ನಾನು ಕೌಂಟರ್​ ಕೊಡಲ್ಲ, ನನ್ನ ತಂಟೆಗೂ ಯಾರೂ ಬರಬೇಡಿ; ಇದು ಡಿ-ಬಾಸ್​​ ವಾರ್ನಿಂಗ್​

ಬೇರೆ ಸ್ಟಾರ್​ಗಳಿಗೆ ಟಾಂಟ್​ ನೀಡುವ ಡೈಲಾಗ್​ ಬಳಕೆ ಮಾಡದಂತೆ ಸೂಚನೆ ನೀಡಿದ್ದರಂತೆ ಹೌದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ದರ್ಶನ್​, ಹೌದು, ಖಂಡಿತವಾಗಿಯೂ ನಾನು ಹೀಗೊಂದು ಸೂಚನೆಯನ್ನು ನೀಡಿದ್ದೇನೆ ಎಂದಿದ್ದಾರೆ.

Rajesh Duggumane | news18
Updated:February 20, 2019, 12:06 PM IST
ನಾನು ಕೌಂಟರ್​ ಕೊಡಲ್ಲ, ನನ್ನ ತಂಟೆಗೂ ಯಾರೂ ಬರಬೇಡಿ; ಇದು ಡಿ-ಬಾಸ್​​ ವಾರ್ನಿಂಗ್​
ಯಜಮಾನ ಸಿನಿಮಾದಲ್ಲಿ ದರ್ಶನ್​
  • News18
  • Last Updated: February 20, 2019, 12:06 PM IST
  • Share this:
‘ಚಾಲೆಂಜಿಂಗ್​ ಸ್ಟಾರ್’​ ದರ್ಶನ್​ ನಟನೆಯ ಸಿನಿಮಾಗಳು ಎಂದರೆ, ಅಲ್ಲಿ ಸಾಕಷ್ಟು ಆ್ಯಕ್ಷನ್​ಗಳಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯುವ ಮಾಸ್​ ಡೈಲಾಗ್​ಗಳಿರುತ್ತವೆ. ‘ಯಜಮಾನ’ ಚಿತ್ರದಲ್ಲೂ ಸಾಕಷ್ಟು ಪಂಚಿಂಗ್​ ಸಂಭಾಷಣೆಗಳಿವೆ ಎಂಬುದು ಟ್ರೈಲರ್​ನಲ್ಲೇ ಗೊತ್ತಾಗಿದೆ. ಡೈಲಾಗ್​ ವಿಚಾರಕ್ಕೆ ಸಂಬಂಧಿಸಿ ದರ್ಶನ್​, “ನಾನು ಕೌಂಟರ್​ ಕೊಡಲ್ಲ, ನನ್ನ ತಂಟೆಗೂ ಯಾರೂ ಬರಬೇಡಿ,” ಎಂದಿದ್ದಾರೆ.

ಅವರು ಹೀಗೆ ಹೇಳುವುದಕ್ಕೂ ಒಂದು ಕಾರಣವಿದೆ. ದರ್ಶನ್​ ಸಿನಿಮಾದಲ್ಲಿ ಬಳಕೆ ಮಾಡುವ ಡೈಲಾಗ್​ಗಳು ಕನ್ನಡ ಚಿತ್ರರಂಗದ ಕೆಲ ಸ್ಟಾರ್​​ಗಳಿಗೆ ನೀಡುವ ಕೌಂಟರ್​ ಎನ್ನುವ ಮಾತಿದೆ. ಸಾಕಷ್ಟು ಸಿನಿಮಾಗಳಲ್ಲಿ ಇದು ಪುನರಾವರ್ತನೆಗೊಂಡಿದೆ. ದರ್ಶನ್​ ಬಳಕೆ ಮಾಡಿದ ಡೈಲಾಗ್​​ಗೆ ಪ್ರತಿಯಾಗಿ ಬೇರೆ ಸ್ಟಾರ್​ಗಳು ಕೂಡ ಕೌಂಟರ್​ ನೀಡುತ್ತಿದ್ದಾರೆ. ಇದು ಹೀಗೆ ಸಾಗುತ್ತಲೇ ಇದೆ. ಇದಕ್ಕೆ ಬ್ರೇಕ್​ ಹಾಕಲು ದರ್ಶನ್​ ಮುಂದಾಗಿದ್ದಾರೆ.

ಬೇರೆ ಸ್ಟಾರ್​ಗಳಿಗೆ ಟಾಂಟ್​ ನೀಡುವ ಡೈಲಾಗ್​ ಬಳಕೆ ಮಾಡದಂತೆ ದರ್ಶನ್​ ಸೂಚನೆ ನೀಡಿದ್ದಾರೆ ಎನ್ನುವ ಮಾತಿದೆ ಹೌದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ದರ್ಶನ್​, “ಹೌದು, ಖಂಡಿತವಾಗಿಯೂ ನಾನು ಹೀಗೊಂದು ಸೂಚನೆಯನ್ನು ನೀಡಿದ್ದೇನೆ. ಈ ರೀತಿ ಕೌಂಟರ್​ ಏಕೆ ನೀಡಬೇಕು ಎಂಬುದು ನನ್ನ ಪ್ರಶ್ನೆ,” ಎನ್ನುತ್ತಾರೆ.

ಇದನ್ನೂ ಓದಿ: ‘ಯಜಮಾನ’ ಚಿತ್ರ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗುತ್ತಿರುವುದಕ್ಕೆ ಕಾರಣ ನೀಡಿದ ದರ್ಶನ್​

ಅವರು ಕಥೆ ಬರೆಯುವವರಿಗೂ ಹಿಗೊಂದು ಸೂಚನೆ ರವಾನಿಸಿದ್ದಾರೆ. “ಎಲ್ಲರ ಚಿತ್ರವನ್ನು ಎಲ್ಲರೂ ನೋಡುವುದಿಲ್ಲ. ಯಾವ ಸಿನಿಮಾದಲ್ಲಿ ಯಾವ ಡೈಲಾಗ್​ ಬಳಕೆಯಾಗಿದೆ ಎಂಬುದು ನಮಗೆ ಗೊತ್ತೇ ಇರುವುದಿಲ್ಲ. ನಮ್ಮ ಚಿತ್ರದಲ್ಲಿ ಬಳಕೆಯಾದ ಡೈಲಾಗ್​ ಬೇರೊಬ್ಬ ನಟನಿಗೆ ನೀಡಿದ ಕೌಂಟರ್​ ಎಂದು ತಡವಾಗಿ ಗೊತ್ತಾಗುತ್ತದೆ. ನನ್ನ ಸಿನಿಮಾದಲ್ಲಿ ಯಾವ ಸ್ಟಾರ್​ಗಳಿಗೂ ಕೌಂಟರ್​ ನೀಡುವ ಡೈಲಾಗ್​ ಬರೆಯಬೇಡಿ. ಒಂದೊಮ್ಮೆ ಅಂಥ ಸಂಭಾಷಣೆ ಇತ್ತು ಎಂದಾದರೆ ನಾನು ನಿಮ್ಮನ್ನು ಪ್ರಶ್ನಿಸುತ್ತೇನೆ ಎಂದು ನನ್ನ ಸಿನಿಮಾದ ಕಥೆ ಬರೆಯುವವರಿಗೆ ಎಚ್ಚರಿಕೆ ನೀಡಿದ್ದೇನೆ. ನನಗೆ ಯಾರಿಗೂ ಕೌಂಟರ್​ ನೀಡಬೇಕು ಎನ್ನುವ ಉದ್ದೇಶವಿಲ್ಲ,” ಎಂದು ದರ್ಶನ್​ ಸ್ಪಷ್ಟಪಡಿಸಿದ್ದಾರೆ.

ಮಾ.1ರಂದು ಬಿಡುಗಡೆ ಆಗುತ್ತಿರುವ 'ಯಜಮಾನ' ಚಿತ್ರದಲ್ಲಿ ದರ್ಶನ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್​ ಕಾಣಿಸಿಕೊಂಡಿದ್ದಾರೆ. ವಿ. ಹರಿಕೃಷ್ಣ ಹಾಗೂ ಪಿ. ಕುಮಾರ್​ ಚಿತ್ರದ ನಿರ್ದೇಶಕರು. ಶೈಲಜಾ ನಾಗ್​ ಹಾಗೂ ಬಿ. ಸುರೇಶ್​ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಒಬ್ಬರೇ ‘ಯಜಮಾನ’, ಅದು ಡಾ. ವಿಷ್ಣುದಾದ ಮಾತ್ರ: ನಟ ದರ್ಶನ್
First published:February 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading