ನಿವೇದಿತಾ ಗೌಡ(Niveditha Gowda).. ಈ ಹೆಸರು ಕೇಳಿದರೆ ನಮ್ಮ ತಲೆಯಲ್ಲಿ ಬೇರೆಯದ್ದೆ ಇಂಗ್ಲಿಷ್ ಮಾತುಗಳು ನೆನಪಿಗೆ ಬರುತ್ತವೆ. ಹೌದು, ನಿವೇದಿತಾ ಗೌಡ ಬಿಗ್ಬಾಸ್(Big Boss) ಮೂಲಕ ಇಡೀ ಕರುನಾಡಿಗೆ ಪರಿಚಯವಾದರು. ಈ ಟಿಕ್ಟಾಕ್ ಸ್ಟಾರ್, ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದೇ ತಡ ಎಲ್ಲರ ಮನೆಯಲ್ಲೂ ಇವರದ್ದೇ ಮಾತು. ಇದಾದ ಬಳಿಕ ಚಂದನ್ ಶೆಟ್ಟಿ(Chandan Shetty) ಅವರನ್ನು ನಿವೇದಿತಾ ಗೌಡ ಪ್ರೀತಿಸಿ ಮದುವೆಯಾದರು. ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್ ತಪ್ಪಿದೆ.. ಈ ಹಾಡು ಕೇಳದವರೇ ಇಲ್ಲ. ಈ ಸಾಂಗ್(Song) ಎಷ್ಟು ಫೇಮಸ್ ಆಯ್ತು ಅಂದರೆ, ಬರೀ ಇಂಗ್ಲಿಷ್(English) ಹಾಡುಗಳನ್ನೇ ಹಾಕುತ್ತಿದ್ದ ಪಬ್ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಮಾಡಿದ್ದು, ಚಂದನ್ ಶೆಟ್ಟಿ(Chandan Shetty). ಹೌದು, ಚಂದನ್ ಶೆಟ್ಟಿ ಕನ್ನಡದ ಆಲ್ಬಂ ಸಾಂಗ್(Album Song)ಗೆ ಮುನ್ನುಡಿ ಬರೆದವರು. ಇತ್ತ ಮದುವೆ ಆದಮೇಲೂ ನಿವೇದಿತಾ ಗೌಡ ರೀಲ್ಸ್ ಮಾಡುವದನ್ನು ನಿಲ್ಲಸಲೇ ಇಲ್ಲ. ಗಂಡ-ಹೆಂಡತಿ ಇಬ್ಬರು ಸೇರಿ ರೀಲ್ಸ್ ಮಾಡುವುದಕ್ಕೆ ಶುರುಮಾಡಿದ್ದರು. ಇತ್ತೀಚೆಗೆ ಇಬ್ಬರು ಹೊಡೆದಾಡುವ ರೀಲ್ಸ್(Reels) ಮಾಡಿ ಸಖತ್ ಟ್ರೋಲ್ ಆಗಿದ್ದರು. ಇದರ ಬೆನ್ನಲ್ಲೇ ಚಂದನ್ ಮುಂದೆ ಟವೆಲ್ ತೆಗೆದು ಪ್ರ್ಯಾಂಕ್(Prank) ಮಾಡುವ ರೀಲ್ಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ನಿವೇದಿತಾ ಗೌಡ ಅವರ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಹಾಗಲಕಾಯಿ ತಿಂದು ಟ್ರೋಲ್ ಆದ ನಿವೇದಿತಾ ಗೌಡ!
ಹೌದು, ಇನ್ಸ್ಟಾಗ್ರಾಂ ರೀಲ್ಸ್ನಲ್ಲಿ ಸದಾ ಹೊಸ ಹೊಸ ಕಾನ್ಸೆಪ್ಟ್ ವಿಡಿಯೋಗಳನ್ನು ನಿವೇದಿತಾ ಗೌಡ ಶೇರ್ ಮಾಡುತ್ತಾರೆ. ಇದೀಗ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಹ್ಯಾಂಡ್ ಕ್ರಿಕೆಟ್ ಆಡಿದ್ದಾರೆ. ಹ್ಯಾಂಡ್ ಕ್ರಿಕೆಟ್ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಗೊತ್ತಿದೆ. ಗೊತ್ತಿಲ್ಲದೆ ಇರುವವರು ನಿವೇದಿತ ಗೌಡ ಅವರ ವಿಡಿಯೋ ನೋಡಿ. ಇದರಲ್ಲಿ ಸೋತವರು ಹಾಗಲಕಾಯಿ ತಿನ್ನಬೇಕು. ಗೆದ್ದವರು ಆ್ಯಪಲ್ ತಿನ್ನಬೇಕು. ಇಬ್ಬರು ಗೇಮ್ ಶುರು ಮಾಡುತ್ತಾರೆ. ಪ್ರತಿಬಾರಿಯೂ ಸೋಲುವ ನಿವೇದಿತಾ ಗೌಡ ಹಾಗಲಕಾಯಿ ತಿಂದಿದ್ದಾರೆ. ಇತ್ತ ಹೆಂಡತಿಯನ್ನು ಸೋಲಿಸಿ ಚಂದನ್ ಶೆಟ್ಟಿ ಆ್ಯಪಲ್ ತಿಂದಿದ್ದಾರೆ. ಹಾಗಲಕಾಯಿ ತಿನ್ನುವಂತೆ ನಿವೇದಿತಾ ಗೌಡ ಸ್ವಲ್ ಕಚ್ಚಿ ಮತ್ತೆ ವಾಪಸ್ ಇಟ್ಟಿದ್ದಾರೆ. ಇದನ್ನು ಕಂಡ ಟ್ರೋಲಿಗರು , ಇಂತಹ ಆಟಗಳನ್ನೇ ಇಬ್ಬರು ಆಡಿ. ಸಮಾಜಕ್ಕೆ ಸಂದೇಶ ನೀಡುವ ಕೆಲಸಗಳನ್ನು ಮಾಡಬೇಡಿ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನು ಓದಿ : ಏನೋ ಮಾಡಲು ಹೋಗಿ ಇನ್ನೇನೊ ಮಾಡಿದ್ರು.. ನಿವೇದಿತಾ ಗೌಡ ರೀಲ್ಸ್ ಸಿಕ್ಕಾಪಟ್ಟೆ ಟ್ರೋಲ್!
ಟವೆಲ್ ತೆಗೆದು ಟ್ರೋಲ್ ಆಗಿದ್ದ ನಿವೇದಿತಾ ಗೌಡ!
ಇತ್ತೀಚೆಗೆ ಪ್ರ್ಯಾಂಕ್ ವಿಡಿಯೋ ಮಾಡುವುದು ಸಾಮನ್ಯವಾಗಿ ಬಿಟ್ಟಿದೆ. ಅದನ್ನೇ ಇಲ್ಲಿ ನಿವೇದಿತಾ ಗೌಡ ಮಾಡಿದ್ದಾರೆ. ಗಂಡ ಚಂದನ್ ಶೆಟ್ಟಿ ಮುಂದೆ ಪ್ರ್ಯಾಂಕ್ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ. ಇದೇನು ಈ ರೀತಿ ಮಾಡಿದ್ದಾರೆ. ಚೂರು ಬುದ್ದಿ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಚಂದನ್ ಮುಂದೆ ಟವಲ್ ತೆಗೆದು ಪ್ರ್ಯಾಂಕ್ ಮಾಡಿದ್ದಾರೆ. ನಿವೇದಿತಾ ಗೌಡ ಒಳಗೆ ಉಡುಪನ್ನು ಧರಿಸಿ, ಅದರ ಮೇಲೆ ಟವಲ್ ಉಟ್ಟಿದ್ದಾರೆ. ಬಳಿಕ ಅದನ್ನು ತೆಗೆಯುವಂತೆ ಮಾಡಿದ್ದಾರೆ. ಇದನ್ನು ಕಂಡ ಚಂದನ್ ಶೆಟ್ಟಿ ಕೂತಿದ್ದವರು, ಕೂಡಲೇ ಎದ್ದು ಅವರನ್ನು ಹಿಡಿದುಕೊಂಡಿದ್ದಾರೆ. ಈ ರೀತಿ ಮಾಡುವುದು ಎಷ್ಟು ಸರಿ. ಇದರಿಂದ ಏನು ಹೇಳಲು ಹೊರಟ್ಟಿದ್ದೀರ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.
ಇದನ್ನು ಓದಿ : ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟ ಸತೀಶ್.. ತುಂಬಾ ಮುದ್ದಾಗಿದ್ದಾಳೆ ಮನಸ್ವಿತಾ!
ಸಖತ್ ವೈರಲ್ ಆಗಿತ್ತು ಇಬ್ಬರು ಹೊಡೆದಾಡುವ ರೀಲ್ಸ್ ವೈರಲ್!
ಇತ್ತೀಚೆಗೆ ಇಬ್ಬರು ಒಟ್ಟಿಗೆ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಇಬ್ಬರು ಹೊಡೆದಾಡಿಕೊಳ್ಳುವಂತೆ ನಟಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮ್ಯೂಸಿಕ್ ಇಲ್ಲದೇ ಈ ವಿಡಿಯೋ ನೋಡಿದರೆ ಇಬ್ಬರೂ ನಿಜ ಬಡಿದಾಡಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ಈ ವಿಡಿಯೋ ಕೂಡ ಟ್ರೋಲ್ ಆಗಿದೆ. ಟ್ರೋಲಿಗರು ಈ ವಿಡಿಯೋ ಜೊತೆ ಮಿಮ್ಸ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ