ಜೂನಿಯರ್ ಕ್ರೇಜಿಸ್ಟಾರ್ ತ್ರಿವಿಕ್ರಮನಿಗೆ ಚಾಲೆಂಜಿಂಗ್ ಸ್ಟಾರ್ ಸಾಥ್

ರೋಸ್ ಮತ್ತು ಮಾಸ್ ಲೀಡರ್​ನಂತಹ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾಮೂರ್ತಿ ಜೂನಿಯರ್ ಕ್ರೇಜಿಸ್ಟಾರ್​ರನ್ನು ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

zahir | news18-kannada
Updated:August 8, 2019, 9:02 PM IST
ಜೂನಿಯರ್ ಕ್ರೇಜಿಸ್ಟಾರ್ ತ್ರಿವಿಕ್ರಮನಿಗೆ ಚಾಲೆಂಜಿಂಗ್ ಸ್ಟಾರ್ ಸಾಥ್
ವಿಕ್ರಂ ರವಿಚಂದ್ರನ್ ಪಾದರ್ಪಣೆ ಚಿತ್ರ ಎನ್ನಲಾಗಿದ್ದ ಈ ಸಿನಿಮಾ ಅದೇಕೋ ನಿಂತು ಹೋಯಿತು ಗೊತ್ತಿಲ್ಲ. ಆದರೆ ಇದೀಗ ಅದೇ ನವೆಂಬರ್ ಕಥೆಯ ಚಿತ್ರ ತಮಿಳಿನಲ್ಲಿ ಬರಲಿದೆ.
  • Share this:
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಂ ಹೀರೋ ಆಗುತ್ತಿದ್ದಾರೆಂಬ ಸುದ್ದಿ ವರ್ಷಗಳ ಹಿಂದೆಯೇ ಕೇಳಿ ಬಂದಿತ್ತು. ಈ ಸುದ್ದಿಯ ಬೆನ್ನಲ್ಲೇ ನಿರ್ದೇಶಕ ನಾಗಶೇಖರ್ 'ನವೆಂಬರ್​ನಲ್ಲಿ ನಾನು ಅವಳು' ಚಿತ್ರಕ್ಕೆ ವಿಕ್ರಂ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿತ್ತು. ಇದಾದ ಬಳಿಕ ನವೆಂಬರ್​ ಉರುಳಿದರೂ ವಿಕ್ರಂ ಎಂಟ್ರಿಯ ಸುಳಿವೇ ಇರಲಿಲ್ಲ.ಆದರೀಗ ಮತ್ತೆ 'ಜೂನಿಯರ್ ಕ್ರೇಜಿಸ್ಟಾರ್'​ಗಾಗಿ ವೇದಿಕೆ ಸಿದ್ದವಾಗಿದೆ. ಈಗಾಗಲೇ ಚಿತ್ರಕ್ಕೆ 'ತ್ರಿವಿಕ್ರಮ' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಫಸ್ಟ್​ಲುಕ್ ಕೂಡ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇನ್ನು ವರಮಹಾಲಕ್ಷ್ಮಿ ಹಬ್ಬದಂದು ವಿಕ್ರಂ ಅಭಿನಯಿಸಲಿರುವ ಚೊಚ್ಚಲ ಚಿತ್ರ 'ತ್ರಿವಿಕ್ರಮ'ನಿಗೆ ಮುಹೂರ್ತ ನಡೆಯಲಿದೆ.ತ್ರಿವಿಕ್ರಮ ಫಸ್ಟ್​ಲುಕ್'ರೋಸ್' ಮತ್ತು 'ಮಾಸ್ ಲೀಡರ್'​ನಂತಹ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾಮೂರ್ತಿ ಜೂನಿಯರ್ ಕ್ರೇಜಿಸ್ಟಾರ್​ರನ್ನು ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲೇ ವಿಕ್ರಂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಇರಾದೆಯಲ್ಲಿದ್ದು, ಒಂದು ಮೂಲಗಳ ಪ್ರಕಾರ ಜೂ.ಕ್ರೇಜಿಸ್ಟಾರ್ ಇಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗನಾಗಿ ಬಣ್ಣ ಹಚ್ಚಲಿದ್ದಾರೆ. ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಈಗಾಗಲೇ ಆಕಾಂಕ್ಷ ಮತ್ತು ಅಕ್ಷರಾ ಗೌಡ ಪ್ರೀತಿ-ಪ್ರೇಮದ ಪಾತ್ರಕ್ಕಾಗಿ ಸಕಲ ಸಿದ್ಧತೆಯಲ್ಲಿದ್ದಾರೆ.ವರಮಹಾಲಕ್ಷ್ಮೀ ಹಬ್ಬದಂದು ಸೆಟ್ಟೇರಲಿರುವ ಚಿತ್ರದ ಮೊದಲ ಹಂತ ಶೂಟಿಂಗ್​ ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಅಂದರೆ ಶನಿವಾರ 'ತ್ರಿವಿಕ್ರಮ'ನ ಮೊದಲ ಟೀಸರ್ ಹೋರ ಬರಲಿದೆ. ಅಂದಹಾಗೆ ಈ ಟೀಸರ್ ಬಿಡುಗಡೆ ಮಾಡುತ್ತಿರುವುದು ಮತ್ಯಾರು ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಕ್ರೇಜಿಸ್ಟಾರ್ ಕುಟುಂಬದ ಆಪ್ತರಲ್ಲಿ ಒಬ್ಬರಾಗಿರುವ ಅಭಿಮಾನಿಗಳ ದಾಸ ದರ್ಶನ್ ವಿಕ್ರಂ ಮೊದಲ ಚಿತ್ರದ ಟೀಸರ್ ಬಿಡುಗಡೆ ಮಾಡಲು ಓಕೆ ಅಂದಿದ್ದಾರೆ. ಹೀಗಾಗಿ ಬಾಕ್ಸಾಫೀಸ್ ಸುಲ್ತಾನನ ಆಶೀರ್ವಾದದೊಂದಿಗೆ ವಿಕ್ರಂ ಮತ್ತೊಮ್ಮೆ ಟೀಸರ್​ನಲ್ಲಿ ಕಾಣಿಸಲಿದ್ದಾರೆ. ಒಟ್ಟಿನಲ್ಲಿ ವರ್ಷಗಳಿಂದ ಸುದ್ದಿಯಲ್ಲಿರುವ ವಿಕ್ರಂ 'ತ್ರಿವಿಕ್ರಮ'ನಾಗಿ ಕೊನೆಗೂ ಹೊಸ ಇನಿಂಗ್ಸ್ ಆರಂಭಿಸುತ್ತಿರುವುದು ಕ್ರೇಜಿಸ್ಟಾರ್ ಅಭಿಮಾನಿಗಳ ಪಾಲಿಗೆ ಸಂತಸವನ್ನುಂಟು ಮಾಡಿದೆ.

ಇದನ್ನೂ ಓದಿ: ಮಾನವೀಯತೆ ಮೆರೆದ ಉಪ್ಪಿ-ಶ್ರೀಮುರಳಿ: ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ
First published:August 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading