Chandan Shetty: ಚಂದನ್​​ ಶೆಟ್ಟಿ ಫೇಸ್​ಬುಕ್​ ಖಾತೆ ಹ್ಯಾಕ್​!

ಸುಮಾರು 25 ನಿಮಿಷಗಳಿಗೂ ಹೆಚ್ಚು ಹೊತ್ತು ಚಂದನ್​ ಶೆಟ್ಟಿ​ ಫೇಸ್​​ಬುಕ್​ ಖಾತೆಯಿಂದ ಲೈವ್​ ಪ್ರಸಾರವಾಗಿದೆ. 900ಕ್ಕೂ ಅಧಿಕ ಮಂದಿ ಲೈವ್​ ವೀಕ್ಷಿಸಿದ್ದಾರೆ. ವಿದೇಶಿ ವ್ಯಕ್ತಿ ಮತ್ತು ಆತನ ಜೊತೆಗಿದ್ದ ವ್ಯಕ್ತಿ ಲೈವ್​ನಲ್ಲಿ ಅಶ್ಲೀಲ ಕೈ ಸನ್ನೆಗಳನ್ನುತೋರಿಸಿರುವುದು ಕಂಡುಬಂದಿದೆ. ನಂತರ ಲೈವ್​ ಅನ್ನು ಆಫ್​ ಮಾಡಿದ್ದಾರೆ.

ಚಂದನ್ ಶೆಟ್ಟಿ

ಚಂದನ್ ಶೆಟ್ಟಿ

 • Share this:
  ರ‍್ಯಾಪರ್  ಚಂದನ್​ ಶೆಟ್ಟಿ ಅವರ ಫೇಸ್​​ಬುಕ್​ ಖಾತೆ ಹ್ಯಾಕ್​ ಆಗಿದ್ದು, ವಿದೇಶಿ ವ್ಯಕ್ತಿಯೊಬ್ಬ ನಿರಂತರ ಲೈವ್​ ವಿಡಿಯೋ ಪ್ರಸಾರ ಮಾಡಿದ್ದಾನೆ. ಲೈವ್​ ಬಂದ ವ್ಯಕ್ತಿ ವಿಯೆಟ್ನಾಂ ಮೂಲದವನು ಎಂಬ ಮಾತುಗಳು ಕೇಳಿಬಂದಿದೆ.


  ಸುಮಾರು 25 ನಿಮಿಷಗಳಿಗೂ ಹೆಚ್ಚು ಹೊತ್ತು ಚಂದನ್​ ಶೆಟ್ಟಿ​ ಅವರ ಫೇಸ್​​ಬುಕ್​ ಖಾತೆಯಿಂದ ಲೈವ್​ ಪ್ರಸಾರವಾಗಿದೆ. 900ಕ್ಕೂ ಅಧಿಕ ಮಂದಿ ಲೈವ್​ ವೀಕ್ಷಿಸಿದ್ದಾರೆ. ವಿದೇಶಿ ವ್ಯಕ್ತಿ ಮತ್ತು ಆತನ ಜೊತೆಗಿದ್ದ ವ್ಯಕ್ತಿ ಲೈವ್​ನಲ್ಲಿ ಅಶ್ಲೀಲ ಕೈ ಸನ್ನೆಗಳನ್ನು ಮಾಡಿರುವುದು ಕಂಡುಬಂದಿದೆ. ನಂತರ ಲೈವ್​ ಅನ್ನು ಆಫ್​ ಮಾಡಿದ್ದಾರೆ.

  ಚಂದನ್​ ಶೆಟ್ಟಿ ಫೇಸ್​​ಬುಕ್​ ಖಾತೆ


  ಇತ್ತಿಚೆಗೆ ಗಣೇಶ ಹಬ್ಬದ ಪ್ರಯುಕ್ತ ಚಂದನ್​ ಶೆಟ್ಟಿ ಅವರು ಕೋಲು ಮಂಡೆ ವಿಡಿಯೋ ಸಾಂಗ್​ ಅನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಹಾಡು ವಿವಾದ ಸೃಷ್ಠಿಸಿತು.  ಚಂದನ್​ ಶೆಟ್ಟಿ ವಿರುದ್ಧ ಮಲೆ ಮಹದೇಶ್ವರ ಭಕ್ತರು ಸಿಟ್ಟಾಗಿದ್ದರು.

  ಮಹದೇಶ್ವರನ ಭಕ್ತೆ ಶಿವಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಮತ್ತು ಜಾನಪದಗೀತೆಯನ್ನು ಮೂಲ ದಾಟಿಗೆ ವಿರುದ್ದವಾಗಿ ಹಾಡಲಾಗಿದೆ ಎಂದು ಆರೋಪಿಸಿದ್ದರು. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.

  ನಂತರ ಚಂದನ್​ ಶೆಟ್ಟಿ ಮಾಧ್ಯಮದ ಮೂಲಕ ಕ್ಷಮಾಪಣೆ ಕೇಳಿದ್ದರು, ಮಾತ್ರವಲ್ಲದೆ ಯ್ಯೂಟೂಬ್​ನಿಂದ ಹಾಡನ್ನು ತೆಗೆದು ಹಾಕಿದರು.
  Published by:Harshith AS
  First published: