Song On Corona By Chandan Shetty: ಕೊರೋನಾಗೆ ತಿಥಿ ಮಾಡ್ತಾರಂತೆ ಚಂದನ್ ಶೆಟ್ಟಿ -ನಿವೇದಿತಾ: ಹೇಗೆ ಗೊತ್ತಾ..?
Song On Corona By Chandan Shetty: ಈಗ ಕೊರೋನಾ ಕುರಿತಾಗಿ ಸಾಕಷ್ಟು ಮಂದಿ ಹಾಡುಗಳನ್ನು ಬರೆದು ಹಾಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಈಗ ಚಂದನ್ ಶೆಟ್ಟಿ ಸಹ ಕೊರೋನಾಗೆ ತಿಥಿ ಮಾಡಲು ಸಿದ್ಧರಾಗಿದ್ದಾರೆ. ಅವರ ಈ ಹಾಡಿಗೆ ನಿವ್ವಿ ಸಹ ಸಖತ್ ಸ್ಟೆಪ್ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಹ ಕೊರೋನಾ ಭೀತಿಯಿಂದ ಹನಿಮೂನ್ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ ತಾಯ್ನಾಡಿಗೆ ಹಿಂತಿರುಗಿದ್ದು ಗೊತ್ತೇ ಇದೆ. ಈಗ ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ.
ಚಂದನ್ ಎಚ್ಟು ಚೆನ್ನಾಗಿ ಹಾಡುತ್ತಾರೆ ಅಂತ ಹೇಳಬೇಕಿಲ್ಲ. ಇನ್ನೂ ಗೊಂಬೆ ನಿವೇದಿತಾ ಸಹ ಚಂದನ್ ತಾಳಕ್ಕೆ ಎಷ್ಟು ಕ್ಯೂಟ್ ಆಗಿ ಕುಣಿಯುತ್ತಾರೆ ಅಂತ ಗೊತ್ತೇ ಇದೆ. ಈಗಾಗಲೇ ಅವರ ಹಳೇ ವಿಡಿಯೋಗಳನ್ನು ನೋಡಿರುವವರಿಗೆ ಅದರ ಬಗ್ಗೆ ಹೇಳಬೇಕಿಲ್ಲ.
ಈಗ ಕೊರೋನಾ ಕುರಿತಾಗಿ ಸಾಕಷ್ಟು ಮಂದಿ ಹಾಡುಗಳನ್ನು ಬರೆದು ಹಾಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಈಗ ಚಂದನ್ ಶೆಟ್ಟಿ ಸಹ ಕೊರೋನಾಗೆ ತಿಥಿ ಮಾಡಲು ಸಿದ್ಧರಾಗಿದ್ದಾರೆ. ಅವರ ಈ ಹಾಡಿಗೆ ನಿವ್ವಿ ಸಹ ಸಖತ್ ಸ್ಟೆಪ್ ಹಾಕಿದ್ದಾರೆ.
ತಮ್ಮ ಹಾಡಿನ ಮೂಲಕ ನಿವ್ವಿ ಹಾಗೂ ಚಂದನ್ ಜನರಿಗೆ ಮನೆಯಲ್ಲೇ ಇರುವಂತೆ ಮನವಿ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಕೇವಲ ಅರ್ಧ ಗಂಟೆ ಹಿಂದೆಯಷ್ಟೆ ಪೋಸ್ಟ್ಮಾಡಿದ್ದು, ಈಗಾಗಲೇ ಅದಕ್ಕೆ ಲೈಕ್ಸ್ ಹಾಗೂ ವೀಕ್ಷಣೆ ಸಿಗುತ್ತಿದೆ.
Niveditha-Chandan Shetty: ಮೊದಲ ಯುಗಾದಿ ಆಚರಿಸಿದ ಚಂದನ್-ನಿವೇದಿತಾರ ಕ್ಯೂಟ್ ಚಿತ್ರಗಳು..!
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ