Chandan Shetty-Niveditha Gowda: ಚಂದನ್-ನಿವೇದಿತಾರ ಡ್ಯಾನ್ಸಿಂಗ್ ವಿಡಿಯೋ ವೈರಲ್..!
Chandan Shetty-Niveditha Gowda's Dancing Video: ಚಂದನ್ ನಿವೇದಿತಾರ ಫನ್ನಿ ಹಾಗೂ ಹಾಡುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೂಡಲೇ ವೈರಲ್ ಆಗುತ್ತವೆ. ಈಗ ಮುದ್ದಿನ ಮಡದಿಗೆ ಹುಟ್ಟುಹಬ್ಬದಂದು ಚಂದನ್ ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ. ಅದನ್ನು ನೋಡಿದ ನಿವ್ವಿ ರಿಯಾಕ್ಷನ್ ಸಖತ್ ಕ್ಯೂಟ್ ಆಗಿತ್ತು.
ಪ್ರೀತಿಸಿ ವಿವಾಹವಾದ ನಿವ್ವಿ-ಚಂದನ್ ವಿವಾಹವಾದ ನಂತರದ ಮೊದಲ ಹುಟ್ಟುಹಬ್ಬವನ್ನು ಗೊಂಬೆ ಗಂಡನ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಕಾರಣವಿಲ್ಲದೆ ಆಗಾಗ ಸರ್ಪ್ರೈಸ್ ಕೊಡುವ ಚಂದನ್ ಈಗ ಹೆಂಡತಿಯ ಹುಟ್ಟುಹಬ್ಬಕ್ಕೆ ಕೊಟ್ಟ ಸರ್ಪ್ರೈಸ್ ಹೇಗಿದೆ ಗೊತ್ತಾ..?
ಚಂದನ್ ನಿವೇದಿತಾರ ಫನ್ನಿ ಹಾಗೂ ಹಾಡುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೂಡಲೇ ವೈರಲ್ ಆಗುತ್ತವೆ. ಈಗ ಮುದ್ದಿನ ಮಡದಿಗೆ ಹುಟ್ಟುಹಬ್ಬದಂದು ಚಂದನ್ ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ. ಅದನ್ನು ನೋಡಿದ ನಿವ್ವಿ ರಿಯಾಕ್ಷನ್ ಸಖತ್ ಕ್ಯೂಟ್ ಆಗಿತ್ತು.
ಮನೆಯಲ್ಲೇ ಇರುವ ಹೆಂಡತಿಗೆ ಗೊತ್ತಾಗದಂತೆ ಮನೆಯಲ್ಲಿ ಗುಲಾಬಿ ಹಾಗೂ ಬಿಳಿ ಬಣ್ಣದ ಬಲೂನ್ಗಳಿಂದ ಅಲಂಕರಿಸಿ, ಬಾರ್ಬಿ ಗೊಂಬೆಗಳಿರುವ ಕೇಕ್ ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಜೊತೆಗೆ ಕಪಲ್ ಡ್ಯಾನ್ಸ್ ಮಾಡಿದ್ದಾರೆ. ಈ ಜೋಡಿಯ ಡ್ಯಾನ್ಸಿಂಗ್ ವಿಡಿಯೋ ಈಗ ವೈರಲ್ ಆಗುತ್ತಿದೆ.
ಹೆಂಡತಿಯ ಕ್ಯೂಟ್ ರಿಯಾಕ್ಷನ್ ನೋಡೋಕೆಂದು ಚಂದನ್ ಸರ್ಪ್ರೈಸ್ ಕೊಡ್ತಾರಂತೆ. ಹೀಗೆಂದು ಬರೆದುಕೊಂಡಿರುವ ಅವರು, ಮಡದಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಚಂದನ್ ಹಾಗೂ ನಿವೇದಿತಾರ ಲಾಕ್ಡೌನ್ ಮ್ಯೂಸಿಕ್ ವಿಡಿಯೋಗಳು ಸಹ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿವೆ.