವುದಿಲ್ಲ. ಪ್ರತಿಬಾರಿ ನಿವೇದಿತಾ ಟ್ರೆಂಡಿಂಗ್ ರೀಲ್ಸ್​ಗೆ ಹೆಜ್ಜೆ ಹಾಕುತ್ತಿದ್ದು ಯಾವುದೇ ಭಾಷೆಯ ಹಾಡು, ಆಡಿಯೋ ಕ್ಲಿಪ್ ವೈರಲ್ ಆದಾಗಲೂ ಅವರು ತಪ್ಪದೆ ರೀಲ್ಸ್ ಮಾಡಿ ಶೇರ್ ಮಾಡುತ್ತಾರೆ.

1.5 ಮಿಲಿಯನ್ ಫಾಲೋವರ್ಸ್

ಸದ್ಯ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1428 ಪೋಸ್ಟ್​​ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲ ದಿನವೂ ನಿವೇದಿತಾ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.
Published by:Divya D
First published: