ತಮಿಳು ಬಿಗ್ ​ಬಾಸ್ ಮನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಾಯಕಿ..!

ಈ ಕನ್ನಡತಿ ಬಳಿಕ ಅಭಿಮಾನಿಗಳ ದಾಸನ 25ನೇ ಚಿತ್ರ ಭೂಪತಿಯಲ್ಲೂ ಡಿ ಬಾಸ್ ಜೊತೆಯಾಗಿದ್ದರು. ಈ ಬಳಿಕ ಎಕೆ-56 ಎಂಬ ಸ್ಯಾಂಡಲ್​ವುಡ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

zahir | news18
Updated:June 27, 2019, 8:32 PM IST
ತಮಿಳು ಬಿಗ್ ​ಬಾಸ್ ಮನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಾಯಕಿ..!
ದರ್ಶನ್
  • News18
  • Last Updated: June 27, 2019, 8:32 PM IST
  • Share this:
ತಮಿಳು ಬಿಗ್ ಬಾಸ್ ಸೀಸನ್ 3 ಆರಂಭವಾಗಿದೆ. ಖ್ಯಾತ ನಟ ಕಮಲ್ ಹಾಸನ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ರಿಯಾಲಿಟಿ ಶೋನಲ್ಲಿ 15 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ಇಬ್ಬರು ನಟಿಯರು ಕನ್ನಡಿಗರಿಗೆ ಚಿರಪರಿಚಿತ ಮುಖಗಳು. ಅದರಲ್ಲೂ ಒಬ್ಬರು ಕನ್ನಡತಿ ಎಂಬುದೇ ವಿಶೇಷ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಚಿತ್ರಗಳ ನಾಯಕಿಯಾಗಿದ್ದ ಶೆರಿನ್ ಶೃಂಗಾರ್ ಈ ಬಾರಿಯ ತಮಿಳು ಬಿಗ್​ ಬಾಸ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹಾಗೆಯೇ ನವರಸ ನಾಯಕ ಜಗ್ಗೇಶ್ ಸಿನಿಮಾದಲ್ಲಿ ಅಭಿನಯಿಸಿದ ನಟಿಯೊಬ್ಬರೂ ಕೂಡ ವಿವಾದಾತ್ಮಕ ರಿಯಾಲಿಟಿ ಶೋನ ಭಾಗವಾಗಿದ್ದಾರೆ.

ಶೆರಿನ್


ಸ್ಯಾಂಡಲ್​ವುಡ್ ನಯ 'ಯಜಮಾನ' ದಾಸ ದರ್ಶನ್ ಅಭಿನಯದ 'ಧ್ರುವ' ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ್ದ ಶೆರಿನ್, ಬಳಿಕ ಕಾಲಿವುಡ್, ಟಾಲಿವುಡ್​ನತ್ತ ಮುಖ ಮಾಡಿದ್ದರು. ಪರ ಭಾಷೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಈ ಕನ್ನಡತಿ ಬಳಿಕ ಅಭಿಮಾನಿಗಳ ದಾಸನ 25ನೇ ಚಿತ್ರ 'ಭೂಪತಿ'ಯಲ್ಲೂ ಡಿ ಬಾಸ್ ಜೊತೆಯಾಗಿದ್ದರು. ಈ ಬಳಿಕ 'ಎಕೆ-56' ಎಂಬ ಸ್ಯಾಂಡಲ್​ವುಡ್​ ಸಿನಿಮಾದಲ್ಲಿ ಕಾಣಿಸಿದ್ದ ಶೆರಿನ್ ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.

ಶೆರಿನ್


ಅತ್ತ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬ್ಯುಸಿಯಾಗಿದ್ದ ಬೆಂಗಳೂರು ಮೂಲದ ಶೆರಿನ್ ಇದೀಗ ಬಿಗ್ ಬಾಸ್-3 ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಹಾಗೆಯೇ ಜಗ್ಗೇಶ್ ಜೊತೆ 'ಸಾಫ್ಟ್​ ವೇರ್ ಗಂಡ' ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡ ಸಾಕ್ಷಿ ಅಗರ್​ವಾಲ್​ ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಸಾಕ್ಷಿ ಅಗರ್​ವಾಲ್
ಇನ್ನುಳಿದಂತೆ ಈ ಬಾರಿಯ ತಮಿಳು ಬಿಗ್​ಬಾಸ್​ನಲ್ಲಿ ಅಭಿರಾಮಿ ವೆಂಕಟಾಚಲಂ(ನಟಿ), ಚೇರನ್( ನಿರ್ದೇಶಕ), ಸರವಣನ್ (ನಟ), ಫಾತಿಮಾ ಬಾನು( ನಟಿ, ನಿರೂಪಕಿ), ತರ್ಷನ್ (ಮಾಡೆಲ್) , ಸ್ಯಾಂಡಿ (ನೃತ್ಯ ನಿರ್ದೇಶಕ), ಮುಗೆನ್ ರಾವ್ (ಗಾಯಕ), ರೇಷ್ಮಾ (ಕಿರುತೆರೆ ನಟಿ), ಲೋಸ್ಲಿಯಾ (ಶ್ರೀಲಂಕಾ ಮಾಡೆಲ್), ಮಧುಮಿತಾ (ನಟಿ), ಕೆವಿನ್ (ನಟ), ವನಿತಾ ವಿಜಯ್ ಕುಮಾರ್ (ನಟಿ), ಮೋಹನ್ ವೈಥ್ಯ (ವಯೋಲಿಸ್ಟ್​) ಕಾಣಿಸಿಕೊಂಡಿದ್ದಾರೆ.
First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ