ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್ ತಪ್ಪಿದೆ.. ಈ ಹಾಡು ಕೇಳದವರೇ ಇಲ್ಲ. ಈ ಸಾಂಗ್(Song) ಎಷ್ಟು ಫೇಮಸ್ ಆಯ್ತು ಅಂದರೆ, ಬರೀ ಇಂಗ್ಲಿಷ್(English) ಹಾಡುಗಳನ್ನೇ ಹಾಕುತ್ತಿದ್ದ ಪಬ್ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಮಾಡಿದ್ದು, ಚಂದನ್ ಶೆಟ್ಟಿ(Chandan Shetty). ಹೌದು, ಚಂದನ್ ಶೆಟ್ಟಿ ಕನ್ನಡದ ಆಲ್ಬಂ ಸಾಂಗ್(Album Song)ಗೆ ಮುನ್ನುಡಿ ಬರೆದವರು. ಅವರ ಹಾಡುಗಳೆಲ್ಲ ಸಖತ್ ಫೇಮಸ್ ಆಗಿದ್ದವು. ಚಂದನ್ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ(Niveditha Gowda) ಮದುವೆ ವಿಚಾರ ಕೂಡ ಸಖತ್ ಸೌಂಡ್ ಮಾಡಿತ್ತು. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಸದಾ ಇನ್ಸ್ಟಾಗ್ರಾಂ ರೀಲ್ಸ್(Instagram Reels) ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಇವರ ಹೊಸ ರೀಲ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಚಂದನ್ ಶೆಟ್ಟಿ-ನಿವೇದಿತಾ ಗೌಡಿ ಇಬ್ಬರು ಬಡಿದಾಡಿಕೊಂಡಿದ್ದಾರೆ. ಹೌದು, ಇದನ್ನು ಕೇಳಿ ಶಾಕ್(Shock) ಆಗಬೇಡಿ. ಇಬ್ಬರು ಬಡಿದಾಡಿಕೊಳ್ಳುವಂತೆ ನಟಿಸಿದ್ದಾರೆ. ಈ ವಿಡಿಯೋ ಇದೀ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊದಲಿಗೆ ವಿಡಿಯೋ ನೋಡಿದವರು ಇದ್ಯಾಕೆ ಹೀಗೆ ಗಂಡ - ಹೆಂಡತಿ ಹೊಡೆದಾಡಿಕೊಳ್ತಿದ್ದಾರೆ ಎಂದುಕೊಂಡಿದ್ದರು. ಪೂರ್ತಿ ವಿಡಿಯೋ ನೋಡಿದ ಬಳಿಕ ಇದೊಂದು ರೀಲ್ಸ್ ಎಂದು ತಿಳಿದು ಸುಮ್ಮನಾಗಿದ್ದಾರೆ.
ಇನ್ಸ್ಟಾಗ್ರಾಂ ರೀಲ್ಸ್ ಮಾಡಿ ಚಂದನ್-ನಿವ್ವಿ ಸಿಕ್ಕಾಪಟ್ಟೆ ಫೇಮಸ್!
ಹೌದು, ಟಿಕ್ಟಾಕ್ ಭಾರತದಲ್ಲಿ ಬ್ಯಾನ್ ಆಗುವ ಮುನ್ನ, ಅನೇಕ ಜನರು ಈ ಆ್ಯಪ್ ಮೂಲಕ ಫೇಮಸ್ ಆದರು. ಅದರಲ್ಲಿ ನಿವೇದಿತಾ ಗೌಡ ಒಬ್ಬರು. ಇದರಿಂದಲೇ ಬಿಗ್ಬಾಸ್ ಮನೆಗೂ ಹೋಗಿ ಬಂದರು. ಇದಾದ ಬಳಿಕ ಚಂದನ್ ಶೆಟ್ಟಿ ಜೊತೆ ಮದುವೆಯಾದರು. ಈಗ ಟಿಕ್ಟಾಕ್ ಇಲ್ಲದ ಕಾರಣ ಇನ್ಸ್ಟಾಗ್ರಾಂನಲ್ಲಿ ನಿವೇದಿತಾ ಗೌಡ ರೀಲ್ಸ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೀಲ್ಸ್ (Niveditha Gowda Instagram Reels)) ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಾರೆ. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 13 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.
ಇದನ್ನು ಓದಿ: `ವಿಕ್ರಾಂತ್ ರೋಣ‘ನಿಗೆ OTTಯಿಂದ ಭರ್ಜರಿ ಆಫರ್.. ಇಷ್ಟು ಹಣ ಈ ಹಿಂದೆ ಯಾವ ಸಿನಿಮಾಗೂ ಕೊಟ್ಟಿಲ್ವಂತೆ!
ಸಖತ್ ವೈರಲ್ ಆಯ್ತು ಚಂದನ್-ನಿವ್ವಿ ಹೊಡೆದಾಡು ರೀಲ್ಸ್!
ಸಮಯ ಸಿಕ್ಕಾಗೆಲ್ಲ ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ರೀಲ್ಸ್ ಮಾಡುತ್ತಿರುತ್ತಾರೆ. ಹೀಗೆ ಇತ್ತೀಚೆಗೆ ಇಬ್ಬರು ಒಟ್ಟಿಗೆ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಇಬ್ಬರು ಹೊಡೆದಾಡಿಕೊಳ್ಳುವಂತೆ ನಟಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮ್ಯೂಸಿಕ್ ಇಲ್ಲದೇ ಈ ವಿಡಿಯೋ ನೋಡಿದರೆ ಇಬ್ಬರೂ ನಿಜ ಬಡಿದಾಡಿಕೊಂಡಿದ್ದಾರೆ ಎಂದು ಹೇಳುಬಹುದು. ಇನ್ನೂ ಈ ವಿಡಿಯೋ ಕೂಡ ಟ್ರೋಲ್ ಆಗಿದೆ. ಟ್ರೋಲಿಗರು ಈ ವಿಡಿಯೋ ಜೊತೆ ಮಿಮ್ಸ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ.
View this post on Instagram
ಅಮ್ಮ, ಅಜ್ಜಿ ಜೊತೆ ರೀಲ್ಸ್ ಮಾಡಿದ್ದ ನಿವೇದಿತಾ!
ಕೆಲವೊಂದು ರೀಲ್ಸ್ನಲ್ಲಿ ನಿವೇದಿತಾ ಗೌಡ ಅವರು ತಾಯಿಯ ಜತೆ ಕಾಣಿಸಿಕೊಳ್ಳುತ್ತಾರೆ. ಅಮ್ಮ-ಮಗಳ ಡ್ಯಾನ್ಸ್ ಕಂಡು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದುಂಟು. ಈ ಬಾರಿ ಅಮ್ಮ-ಮಗಳ ಜತೆಗೆ ಅಜ್ಜಿಯೂ ಸೇರಿಕೊಂಡಿದ್ದಾರೆ. ಹೌದು, ನಿವೇದಿತಾ ಗೌಡ ಕುಟುಂಬದ ಮೂರು ತಲೆಮಾರಿನವರು ಜತೆಯಾಗಿ ಈ ರೀಲ್ಸ್ ಮಾಡಿದ್ದಾರೆ. ಅದನ್ನು ಕಂಡು ಅವರ ಫ್ಯಾನ್ಸ್ ಕಣ್ಣರಳಿಸಿದ್ದಾರೆ.
View this post on Instagram
‘ಮೂರು ತಲೆಮಾರಿನ ಡ್ಯಾನ್ಸ್. ನಾನು, ಅಮ್ಮ ಮತ್ತು ಅಜ್ಜಿ’ ಎಂದು ಈ ವಿಡಿಯೋಗೆ ನಿವೇದಿತಾ ಕ್ಯಾಪ್ಷನ್ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ