Bangaluru: ಹೊಸ ಮನೆಯಲ್ಲಿ ‘ಹೊಸಜೀವನ’, ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್​, ಕವಿತಾ ದಿಲ್​ ಖುಷ್​

ಹೊಸ ಮನೆಯ ಬಾಲ್ಕನಿ ಫೋಟೋಗಳನ್ನು ಹಂಚಿಕೊಂಡಿರುವ ಚಂದನ್ ಕುಮಾರ್, "ಹೊಸ ಮನೆಯಲ್ಲಿ ಹೊಸ ಜೀವನ. ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಖರೀದಿ ಮಾಡಿದ್ದೇನೆ" ಎಂದು ಕ್ಯಾಪ್ಶನ್ ನೀಡಿದ್ದಾರೆ.

ಚಂದನ್​, ಕವಿತಾ

ಚಂದನ್​, ಕವಿತಾ

  • Share this:
ಕನ್ನಡದ ಕಿರುತೆರೆ ನಟ ಚಂದನ್ (Chandan) ಹಾಗೂ ಕವಿತಾ ಗೌಡ (Kavitha gowda) ಹೊಸ ಮನೆ ಖರೀದಿಸಿದ್ದಾರೆ. ಹೊಸ ಮನೆ (New House) ಯಲ್ಲಿ ಕವಿತಾ ಗೌಡ ಜೊತೆ ತೆಗೆದ ಫೋಟೋಗಳನ್ನು ಚಂದನ್ ಹಂಚಿಕೊಂಡಿದ್ದಾರೆ. ಹೊಸ ಮನೆ ಪ್ರತಿಯೊಬ್ಬರ ಕನಸಾಗಿರುತ್ತೆ. ಹಾಗೇ ಚಂದನ್ ಕೂಡ ತನ್ನ ದುಡಿಮೆ ಹಣದಿಂದ ಮನೆ ಖರೀದಿಸಿರೋ ಖುಷಿಯಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ."ಹೊಸ ಮನೆಯಲ್ಲಿ ಹೊಸ ಜೀವನ. ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಖರೀದಿ (Home Buying) ಮಾಡಿದ್ದೇನೆ" ಎಂದು ಕ್ಯಾಪ್ಶನ್ ನೀಡಿದ್ದಾರೆ. ಬಿಗ್ ಸ್ಕ್ರೀನ್ ಬಿಟ್ಟು ಇದೀಗ ಸೀರಿಯಲ್​ನಲ್ಲಿ ಚಂದನ್ ಬ್ಯುಸಿ ಆಗಿದ್ದಾರೆ. ಕವಿತಾ ಗೌಡ ಕೈಯಲ್ಲಿ ಸಿನಿಮಾಗಳಿದ್ದು, ಅವ್ರು ಸಹ ಶೂಟಿಂಗ್​ನಲ್ಲಿ ಬ್ಯುಸಿ ಹಾಗಿದ್ದಾರೆ.

ಚಂದನ್ ಹೊಸ ಮನೆ ಫೋಟೋ ಹೇಗಿದೆ?

'ರಾಧಾ ಕಲ್ಯಾಣ', 'ಲಕ್ಷ್ಮೀ ಬಾರಮ್ಮ', ಮರಳಿ ಮನಸಾಗಿದೆ’ ಧಾರಾವಾಹಿ ಖ್ಯಾತಿಯ ನಟ ಚಂದನ್​ ಹೊಸ ಮನೆ ಖರೀದಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಮನೆ ಖರೀದಿ ಮಾಡಿರುವ ವಿಷಯ ತಿಳಿಸಿದ್ದಾರೆ.

‘ಹೊಸ ಮನೆಯಲ್ಲಿ ಹೊಸ ಜೀವನ’

ಹೊಸ ಮನೆಯ ಬಾಲ್ಕನಿ ಫೋಟೋಗಳನ್ನು ಹಂಚಿಕೊಂಡಿರುವ ಚಂದನ್ ಕುಮಾರ್, "ಹೊಸ ಮನೆಯಲ್ಲಿ ಹೊಸ ಜೀವನ. ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಖರೀದಿ ಮಾಡಿದ್ದೇನೆ" ಎಂದು ಕ್ಯಾಪ್ಶನ್ ನೀಡಿದ್ದಾರೆ. ಅನೇಕರು ಚಂದನ್, ಕವಿತಾ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: Chandan-Kavitha Wedding: ಸರಳ ಸಮಾರಂಭದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟ ಸ್ಟಾರ್​ ಜೋಡಿ ಕವಿತಾ ಗೌಡ-ಚಂದನ್​ ಕುಮಾರ್​...!

ಚಂದನ್​ ಶೂಟಿಂಗ್​ನಲ್ಲಿ ಬ್ಯುಸಿ

ಕನ್ನಡದಲ್ಲಿ 'ಮರಳಿ ಮನಸಾಗಿದೆ' ಹಾಗೂ ತೆಲುಗಿನ ಶ್ರೀಮತಿ ಶ್ರೀನಿವಾಸ್ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. 2 ಧಾರಾವಾಹಿಗಳ ಶೂಟಿಂಗ್ ಜೊತೆಗೆ ಚಂದನ್ ಹೋಟೆಲ್ ಕೂಡ ನಡೆಸ್ತಿದ್ದಾರೆ. ಅಷ್ಟೆ ಅಲ್ಲದೇ ಅವರದೇ ಪ್ರೋಟೀನ್ ಅಂಗಡಿ ಕೂಡ ಇದೆ. ಸಿನಿಮಾ ಕೆಲಸ ಆರಂಭಿಸಿರುವ ಅವರು ಸಖತ್ ಬ್ಯುಸಿಯಾಗಿದ್ದಾರೆ. ಸಖತ್​ ಬ್ಯುಸಿ ಆಗಿರೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.

ಸಿನಿಮಾದಲ್ಲಿ ಕವಿತಾ ಗೌಡ ಬ್ಯುಸಿ

ಸದ್ಯ ಕವಿತಾ ಗೌಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು', 'ಗೋವಿಂದ ಗೋವಿಂದ' ಸಿನಿಮಾ ಇತ್ತೀಚೆಗೆ ರಿಲೀಸ್ ಆದರೂ ಯಶಸ್ಸು ಕಾಣಲಿಲ್ಲ. ಸದ್ಯ ಕವಿತಾ ಬೇರೆ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕವಿತಾ, ಚಂದನ್ ಆಗಾಗ ಸಿನಿಮಾ, ಧಾರಾವಾಹಿ, ಫಿಟ್‌ನೆಸ್ ಕುರಿತಂತೆ ಪೋಸ್ಟ್ ಮಾಡುತ್ತಿರುತ್ತಾರೆ.

ಕಳೆದ ವರ್ಷ ಪ್ರೀತಿಸಿ ವಿವಾಹವಾದ ಜೋಡಿ

ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ನಟ ಚಂದನ್ ಕುಮಾರ್ ಹಾಗು ಅದೇ ಧಾರಾವಾಹಿಯಲ್ಲಿ ಚಿನ್ನು ಪಾತ್ರ ನಿರ್ವಹಿಸಿದ ನಟಿ ಕವಿತಾ ಗೌಡ ಇಬ್ಬರೂ ಕರ್ನಾಟಕದ ಜನತೆಗೆ ಚಿರಪರಿಚಿತರು. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಂದು ಮತ್ತು ಲಚ್ಚಿ ಪಾತ್ರದಲ್ಲಿ ನಟಿಸಿ ಇಬ್ಬರು ಬಹಳ ಜನಪ್ರಿಯತೆ ಗಳಿಸಿದ್ದರು. ನಿಜ ಜೀವನದಲ್ಲೂ ಕೂಡ ಚಂದನ್ ಮತ್ತು ಕವಿತಾ ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಈ ಇಬ್ಬರು ಹಲವಾರು ಪಾರ್ಟಿಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ರು. ಸಹೋದ್ಯೋಗಿಗಳಾದ ಚಂದನ್ ಕವಿತಾ ನಡುವೆ ಬಹಳ ಒಳ್ಳೆಯ ಫ್ರೆಂಡ್ ಶಿಪ್ ಪ್ರೀತಿಯಾಗಿ ತಿರುಗಿತ್ತು.

ಇದನ್ನೂ ಓದಿ: Chandan-Kavitha Gowda: ನಿಶ್ಚಿತಾರ್ಥಕ್ಕೂ ಮೊದಲೇ ಫೋಟೋಶೂಟ್​ನಲ್ಲಿ ಮಿಂಚಿದ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾ-ಚಂದನ್​..!

ಸರಳವಾಗಿ ಮದುವೆಯಾದ ಚಂದು, ಕವಿತಾ

ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕವಿತಾ, ಚಂದನ್ ಅವರು ಕಳೆದ ವರ್ಷ ಸರಳವಾಗಿ ಮದುವೆಯಾದರು. ಕೊರೊನಾ ಕಾರಣದಿಂದ ಸಿಂಪಲ್​ ಆಗಿಯೇ ಮದುವೆ ನಡೆಯಿತು. ಮದುವೆಯಲ್ಲಿ ಸಂಬಂಧಿಕರು ಹಾಗೂ ಚಿತ್ರರಂಗದ ಕೆಲ ಆಪ್ತರಷ್ಟೆ ಭಾಗಿಯಾಗಿದ್ರು. ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಮಾಡಿಕೊಂಡಿಲ್ಲ. ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹಂಚಿಕೊಂಡಿದ್ರು. ಈ ಜೋಡಿಗೆ ಅವರ ಅಭಿಮಾನಿಗಳು, ಸ್ಯಾಂಡಲ್‌ವುಡ್, ಟಾಲಿವುಡ್ ಗಣ್ಯರು ಶುಭ ಹಾರೈಸಿದ್ದರು
Published by:Pavana HS
First published: