'ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು': 'ರಾಬರ್ಟ್'​ ರಿ ಎಂಟ್ರಿಗೆ ಮುಹೂರ್ತ ಫಿಕ್ಸ್

'ಚೌಕ'ದಲ್ಲಿ ರಾಬರ್ಟ್​ ಲುಕ್​ನಲ್ಲಿ ವಿಶೇಷ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದರು.

zahir | news18
Updated:April 25, 2019, 9:53 PM IST
'ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು': 'ರಾಬರ್ಟ್'​ ರಿ ಎಂಟ್ರಿಗೆ ಮುಹೂರ್ತ ಫಿಕ್ಸ್
ದರ್ಶನ್
zahir | news18
Updated: April 25, 2019, 9:53 PM IST
ಜಬರ್​ದಸ್ತ್ ಟೈಟಲ್ ಮೂಲಕವೇ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ 'ರಾಬರ್ಟ್' ಚಿತ್ರದ​ ಮೊದಲ ಹಂತದ ತಯಾರಿಗಳು ಶುರುವಾಗಿದೆ. 'ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು' ಎನ್ನುವ ಪಂಚಿಂಗ್ ಲೈನ್‌ ಪೋಸ್ಟರ್ ನೋಡಿದ ಮೇಲಂತೂ ಡಿ ಫ್ಯಾನ್ಸ್ ಚಿತ್ರಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದರು. ಆದರೇನು, ಫಸ್ಟ್​ ಲುಕ್ ಬಂದ ಬಳಿಕ ಚಿತ್ರದ ಕುರಿತಾದ ಯಾವುದೇ ಅಪ್​ಡೇಟ್​ಗಳು ಹೊರ ಬರಲೇ ಇಲ್ಲ.

'ರಾಬರ್ಟ್'​ ಅವತಾರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆ ಪಕ್ಷ ಚಿತ್ರ ಸೆಟ್ಟೇರಿದರೆ ಸಾಕು ಎಂಬಂತಾಗಿತ್ತು. ಏಕೆಂದರೆ ಚಿತ್ರವನ್ನು ಪ್ರಾರಂಭಿಸಿದ್ರೆ ಡಿ ಬಾಸ್ ಫಟಾಫಟ್ ಸಿನಿಮಾ ಮುಗಿಸಿ ಅಭಿಮಾನಿಗಳ ಮುಂದಿಡುವುದು ವಾಡಿಕೆ. ಇದೀಗ ಫ್ಯಾನ್​ಗಳ ಕಾತುರತೆ ಇತಿಶ್ರೀ ಹಾಡಲು 'ದಾಸ' ತೀರ್ಮಾನಿಸಿದ್ದಾರೆ.

ಚಿತ್ರವನ್ನು ಶೀಘ್ರದಲ್ಲೇ ಆರಂಭಿಸಲು ಯೋಜನೆ ಹಾಕಿಕೊಂಡಿರುವ ಚಿತ್ರತಂಡ ಮೇ-6 ರಂದು ಮುಹೂರ್ತ ಫಿಕ್ಸ್​ ಮಾಡಿದ್ದಾರೆ. ಮೊದಲ ಹಂತದ ಶೆಡ್ಯೂಲ್ ಬೆಂಗಳೂರಿನ ಸುತ್ತ ಮುತ್ತ ಇರಲಿದ್ದು, ಬಳಿಕ ಹೊರ ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ. ಈ ಚಿತ್ರವನ್ನು 'ಚೌಕ' ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ನಿರ್ದೇಶಿಸಲಿದ್ದು, ಉಮಾಪತಿಯವರು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

'ಚೌಕ'ದಲ್ಲಿ ರಾಬರ್ಟ್​ ಲುಕ್​ನಲ್ಲಿ ವಿಶೇಷ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದರು. ಕೆಲ ನಿಮಿಷಗಳ ಪಾತ್ರವಾಗಿದ್ದರೂ, 'ರಾಬರ್ಟ್'​ನ ಖಡಕ್ ಡೈಲಾಗ್, ಫೈಟ್​ಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಗಿತ್ತು. ಇದೀಗ ಅದೇ ಪಾತ್ರದಲ್ಲಿ ಡಿ ಬಾಸ್ ರಿ ಎಂಟ್ರಿ ಕೊಡುತ್ತಿರುವುದರಿಂದ ಚಿತ್ರದ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಹೀಗಾಗಿಯೇ ದರ್ಶನ್​ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ತರುಣ್ ಸುಧೀರ್ ಸಹ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಡಿ ಬಾಸ್​ ಅನ್ನು ಅಭಿಮಾನಿಗಳ ಮುಂದಿಡಲು ಪಣ ತೊಟ್ಟಿದ್ದಾರೆ.

ಒಟ್ಟಿನಲ್ಲಿ 'ರಾಬರ್ಟ್'​​ನ ರಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಅಭಿಮಾನಿಗಳು ಕಾಯಬೇಕಿರುವುದು ತೆರೆ ಮೇಲೆಯ ರಾಬರ್ಟ್​ ರೌದ್ರನರ್ತನಕ್ಕೆ ಮಾತ್ರ.

ಇದನ್ನೂ ಓದಿ: VIDEO: ಬಾಲ್ ಎಲ್ಲಿದ್ದೀಯಪ್ಪಾ? ಪಂದ್ಯದ ವೇಳೆ ಚೆಂಡಿಗಾಗಿ ಹುಡುಕಾಡಿದ ಪಂಜಾಬ್ ಆಟಗಾರರು
First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ