ಬೆಂಗಳೂರು(ಜು.14): ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ತಿ ಪತ್ರಗಳ ನಕಲು ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ದಿಕ್ಕು ಕಾಣದೇ ಕೇಸ್ ತನಿಖೆ ಸಾಗ್ತಿದೆ. ಪ್ರಕರಣ ದಾಖಲಾಗಿ ಹತ್ತು ದಿನ ಆದ್ರೂ ಕೂಡ ಕೇಸ್ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಯಾರನ್ನು ವಿಚಾರಣೆ ಮಾಡಬೇಕು ಎನ್ನುವ ಗೊಂದಲದಲ್ಲಿ ಪೊಲೀಸರು ಇದ್ದಾರೆ. ಈಗಾಗಲೇ ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅರುಣಾ ಕುಮಾರಿಯನ್ನು ಮಾತ್ರ ಇದುವರೆಗೂ ವಿಚಾರಣೆ ಮಾಡಲಾಗಿದೆ. ಆರೋಪದಂತೆ ನಂದೀಶ್ ಹಾಗೂ ಮಧುಕೇಶವ ವಿಚಾರಣೆ ಇನ್ನೂ ಆಗಿಲ್ಲ. ಪೊಲೀಸರು ಅರುಣಾ ಕುಮಾರಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ವಾಪಸ್ಸ್ ಕಳಿಸಿದ್ದಾರೆ. ಆರೋಪಿ ಅರುಣಾ ಈಗ ಉಮಾಪತಿ ಮೇಲೆ ಬೊಟ್ಟು ಮಾಡಿದ್ದಾಳೆ.
ಮೈಸೂರು ಹೆಬ್ಬಾಳ ಠಾಣೆಯಲ್ಲಿ ಉಮಾಪತಿಯ ವಿಚಾರಣೆ ಮಾಡಿಲ್ಲ. ಈ ನಡುವೆ ದರ್ಶನ್ ಹಾಗೂ ಉಮಾಪತಿ ಸಂಧಾನವಾಗಿದೆ ಅನ್ನೋ ಮಾತುಗಳು ಕೇಳಿಬರ್ತಿದೆ. ಸದ್ಯ ಕೇಸ್ ನಲ್ಲಿ ಅರುಣಾ, ಮಧುಕೇಶವ್ ಮತ್ತು ನಂದೀಶ್ ಆರೋಪಿಗಳು ಎನ್ನಲಾಗಿದೆ. ಅವರ ಹಿಂದಿರುವ ವ್ಯಕ್ತಿ ಅಂದ್ರೆ ಉಮಾಪತಿ ಅಂತಿದ್ದಾರೆ ಅರುಣಾ. ಸದ್ಯ ಪೊಲೀಸರು ಉಮಾಪತಿಗೆ ನೊಟೀಸ್ ಕೊಟ್ಟು ವಿಚಾರಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ
ಅರುಣಾ ಕುಮಾರಿ ವಿರುದ್ದ ವಂಚನೆ ಯತ್ನ, ಸುಲಿಗೆ ಯತ್ನ ಕೇಸ್ ದಾಖಲಾಗಿದೆ. ಈ ಎರಡು ವಿಚಾರದ ಮೇಲೆ ಪೊಲೀಸರ ತನಿಖೆ ಮುಂದುವರೆದಿದೆ. ಆದರೆ ಇದಕ್ಕೆ ನೇರವಾದ ಸಾಕ್ಷಿಗಳು ಲಭ್ಯವಿಲ್ಲ. ಹರ್ಷಾ ಮೆಲಂಟಾ ಹೇಳಿಕೆಯನ್ನು ಮಾತ್ರ ಸದ್ಯ ನೀಡಲಾಗಿದೆ. ಸಾಂದರ್ಭಿಕ ಸಾಕ್ಷಿಗಳ ಮೇಲೆ ಕೇಸ್ ನಿಲ್ಲಿಸೋಕೆ ಕಷ್ಟ. ಕಾರಣ ಇಲ್ಲಿ ಅರುಣಾ ಹಿಂದೆ ಇರೋ ವ್ಯಕ್ತಿ ಮುಖ್ಯ. ಅಲ್ಲದೇ ಆಕೆಯ ಬಳಿ ಯಾವುದೇ ದಾಖಲೆ ಪೊಲೀಸರಿಗೆ ಸಿಕ್ಕಿಲ್ಲ ಆಕೆಯ ಮನೆಯನ್ನು ಸಹ ಪೊಲೀಸ್ರು ಪರಿಶೀಲನೆ ಮಾಡಿಲ್ಲ. 3 ದಿನಗಳ ಅಂತರದಲ್ಲಿ ಸಾಕ್ಷಿಗಳು ನಾಶವಾಗಿರುವ ಸಾಧ್ಯತೆ ಇದೆ. ಇನ್ನೂ ನಕಲಿ ಐಡಿ ಸೃಷ್ಟಿಯ ಬಗ್ಗೆ ಬ್ಯಾಂಕ್ ತಲೆಕೆಡಿಸಿಕೊಂಡಿಲ್ಲ. ಅವರು ದೂರು ನೀಡಲು ಸಹ ಮುಂದೆ ಬಂದಿಲ್ಲ
ಸದ್ಯ ಕೇಸ್ ತನಿಖೆ ಮುಂದುವರೆಯುತ್ತಾ ಅನ್ನೋದೇ ಅನುಮಾನವಾಗಿದೆ. ಹರ್ಷಾ ಮೆಲಂಟಾ ಕೇಸ್ ವಾಪಸ್ಸು ಪಡೆಯುತ್ತಾರಾ.? ಇಲ್ಲಾ ಅಗತ್ಯ ಸಾಕ್ಷಿಗಳ ಪೊಲೀಸ್ರಿಗೆ ಕೊಡ್ತಾರಾ.? ಈ ಕೇಸ್ ತನಿಖೆ ಮುಂದುವರಿಕೆಗೆ ಮನಸ್ಸು ಮಾಡ್ತಾರಾ..? ಅರುಣಾ ಉಮಾಪತಿ ಹೇಳಿದ್ದಕ್ಕೆ ಮಾಡಿದ್ರೂ ಮುಂದಾಗ್ತಾರಾ.? ದರ್ಶನ್ ಸಂಧಾನ ಮಾಡಿದ ಬಳಿಕವೂ ಮುಂದುವರೆಯುತ್ತಾ.? ಎಂಬ ಅನುಮಾನಗಳಿದ್ದು, ಸದ್ಯ ಈಗ ಎಲ್ಲರ ಚಿತ್ತ ಮೈಸೂರು ಹೆಬ್ಬಾಳ ಠಾಣೆ ಪೊಲೀಸರತ್ತ ನೆಟ್ಟಿದೆ.
ಇದನ್ನೂ ಓದಿ:Sumalatha: ಮುಂದುವರೆದ ಕೆಆರ್ಎಸ್ ಕಲಹ; ಸಿಬಿಐ ತನಿಖೆಯಾಗಲಿ- ಸುಮಲತಾ ಆಗ್ರಹ
ಅರುಣಾ ಕುಮಾರಿ ಐಡಿ ಕಾರ್ಡ್ ಫೇಕ್
ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಆರೋಪಿ ಅರುಣಾ ಕುಮಾರಿ ಐಡಿ ಕಾರ್ಡ್ ಫೇಕ್ ಎಂಬುದಾಗಿ ತಿಳಿದು ಬಂದಿದೆ. ಕೆನರಾ ಬ್ಯಾಂಕ್ ನಲ್ಲಿ ಡೆಸಿಗ್ನೇಶನ್ ಹಾಕಲ್ಲ. ಜೊತೆಗೆ ಏರಿಯಾ ಬ್ರಾಂಚ್ ಮ್ಯಾನೇಜರ್ ಅನ್ನೋ ಡೆಸಿಗ್ನೇಷನೇ ಇರಲ್ಲ. ಡೇಟ್ ಆಫ್ ಬರ್ಥ್ ಐಡಿ ಕಾರ್ಡ್ ನಲ್ಲಿ ಹಾಕಲ್ಲ. ಐಡಿ ಕಾರ್ಡ್ ನಲ್ಲಿ ಕಾಂಟ್ಯಾಕ್ಟ್ ನಂಬರ್ ಹಾಕಲ್ಲ. ಜೊತೆಗೆ ಐಡಿ ಕಾರ್ಡ್ ನಲ್ಲಿ ಎಂಪ್ಲಾಯ್ ಐಡಿ ಇಲ್ಲ. ಬರೀ ಕಾರ್ಡ್ ನಂಬರ್ ಮಾತ್ರ ಹಾಕಿದ್ದಾರೆ. ಇದು ಫೇಕ್ ಐಡಿ ಎಂದು ಕೆನರಾ ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಲಭಿಸಿದೆ.
ಅರುಣಾನೇ ಸ್ವತಃ ನಕಲಿ ಐಡಿ ಸೃಷ್ಟಿಸಿರೋ ಸಾಧ್ಯತೆ ಇದೆ. ಗೂಗಲ್ ನಲ್ಲಿ ಬರುವ ಐಡಿ ಕಾರ್ಡ್ ರೀತಿಯಲ್ಲಿ ಸೃಷ್ಟಿ ಮಾಡಿದ್ದಾರೆ. ಗೂಗಲ್ ನಲ್ಲಿ ಬರುವ ಕಾರ್ಡ್ ನಂಬರ್ ಅನ್ನೇ ಬಳಸಿ ಕ್ರಿಯೇಟ್ ಮಾಡಿದ್ದಾರೆ. ಗೂಗಲ್ನಲ್ಲಿ ಕೆ ಶಿವಪ್ರಸಾದ್ ಅನ್ನೋರ ಐಡಿ ಬರುತ್ತೆ ಅದರ ಕಾರ್ಡ್ ನಂಬರ್ 41786 ಇದೆ. ಅದೇ ನಂಬರ್ನ್ನು ತನ್ನ ಕಾರ್ಡ್ ನಂಬರ್ ಮಾಡಿಕೊಂಡಿದ್ದಾಳೆ.
ಇನ್ನು, ನಟ ದರ್ಶನ್ ನಿವಾಸಕ್ಕೆ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಭೇಟಿ ನೀಡಿದ್ದಾರೆ. ಆರ್ ಆರ್ ನಗರದ ದರ್ಶನ್ ನಿವಾಸಕ್ಕೆ ಬಂದ ಶೈಲಜಾ ನಾಗ್ ಚರ್ಚೆ ನಡೆಸ್ತಿದ್ದಾರೆ. ದರ್ಶನ್ ಮುಂದಿನ ಸಿನಿಮಾ ಕೆಲಸದ ಬಗ್ಗೆ ಮಾತುಕತೆ ನಡೆಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ವಂಚನೆ ಆರೋಪ ಪ್ರಕರಣದಿಂದ ನಟ ದರ್ಶನ್ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ