• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Niveditha Gowda: ಏನೋ ಮಾಡಲು ಹೋಗಿ ಇನ್ನೇನೊ ಮಾಡಿದ್ರು.. ನಿವೇದಿತಾ ಗೌಡ ರೀಲ್ಸ್​ ಸಿಕ್ಕಾಪಟ್ಟೆ ಟ್ರೋಲ್​!

Niveditha Gowda: ಏನೋ ಮಾಡಲು ಹೋಗಿ ಇನ್ನೇನೊ ಮಾಡಿದ್ರು.. ನಿವೇದಿತಾ ಗೌಡ ರೀಲ್ಸ್​ ಸಿಕ್ಕಾಪಟ್ಟೆ ಟ್ರೋಲ್​!

ಚಂದನ್​ ಶೆಟ್ಟಿ, ನಿವೇದಿತಾ ಗೌಡ

ಚಂದನ್​ ಶೆಟ್ಟಿ, ನಿವೇದಿತಾ ಗೌಡ

ಇತ್ತೀಚೆಗೆ ಪ್ರ್ಯಾಂಕ್​ ವಿಡಿಯೋ ಮಾಡುವುದು ಸಾಮನ್ಯವಾಗಿ ಬಿಟ್ಟಿದೆ. ಅದನ್ನೇ ಇಲ್ಲಿ ನಿವೇದಿತಾ ಗೌಡ ಮಾಡಿದ್ದಾರೆ. ಗಂಡ ಚಂದನ್​ ಶೆಟ್ಟಿ ಮುಂದೆ ಪ್ರ್ಯಾಂಕ್​ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮಾತ್ರ ಶಾಕ್​ ಆಗಿದ್ದಾರೆ. ಇದೇನು ಈ ರೀತಿ ಮಾಡಿದ್ದಾರೆ. ಚೂರು ಬುದ್ದಿ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಚಂದನ್​ ಮುಂದೆ ಟವಲ್​ ತೆಗೆದು ಪ್ರ್ಯಾಂಕ್​ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್​ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್​​ ತಪ್ಪಿದೆ.. ಈ ಹಾಡು ಕೇಳದವರೇ ಇಲ್ಲ. ಈ ಸಾಂಗ್​(Song) ಎಷ್ಟು ಫೇಮಸ್​ ಆಯ್ತು ಅಂದರೆ, ಬರೀ ಇಂಗ್ಲಿಷ್​(English)​ ಹಾಡುಗಳನ್ನೇ ಹಾಕುತ್ತಿದ್ದ ಪಬ್​ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಮಾಡಿದ್ದು, ಚಂದನ್​ ಶೆಟ್ಟಿ(Chandan Shetty). ಹೌದು, ಚಂದನ್​ ಶೆಟ್ಟಿ ಕನ್ನಡದ ಆಲ್ಬಂ ಸಾಂಗ್(Album Song)​ಗೆ ಮುನ್ನುಡಿ ಬರೆದವರು. ಅವರ ಹಾಡುಗಳೆಲ್ಲ ಸಖತ್​ ಫೇಮಸ್​ ಆಗಿದ್ದವು. ಚಂದನ್​ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ(Niveditha Gowda) ಮದುವೆ ವಿಚಾರ ಕೂಡ ಸಖತ್​ ಸೌಂಡ್​ ಮಾಡಿತ್ತು. ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಸದಾ ಇನ್​ಸ್ಟಾಗ್ರಾಂ ರೀಲ್ಸ್(Instagram Reels) ಮಾಡಿ ಪೋಸ್ಟ್​ ಮಾಡುತ್ತಿರುತ್ತಾರೆ. ಇದೀಗ ಇವರ ಹೊಸ ರೀಲ್ಸ್​ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಆದರೆ, ಈ ಬಾರಿ ಈ ರೀಲ್ಸ್(Reels)​ ಸಖತ್​ ಟ್ರೋಲ್​ ಆಗುತ್ತಿದೆ. ಸೆಲೆಬ್ರಿಟಿ(Celebrity)ಯಾಗಿ ಈ ರೀತಿಯ ವಿಡಿಯೋಗಳನ್ನು ಮಾಡುವುದು ಎಷ್ಟು ಸರಿ ಎಂದು ಎಲ್ಲರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಜೊತೆಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 


ಚಂದನ್​ ಮುಂದೆ ನಿವೇದಿತಾ ಗೌಡ ಮಾಡಿದ್ದೇನು ಗೊತ್ತಾ?


ಇತ್ತೀಚೆಗೆ ಪ್ರ್ಯಾಂಕ್​ ವಿಡಿಯೋ ಮಾಡುವುದು ಸಾಮನ್ಯವಾಗಿ ಬಿಟ್ಟಿದೆ. ಅದನ್ನೇ ಇಲ್ಲಿ ನಿವೇದಿತಾ ಗೌಡ ಮಾಡಿದ್ದಾರೆ. ಗಂಡ ಚಂದನ್​ ಶೆಟ್ಟಿ ಮುಂದೆ ಪ್ರ್ಯಾಂಕ್​ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮಾತ್ರ ಶಾಕ್​ ಆಗಿದ್ದಾರೆ. ಇದೇನು ಈ ರೀತಿ ಮಾಡಿದ್ದಾರೆ. ಚೂರು ಬುದ್ದಿ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಚಂದನ್​ ಮುಂದೆ ಟವಲ್​ ತೆಗೆದು ಪ್ರ್ಯಾಂಕ್​ ಮಾಡಿದ್ದಾರೆ.ನಿವೇದಿತಾ ಗೌಡ ಒಳಗೆ ಉಡುಪನ್ನು ಧರಿಸಿ, ಅದರ ಮೇಲೆ ಟವಲ್​ ಉಟ್ಟಿದ್ದಾರೆ. ಬಳಿಕ ಅದನ್ನು ತೆಗೆಯುವಂತೆ ಮಾಡಿದ್ದಾರೆ. ಇದನ್ನು ಕಂಡ ಚಂದನ್​ ಶೆಟ್ಟಿ ಕೂತಿದ್ದವರು, ಕೂಡಲೇ ಎದ್ದು ಅವರನ್ನು ಹಿಡಿದುಕೊಂಡಿದ್ದಾರೆ. ಈ ರೀತಿ ಮಾಡುವುದು ಎಷ್ಟು ಸರಿ. ಇದರಿಂದ ಏನು ಹೇಳಲು ಹೊರಟ್ಟಿದ್ದೀರ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.




ಇದನ್ನು ಓದಿ : ಅಪ್ಪು ದೇವರು ಅನ್ನೋಕೆ ಈ ಫೋಟೋಗಳೇ ಸಾಕ್ಷಿ.. ನೋಡಿದವರ ಮನಸ್ಸು ಭಾರವಾಗುತ್ತೆ ಕಣ್ರಿ..!


ಸಖತ್​ ವೈರಲ್ ಆಗಿತ್ತು  ಇಬ್ಬರು ಹೊಡೆದಾಡುವ ರೀಲ್ಸ್​ ವೈರಲ್​!


ಹೌದು, ಕಳೆದ ಬಾರಿಯೂ ಇಂತದ್ದೇ ವಿಡಿಯೋ ಮಾಡಿ ಸಖತ್​ ಟ್ರೋಲ್​ ಆಗಿದ್ದರು. ಸಮಯ ಸಿಕ್ಕಾಗೆಲ್ಲ ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ರೀಲ್ಸ್ ಮಾಡುತ್ತಿರುತ್ತಾರೆ. ಹೀಗೆ ಇತ್ತೀಚೆಗೆ ಇಬ್ಬರು ಒಟ್ಟಿಗೆ ಹಾಡೊಂದಕ್ಕೆ ರೀಲ್ಸ್​ ಮಾಡಿದ್ದಾರೆ. ಇಬ್ಬರು ಹೊಡೆದಾಡಿಕೊಳ್ಳುವಂತೆ ನಟಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಮ್ಯೂಸಿಕ್​ ಇಲ್ಲದೇ ಈ ವಿಡಿಯೋ ನೋಡಿದರೆ ಇಬ್ಬರೂ ನಿಜ ಬಡಿದಾಡಿಕೊಂಡಿದ್ದಾರೆ ಎಂದು ಹೇಳುಬಹುದು. ಇನ್ನೂ ಈ ವಿಡಿಯೋ ಕೂಡ ಟ್ರೋಲ್​ ಆಗಿದೆ. ಟ್ರೋಲಿಗರು ಈ ವಿಡಿಯೋ ಜೊತೆ ಮಿಮ್ಸ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ.


ಇದನ್ನು ಓದಿ: Dangal ಚಿತ್ರಕ್ಕೆ ಶಾರ್ಟ್​ ಲಿಸ್ಟ್​ ಆಗಿದ್ದಕ್ಕೆ ಬೇಸರಗೊಂಡಿದ್ದರಂತೆ ಈ ನಟಿ.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!


ಅಮ್ಮ, ಅಜ್ಜಿ ಜೊತೆ ರೀಲ್ಸ್ ಮಾಡಿದ್ದ ನಿವೇದಿತಾ!


ಕೆಲವೊಂದು ರೀಲ್ಸ್​ನಲ್ಲಿ ನಿವೇದಿತಾ ಗೌಡ ಅವರು ತಾಯಿಯ ಜತೆ ಕಾಣಿಸಿಕೊಳ್ಳುತ್ತಾರೆ. ಅಮ್ಮ-ಮಗಳ ಡ್ಯಾನ್ಸ್​ ಕಂಡು ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದುಂಟು. ಈ ಬಾರಿ ಅಮ್ಮ-ಮಗಳ ಜತೆಗೆ ಅಜ್ಜಿಯೂ ಸೇರಿಕೊಂಡಿದ್ದಾರೆ. ಹೌದು, ನಿವೇದಿತಾ ಗೌಡ ಕುಟುಂಬದ ಮೂರು ತಲೆಮಾರಿನವರು ಜತೆಯಾಗಿ ಈ ರೀಲ್ಸ್​ ಮಾಡಿದ್ದಾರೆ. ಅದನ್ನು ಕಂಡು ಅವರ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

Published by:Vasudeva M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು