ಲಾಕ್ಡೌನ್ನಿಂದಾಗಿ ಎಲ್ಲರೂ ಮನೆಗಳಲ್ಲೇ ಇರುವಂತಾಗಿದೆ. ಕೊರೋನಾ ಹರಡುವ ಭೀತಿಯಿಂದಾಗಿ ಈ ಆದೇಶ ನೀಡಲಾಗಿದ್ದು, ಸಾಕಷ್ಟು ಮಂದಿ ಮನೆಗಳಿಂದ ಹೊರ ಬಾರದೆ ಸೋಂಕು ಹರಡುವುದನ್ನು ತಡೆಯುತ್ತಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ.
ಇತ್ತೀಚೆಗಷ್ಟೆ ವಿವಾಹವಾದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಹನಿಮೂನ್ನಿಂದ ಹಿಂತಿರುಗಿದ ನಂತರ ಮನೆಯಲ್ಲೇ ಇದ್ದಾರೆ. ಅಲ್ಲದೆ ಅಭಿಮಾನಿಗಳಿಗೂ ಮನೆಯಲ್ಲೇ ಇರುವಂತೆ ಮನವಿ ಸಹ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ ಕೊರೋನಾಗೆ ತಿಥಿ ಮಾಡುವ ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದಿದ್ದರು.
![Chandan Shetty and Niveditha Gowda celebrated their first Ugadi here are the photos]()
ನಿವೇದಿತಾ ಗೌಡ - ಚಂದನ್ ಶೆಟ್ಟಿ
ಈಗ ಇದೇ ಸೆಲೆಬ್ರಿಟಿ ಜೋಡಿ ಲವ್ ಸಾಂಗ್ ಹಾಡಿದ್ದು, ಅದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿವ್ವಿ ಹಾಡಿದರೆ, ಚಂದನ್ ಗಿಟಾರ್ ನುಡಿಸಿದ್ದಾರೆ.
ಈ ಹಿಂದೆ ಚಂದನ್ ಹಾಗೂ ನಿವೇದಿತಾ ಹಾಡಿದ್ದ ಕೊರೋನಾ ಕುರಿತಾದ ಹಾಡು ಸಹ ಕೇಳುಗರಿಗೆ ಇಷ್ಟವಾಗಿತ್ತು. ಕೊರೋನಾದಿಂದಾಗಿ ಹನುಮೂನ್ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಮರಳಿದ್ದರು ಈ ಜೋಡಿ.
Akshay Kumar: ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತೆ 3 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ