ಹೆಂಡತಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ: ಹೇಗಿತ್ತು ಗೊತ್ತಾ ನಿವೇದಿತಾ ಪ್ರತಿಕ್ರಿಯೆ...!
ಪ್ರೀತಿಸಿ ವಿವಾಹವಾದ ನಿವೇದಿತಾರಿಗೆ ಆಗಾಗ ಚಂದನ್ ಶೆಟ್ಟಿ ಸರ್ಪ್ರೈಸ್ ಕೊಡುತ್ತಲೇ ಇರುತ್ತಾರೆ. ಈಗಲೂ ಒಂದು ದೊಡ್ಡ ಉಡುಗೊರೆಯನ್ನು ಕೊಡುವ ಮೂಲಕ ಮಡದಿಯನ್ನು ಖುಷಿ ಪಡಿಸಿದ್ದಾರೆ ಚಂದನ್ ಶೆಟ್ಟಿ.
ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ಕೋಲುಮಂಡೆ ಹಾಡಿನ ರೀಮಿಕ್ಸ್ನಿಂದಾಗಿ ಸುದ್ದಿಯಲ್ಲಿದ್ದರು. ಈ ವಿವಾದ ತಣ್ಣಗಾಗುತ್ತಿದ್ದಂತೆಯೇ ಚಂದನ್ ಹಾಗೂ ನಿವೇದಿತಾ ಗೌಡ ಮತ್ತೆ ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ. ನಿವೇದಿತಾ ಹಾಗೂ ಚಂದನ್ ತಮ್ಮ ಹೊಸ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನು ಆಗಾಗ ನಿವೇದಿತಾ ಇಂಗ್ಲಿಷ್ ಹಾಡುಗಳ್ನು ಹಾಡುತ್ತಾ ಆ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈಗ ಹಾಡಿನ ವಿಡಿಯೋಗಿಂತ ಹೆಚ್ಚಾಗಿ ಡಬ್ಸ್ಯಾಷ್ನಂತಹ ವಿಡಿಯೋಗಳನ್ನು ಮಾಡಲು ಮತ್ತೆ ಆರಂಭಿಸಿದ್ದಾರೆ. ಇನ್ನು ಈ ಜೋಡಿ ಆಗಾಗ ಮಾಡುವ ಪೋಸ್ಟ್ಗಳಿಂದ ಸಖತ್ ಸದ್ದು ಮಾಡುತ್ತಿರುತ್ತಾರೆ. ಈಗಲೂ ಸಹ ಚಂದನ್ ಶೆಟ್ಟಿ ತಮ್ಮ ಮುದ್ದಿನ ಮಡದಿಗಾಗಿ ಒಂದು ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಅದರಲ್ಲೂ ನಿವೇದಿತಾ ಗೌಡ ಅವರ ಪ್ರತಿಕ್ರಿಯೆ ನೋಡಲೆಂದೇ ಈ ಉಡುಗೊರೆ ನೀಡಿರುವುದಾಗಿ ಚಂದನ್ ಶೆಟ್ಟಿ ಹೇಳಿದ್ದಾರೆ.
ಪ್ರೀತಿಸಿ ವಿವಾಹವಾದ ನಿವೇದಿತಾರಿಗೆ ಆಗಾಗ ಚಂದನ್ ಶೆಟ್ಟಿ ಸರ್ಪ್ರೈಸ್ ಕೊಡುತ್ತಲೇ ಇರುತ್ತಾರೆ. ಈಗಲೂ ಒಂದು ದೊಡ್ಡ ಉಡುಗೊರೆಯನ್ನು ಕೊಡುವ ಮೂಲಕ ಮಡದಿಯನ್ನು ಖುಷಿ ಪಡಿಸಿದ್ದಾರೆ ಚಂದನ್ ಶೆಟ್ಟಿ.
ಚಂದನ್ ಶೆಟ್ಟಿ ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಲು ಒಪ್ಪಿಗೆ ನೀಡಿದ್ದಾರೆ. ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಅವರ ದುಬಾರಿ ಚಿತ್ರಕ್ಕೂ ಚಂದನ್ ಶೆಟ್ಟಿ ಅವರೇ ಸಂಗೀತ ನೀಡುತ್ತಿದ್ದಾರೆ.
Published by:Anitha E
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ