ಮದುವೆಗೂ ಮುಂಚೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನೋದು ಈಗ ಕಾಮನ್. ಇನ್ನು ಸೆಲೆಬ್ರೆಟಿಗಳ ಮದುವೆ ಅಂದರೆ ಕೇಳಬೇಕಾ? ಡಿಫೆರೆಂಟ್ ಲುಕ್ನಲ್ಲಿ ಮಿಂಚುವ ಜೋಡಿಗಳು ಸಖತ್ತಾಗೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೂಡ ಮಿರ ಮಿರ ಮಿಂಚುವ ಉಡುಗೆ ತೊಡುಗೆಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು.
ಇದೀಗ ಮದುವೆಗೆ ಒಂದು ದಿನ ಬಾಕಿ ಇರುವಾಗಲೇ ಅಭಿಮಾನಿಗಳಿಗೆ ಚಂದನ್ ಶೆಟ್ಟಿ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಅದು ಕೂಡ ಗಾನ ಬಜಾನ ಮೂಲಕ. ಹೌದು, ಹೇಳಿ ಕೇಳಿ ಚಂದನ್ ಶೆಟ್ಟಿ ಕನ್ನಡದ ಸೂಪರ್ ರ್ಯಾಪರ್. ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ರ್ಯಾಪ್ ಗೀತೆಗಳ ಮೂಲಕ ಯುವ ಸಮೂಹವನ್ನು ಹುಚ್ಚೆದ್ದು ಕುಣಿಸುವಲ್ಲಿ ಯುವ ಗಾಯಕ ಯಶಸ್ವಿಯಾಗಿದ್ದಾರೆ.
ಇನ್ನು ತಮ್ಮ ನೆಚ್ಚಿನ ಗಾಯಕನಿಂದ ಹೊಸದೊಂದು ಹಾಡಿಗಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದರು. ಈ ಕಾಯುವಿಕೆಯನ್ನು ತಣಿಸಲೆಂದೇ ಇದೀಗ ಚಂದನ್ ಶೆಟ್ಟಿ ಮದುವೆ ದಿನ ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ. ಅದರಂತೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಎರಡನ್ನೂ ಸೇರಿಸಿ, ಒಂದು ಸ್ಪೆಷಲ್ ಸಾಂಗ್ ರೆಡಿ ಮಾಡಿದ್ದಾರಂತೆ ಈ ಜೋಡಿ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಂದಿನ ಕನ್ನಡ ಸಿನಿಮಾ ಯಾವುದು? ಬಿಟ್ಟು ಕೊಟ್ರು ಒಂದು ಸಣ್ಣ ಸುಳಿವು
'ಗೆಟ್ ಹೈ' ಅಂತ ಶುರುವಾಗೋ ಈ ಬೊಂಬಾಟ್ ಸಾಂಗ್ ಪ್ರೋಮೊ ಬಿಡುಗಡೆಯಾಗಿದ್ದು, ಹಾಡಿನಲ್ಲಿ ಕಲರ್ಫುಲ್ ಕಾಸ್ಟ್ಯೂಮ್ಸ್ನಲ್ಲಿ ಯುವ ಜೋಡಿ ಮಿಂಚಿದ್ದಾರೆ. ಇದೇ ಹಾಡನ್ನು ತಮ್ಮ ಮದುವೆ ಸಂಭ್ರಮದಂದು ಅಭಿಮಾನಿಗಳ ಮುಂದಿಡಲು ಚಂದನ್-ನಿವಿ ಪ್ಲ್ಯಾನ್ ಮಾಡಿಕೊಂಡಿದ್ದು, ಅಲ್ಲಿಗೆ ತಾರಾ ಜೋಡಿ ಕಡೆಯಿಂದ ಅಭಿಮಾನಿಗಳಿಗೂ ಮದುವೆ ಗಿಫ್ಟ್ ಅಂತು ಸಿಕ್ಕಂತಾಗಿದೆ.
ಬಿಗ್ ಬಾಸ್ ಮೂಲಕ ಪರಿಚಿತರಾದ ಪ್ರಣಯ ಜೋಡಿ ಚಂದನ್ ಶೆಟ್ಟಿ ಹಾಗೂ ಗೊಂಬೆ ನಿವೇದಿತಾ ಗೌಡ ಅವರ ವಿವಾಹ ಫೆಬ್ರವರಿ 25 ಮತ್ತು 26ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಶನ್ ಹಾಲ್ನಲ್ಲಿ ನಡೆಯಲಿದೆ. ಈ ಶುಭ ಸಮಾರಂಭಕ್ಕೆ ಚಿತ್ರರಂಗದ ತಾರೆಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ