• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Vikrant Rona: ರಾ ರಾ ರಕ್ಕಮ್ಮ ಹಾಡಿಗೆ ಮೈಚಳಿ ಬಿಟ್ಟು ಕುಣಿದ ನಿವೇದಿತಾ ಗೌಡ! ವಿಡಿಯೋ ನೋಡಿ ಯಾಕಮ್ಮ ಎಂದ ನೆಟ್ಟಿಗರು

Vikrant Rona: ರಾ ರಾ ರಕ್ಕಮ್ಮ ಹಾಡಿಗೆ ಮೈಚಳಿ ಬಿಟ್ಟು ಕುಣಿದ ನಿವೇದಿತಾ ಗೌಡ! ವಿಡಿಯೋ ನೋಡಿ ಯಾಕಮ್ಮ ಎಂದ ನೆಟ್ಟಿಗರು

ಚಂದನ್​ ಶೆಟ್ಟಿ, ನಿವೇದಿತಾ ಗೌಡ

ಚಂದನ್​ ಶೆಟ್ಟಿ, ನಿವೇದಿತಾ ಗೌಡ

ರಾ ರಾ ರಕ್ಕಮ್ಮ ಸಾಂಗ್​ ರಿಲೀಸ್​ ಆದಾಗಿನಿಂದಲೂ ಸಖತ್​ ಸೌಂಡ್ ಮಾಡುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ. ಯಾರ ಪ್ರೋಫೈಲ್​ ನೋಡಿದರೂ ರಾ ರಾ ರಕ್ಕಮ್ಮದ್ದೇ ಹವಾ.

  • Share this:

ವಿಕ್ರಾಂತ್​ ರೋಣ (Vikrant Rona) .. ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ವಿಕ್ರಾಂತ್​ ರೋಣ ಪ್ಯಾನ್​ ಇಂಡಿಯಾ (Pan India) ಸಿನಿಮಾ ಸುಮಾರು 10ಕ್ಕೂ ಹೆಚ್ಚು ಭಾಷೆ (Languages) ಗಳಲ್ಲಿ ರಿಲೀಸ್ ಆಗಲಿದೆ. ವಿಕ್ರಾಂತ್ ರೋಣನ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಜೋರಾಗ್ತಿದೆ. ಅದರಲ್ಲೂ ‘ರಾ ರಾ ರಕ್ಕಮ್ಮ’ (Ra Ra Rakkamma) ಹಾಡಂತೂ ಪಡ್ಡೆ ಹುಡುಗರ ನಿತ್ಯದ ಬಾಯಿಪಾಠದಂತೆ ಆಗಿದೆ. ಈ ಹಾಡಿಗೆ ಸ್ಟೆಪ್​ ಹಾಕದವರೇ ಇಲ್ಲ. ಸ್ಯಾಂಡಲ್​ವುಡ್​ ಸ್ಟಾರ್​ಗಳು ಕೂಡ ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.


ರಾ ರಾ ರಕ್ಕಮ್ಮ ಎಂದ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ!


ರಾ ರಾ ರಕ್ಕಮ್ಮ ಸಾಂಗ್​ ರಿಲೀಸ್​ ಆದಾಗಿನಿಂದಲೂ ಸಖತ್​ ಸೌಂಡ್ ಮಾಡುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ. ಯಾರ ಪ್ರೋಫೈಲ್​ ನೋಡಿದರೂ ರಾ ರಾ ರಕ್ಕಮ್ಮದ್ದೆ ಹವಾ. ಚಂದನವದನ ತಾರೆಯರು ಈ ಹಾಡಿಗೆ ಸ್ಟೆಪ್​ ಹಾಕುತ್ತಿದ್ದಾರೆ. ನಟಿ ಆಶಿಕಾ ಕೂಡ ರಾ ರಾ ರಕ್ಕಮ್ಮಗೆ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ಸದಾ ರೀಲ್ಸ್​ ಮಾಡುವ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಈ ಹಾಡಿಗೆ ಸ್ಟೆಪ್ಸ್​ ಹಾಕಿದ್ದಾರೆ. ಕಿಚ್ಚನ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದಾರೆ ನಿವೇದಿತಾ ಗೌಡ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.


ನಿವೇದಿತಾ ವಿಡಿಯೋ ಸಿಕ್ಕಾಪಟ್ಟೆ ವೈರಲ್​!


ಯಕ್ಕ ಸಕ್ಕ, ಯಕ್ಕ ಸಕ್ಕ ಅಂತ ಡ್ಯಾನ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಬ್ಲಾಕ್ ಅಂಡ್ ವೈಟ್ ಮತ್ತು ಚಂದನ್ ಶೆಟ್ಟಿ ಬ್ಲಾಕ್ ಅಂಡ್ ರೆಡ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಸ್ಟೆಪ್ಸ್​ ಕಂಡು ನೆಟ್ಟಿಗರು ದಂಗಾಗಿದ್ದಾರೆ. ನಿವೇದಿತಾ ಗೌಡ ಮೊದಲಿನಿಂದಲೂ ಟಿಕ್​ಟಾಕ್​, ರೀಲ್ಸ್​ ಮಾಡಿ ಫೇಮಸ್​ ಆದವರು. ಹೀಗಾಗಿ ನಿವೇದಿತಾ ಗೌಡರಿಗೆ ಫ್ಯಾನ್ಸ್​ ಫಾಲೋವರ್ಸ್ ಹೆಚ್ಚಿದ್ದಾರೆ. ಇದೀಗ ಗಂಡನ ಜೊತೆ ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ಸ್​ ಹಾಕಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಇದನ್ನೂ ಓದಿ: ಕೆಜಿಎಫ್​ 2 ಬಳಿಕ 'ವಿಕ್ರಾಂತ್​ ರೋಣ'ನ ಸರದಿ! ದಾಖಲೆ ಮೊತ್ತಕ್ಕೆ ಓವರ್​ಸೀಸ್​ ರೈಟ್ಸ್​ ಸೇಲ್​


ಟ್ರೋಲ್​ ಆದ ನಿವೇದಿತಾ ಗೌಡ ರೀಲ್ಸ್​ ವಿಡಿಯೋ!


ಈ ಹಿಂದೆಯೂ  ನಿವೇದಿತಾ  ಗೌಡ ರೀಲ್ಸ್​​ಗಳು ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಈಗಲೂ ಕೂಡ ಅದೇ ಆಗಿದೆ. ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ಸ್​ ಹಾಕಿರುವ ನಿವೇದಿತಾ ಕಂಡು ಯಾಕಮ್ಮ ಅಂತ ನೆಟ್ಟಿಗರು ಕೇಳುತ್ತಿದ್ದಾರೆ. ‘ರಕ್ಕಮ್ಮನಾಗಿ’ ಸೊಂಟ ಬಳುಸಿಕಿ, ಕನ್ನಡಿಗರ ಎದೆಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ  ಸುಂದರಿ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌  ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳೂ ಸಹ ಕಾತರರಾಗಿದ್ದಾರೆ. ಇದರ ನಡುವೆ ಈ ಹಾಡು ಹಿಟ್​ ಆಗಿರುವುದು ಜಾಕಲಿನ್​ಗೆ ಸಂತಸ ಮೂಡಿಸಿದೆ.


ಇದನ್ನೂ ಓದಿ: 'ರಕ್ಕಮ್ಮ'ನಿಗೆ ಕನ್ನಡ ಕಲಿಸಿದ ಕಿಚ್ಚ! "ಕನ್ನಡಿಗರಿಗೆ ನಮಸ್ಕಾರ" ಎಂದ ಜಾಕ್ವೆಲಿನ್


ಜಾಕಲಿನ್​​ಗೆ ಕನ್ನಡ ಕಲಿಸಿಕೊಟ್ಟ ಕಿಚ್ಚ ಸುದೀಪ್​!


ಕಿಚ್ಚ ಸುದೀಪ್‌ ಅವರು ರಕ್ಕಮ್ಮ ಖ್ಯಾತಿಯ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಕನ್ನಡ ಕಲಿಸಿದ್ದಾರೆ. ವಿಕ್ರಾಂತ್ ರೋಣದಲ್ಲಿ ಗಡಂಗ್ ರಕ್ಕಮ್ಮನಾಗಿ ಜಾಕ್ವಲಿನ್ ಕುಣಿದಿದ್ದು, ರಾ ರಾ ರಕ್ಕಮ್ಮ ಹಾಡು ಸಖತ್ ಹಿಟ್ ಆಗಿದೆ. ಇದೇ ಖುಷಿಯಲ್ಲಿರುವ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡಿಸ್‌ಗೆ ಕನ್ನಡ ಭಾಷೆ ಕಲಿಸಿದ್ದಾರೆ. ಕಿಚ್ಚ ಸುದೀಪ್ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ವಿಡಿಯೋ ಕಾಲ್ ಮಾಡಿದ್ದರೆ. ಉಭಯ ಕುಶಲೋಪರಿ ನಡೆಸಿದ ಇಬ್ಬರೂ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹಾಡು ಹಿಟ್ ಆಗಿದ್ದಕ್ಕೆ ಜಾಕ್ವೆನಿಲ್ ಸಂತಸ ವ್ಯಕ್ತಪಡಿಸಿದ್ದಾರೆ.

Published by:Vasudeva M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು