ಬಿಗ್ಬಾಸ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ಪ್ರೀತಿಸಿ ಎರಡೂ ಮನೆಯವ ಸಮ್ಮತಿಯೊಂದಿಗೆ ಹಸೆಮಣೆ ಏರುತ್ತಿರುವ ಚಂದನ್ ಹಾಗೂ ನಿವೇದಿತಾ ಗೌಡ, ತಮ್ಮ ಮದುವೆಗೆ ಕನ್ನಡದ ಚಿತ್ರರಂಗದ ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಿದ್ದಾರೆ.
ಹೌದು, ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಪ್ರೀತಿಸಿದ ಹುಡುಗಿಗೆ ಪ್ರೇಮ ನಿವೇದನೆ ಮಾಡುವ ಮೂಲಕ ವಿವಾದಕ್ಕೀಡಾಗಿದ್ದರು ಚಂದನ್ ಶೆಟ್ಟಿ. ಇದಾದ ನಂತರ ಮೈಸೂರಿನಲ್ಲೇ ಇವರ ನಿಶ್ಚಿತಾರ್ಥ ನಡೆದಿತ್ತು.
![Chandan Shetty Marriage Date, Chandan Shetty Wedding Date, D Boss Darshan, Darshan Toogudeepa, Challenging star Darshan, ಚಾಲೆಂಜಿಂಗ್ ಸ್ಟಾರ್ ದರ್ಶನ್, ಡಿ ಬಾಸ್ ದರ್ಶನ್, Niveditha Gowda Chandan Shetty Wedding Date,]()
ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಇತ್ತೀಚೆಗಷ್ಟೆ ಡಿಬಾಸ್ ದರ್ಶನ್ ಅವರ ಮನೆಗೆ ಹೋಗಿ ಅವರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದರು. ಈಗ ಪುನೀತ್ ರಾಜ್ ಕುಮಾರ್ ಹಾಗೂ ಅವರ ಕುಟುಂಬದವರನ್ನೂ ವಿವಾಹಕ್ಕೆ ಬಂದು ಆರ್ಶೀವದಿಸುವಂತೆ ಕೋರಿದೆ ಈ ಜೋಡಿ.
ನಿವೇದಿತಾ ಹಾಗೂ ಚಂದನ್ ಶೆಟ್ಟಿ ಅವರ ವಿವಾಹ ಇದೇ ತಿಂಗಳ 25 ಹಾಗೂ 26ರಂದು ಮೈಸೂರಿನಲ್ಲಿ ನಡೆಯಲಿದೆ. ಮದುವೆಗಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ಮನೆಯವರೆಲ್ಲ ಮದುವೆ ಕೆಲಸದಲ್ಲಿ ತೊಡಗಿದ್ದಾರೆ.
ಮೈಸೂರಿನ ಸ್ಪೆಕ್ಟ್ರಾ ಸಭಾಂಗಣದಲ್ಲಿ ಇವರ ವಿವಾಹ ನಡೆಯಲಿದ್ದು, ಚಂದನ್ ಹಾಗೂ ನಿವೇದಿತಾ ಲಗ್ನಪತ್ರಿಕೆ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಸ್ಯಾಂಡಲ್ವುಡ್ನ ಈ ತಾರಾ ಜೋಡಿ ಪ್ರೇಮಿಗಳ ದಿನಕ್ಕಾಗಿ ಬೇರೆಯದ್ದೇ ಪ್ಲಾನ್ ಮಾಡಿಕೊಂಡಿದ್ದಾರಂತೆ.
ಇದನ್ನೂ ಓದಿ: ಸಾರಾ ಅಲಿ ಖಾನ್- ಕಾರ್ತಿಕ್ ಆರ್ಯನ್ರ ಮತ್ತೊಂದು ವಿಡಿಯೋ ವೈರಲ್..!
ಹೊಸ ವರ್ಷವನ್ನೂ ಈ ಜೋಡಿ ಒಟ್ಟಾಗಿ ಬರಮಾಡಿಕೊಳ್ಳಲಾಗಲಿಲ್ಲ. ಆಗ ಚಂದನ್ ವಿದೇಶದಲ್ಲಿ ಕನ್ಸರ್ಟ್ನಲ್ಲಿ ಬ್ಯುಸಿಯಾಗಿದ್ದರು. ಇದೇ ಕಾರಣಕ್ಕೆ ಈಗ ಪ್ರೇಮಿಗಳ ದಿನವನ್ನಾದರೂ ಒಟ್ಟಾಗಿ ಆಚರಿಸೋಣ ಅಂತಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ