ದರ್ಶನ್​ ಕೋರಿಕೆ ಈಡೇರಿಸಿದ ಅಭಿಮಾನಿಗಳು; ಕೇಕ್​ ಬದಲು ಅಕ್ಕಿ-ಬೇಳೆ ಉಡುಗೊರೆ

ಸರಳ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವಂತೆ ದರ್ಶನ್ ಕೋರಿದ ಬೆನ್ನಲ್ಲೇ ಎಲ್ಲ ಅಭಿಮಾನಿಗಳು ಇದಕ್ಕೆ ತಲೆ ಬಾಗುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ಅವರ ಜನ್ಮದಿನದ ಪ್ರಯುಕ್ತ ಆಹಾರ ಪದಾರ್ಥಗಳನ್ನು ತಂದು ಅದನ್ನು ಸಿದ್ದಗಂಗಾ ಮಠ ಹಾಗೂ ಅನಾಥಾಶ್ರಮಕ್ಕೆ ತಲುಪಿಸಿ ಎಂದು ಅನೇಕರು ಕೇಳಿಕೊಂಡಿದ್ದರು. ಇದಕ್ಕೆ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.

Rajesh Duggumane | news18
Updated:February 14, 2019, 4:47 PM IST
ದರ್ಶನ್​ ಕೋರಿಕೆ ಈಡೇರಿಸಿದ ಅಭಿಮಾನಿಗಳು; ಕೇಕ್​ ಬದಲು ಅಕ್ಕಿ-ಬೇಳೆ ಉಡುಗೊರೆ
ನಟ ದರ್ಶನ್​
Rajesh Duggumane | news18
Updated: February 14, 2019, 4:47 PM IST
ಅಂಬರೀಶ್ ನಿಧನ ಹಿನ್ನೆಲೆಯಲ್ಲಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಸರಳ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಂದಾಗಿರುವುದು ಗೊತ್ತೇ ಇದೆ. ಅವರ ಜನ್ಮದಿನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಅವರು ಕೇಕ್​ ಕತ್ತರಿಸುವುದು ಬೇಡ ಎಂದು ಹೇಳಿದ್ದರು. ಅಭಿಮಾನಿಗಳು ಇದನ್ನು ಶಿರಸಾ ಪಾಲಿಸಿದ್ದಾರೆ.

ಸರಳ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವಂತೆ ದರ್ಶನ್ ಕೋರಿದ ಬೆನ್ನಲ್ಲೇ ಎಲ್ಲ ಅಭಿಮಾನಿಗಳು ಇದಕ್ಕೆ ತಲೆ ಬಾಗುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ಅವರ ಜನ್ಮದಿನದ ಪ್ರಯುಕ್ತ ಆಹಾರ ಪದಾರ್ಥಗಳನ್ನು ತಂದು ಕೊಡುತ್ತೇವೆ. ಅದನ್ನು ಸಿದ್ದಗಂಗಾ ಮಠ ಹಾಗೂ ಅನಾಥಾಶ್ರಮಕ್ಕೆ ತಲುಪಿಸಿ ಎಂದು ಅನೇಕರು ಕೇಳಿಕೊಂಡಿದ್ದರು. ಇದಕ್ಕೆ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.

ದರ್ಶನ್ ಹುಟ್ಟುಹಬ್ಬಕೆ ಅಭಿಮಾನಿಗಳಿಂದ ಅಕ್ಕಿ ಬೇಳೆ ಉಡುಗೊರೆಯಾಗಿ ದೊರೆತಿದೆ. ಡಿ ಬಾಸ್ ಕೋರಿಕೆ ಮೇರಿಗೆ ಅವರ ಹುಟ್ಟು ಹಬ್ಬಕ್ಕೆ ನಾನಾ ಜಿಲ್ಲೆಗಳಲ್ಲಿರುವ ಅಭಿಮಾನಿಗಳು ಮೂಟೆ ಮೂಟೆ ಅಕ್ಕಿ ಬೇಳೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ದರ್ಶನ್​ ಮನೆಯ ಉಗ್ರಾಣದಲ್ಲಿ ರಾಶಿ ರಾಶಿ ಅಕ್ಕಿ ಸಂಗ್ರಹ ಮಾಡಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದರ್ಶನ್​ ಪತ್ರವೊಂದನ್ನು ಬರೆದಿದ್ದಾರೆ. “ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ, ಅದನ್ನು ಸಿದ್ದಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷ ತಂದಿದೆ,” ಎಂದಿದ್ದಾರೆ.

ಇದನ್ನೂ ಓದಿ: ದರ್ಶನ್​ ಜನ್ಮದಿನಕ್ಕೆ ಸಿಗಲಿದೆ ವಿಶೇಷ ಉಡುಗೊರೆ! ಯಾರಿಂದ ಗೊತ್ತಾ?

ವಿಶೇಷ ಎಂದರೆ ಈ ವಸ್ತುಗಳನ್ನು ಸ್ವತಃ ಅವರೇ ಜವಾಬ್ದಾರಿ ಹೊತ್ತು ಅನಾಥಾಶ್ರಮ ಹಾಗೂ ಸಿದ್ದಗಂಗಾ ಮಠಕ್ಕೆ ತಲುಪಿಸಲಿದ್ದಾರಂತೆ. “ನನ್ನ ಹುಟ್ಟು ಹಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯ ಒಂದು ಅನಾಥಾಶ್ರಮಕ್ಕೆ, ಒಂದು ವೃದ್ಧಾಶ್ರಮಕ್ಕೆ ಹಾಗೂ ಸಿದ್ದಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದು ಕೊಳ್ಳುತ್ತೇನೆ,” ಎಂದು ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ದರ್ಶನ್ ಅರಣ್ಯ ಬಗ್ಗೆ ಹಾಗೂ ಸಮಾಜದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಹಾಗಾಗಿ, ಆಹಾರ ಪದಾರ್ಥ ತರುವಾಗ ಆದಷ್ಟು ಬಟ್ಟೆ ಬ್ಯಾಗ್ ಬಳಸುವಂತೆ ಕೋರಿದ್ದಾರೆ. ಈ ಮೂಲಕ ಅವರು ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
Loading...

ಇದನ್ನೂ ಓದಿ: ಅಂಬಿ ನಿಧನ ಹಿನ್ನೆಲೆ; ಸರಳ ಹುಟ್ಟುಹಬ್ಬ ಆಚರಣೆಗೆ 'ಚಾಲೆಂಜಿಂಗ್​ ಸ್ಟಾರ್​​' ದರ್ಶನ್​ ಮನವಿ

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...